-ಒಂದು ರೂಪಾಯಲ್ಲಿ ಮದುವೆ..!
– ವಿಕಲಚೇತನರಿಗೆ ನೆರವಾಗುವ ಅಮ್ಮ ಫೌಂಡೇಶನ್
– 15 ವರ್ಷಗಳಲ್ಲಿ 100ಕ್ಕೂ ಹೆಚ್ಚು ವಿಕಲಚೇತನರ ಮದುವೆಗೆ ಸಹಕರಿಸಿದ ಸಂಸ್ಥೆ
NAMMUR EXPRESS NEWS
ತೆಲಂಗಾಣ: ಮದುವೆಯೆಂಬುದು ವಧು-ವರರ ಪರಿವಾರಗಳಿಗೆ ಆರ್ಥಿಕ ಹೊರೆಯಾಗಿರುವ ಕಾಲದಲ್ಲಿ ವಿಕಲಚೇತನರಿಗೆ ಒಂದು ರೂಪಾಯಿಯಲ್ಲಿ ಮದುವೆ ಮಾಡಿಸುವ ಕೆಲಸವನ್ನು ತೆಲಂಗಾಣದ ಅಮ್ಮ ಫೌಂಡೇಶನ್ನ ನಿರ್ವಾಹಕರಾದ ನಾಗಮಲ್ಲ ಅನಿಲ್ಕುಮಾರ್ ಮತ್ತು ಅರುಣಾ ಮಾಡುತ್ತಿದ್ದಾರೆ. ಇದು ಕೇವಲ ವಿಕಲಚೇತನರಿಗೆ ಅನ್ವಯಿಸಿದ್ದು, ಒಂದು ರೂಪಾಯಿ ನೋಂದಣಿ ಮಾಡಿಸಿ ಉಚಿತ ಮದುವೆ ಮಾಡಿಸಲಾಗುತ್ತದೆ.ಕಳೆದ 15 ವರ್ಷಗಳಲ್ಲಿ ಈ ಫೌಂಡೇಶನ್ ನೂರಕ್ಕೂ ಅಧಿಕ ಅನಾಥ ಮತ್ತು ವಿಕಲಚೇತನರಿಗೆ ಮದುವೆ ಮಾಡಿಸಿದೆ. ಈ ಸಂಸ್ಥೆಯ ಕೆಲಸ ಈಗ ಭಾರೀ ಮೆಚ್ಚುಗೆ ಪಡೆದಿದೆ.