ಡಾರ್ಲಿಂಗ್ ಅಂಥ ಕರೆದ್ರೆ ಇನ್ನು ಕೇಸ್, ಜೈಲು!
– ಹೆಣ್ಣು ಮಕ್ಕಳನ್ನು ಡಾರ್ಲಿಂಗ್ ಅನ್ನುವುದು ಲೈಂಗಿಕ ಕಿರುಕುಳ
– ಅಪರಿಚಿತರಿಗೆ ಕರೆದ್ರೆ ಕೇಸ್ ಹಾಕಿ ಎಂದ ಹೈಕೋರ್ಟ್!
NAMMUR EXPRESS NEWS
ಕೋಲ್ಕತ್ತಾ: ಇಲ್ಲೊಂದು ಶಾಕಿಂಗ್ ನ್ಯೂಸ್. ಹೆಣ್ಣು ಮಕ್ಕಳನ್ನು ಡಾರ್ಲಿಂಗ್,ಬೇಬಿ, ಬೇಬ್ ಎಂದು ಕರೆಯುವ ರೂಢಿ ತುಂಬ ಯುವಕರಿಗೆ ಇರುತ್ತದೆ. ಆದರೆ, ಇನ್ನುಮುಂದೆ ಅಪರಿಚಿತ ಹೆಣ್ಣುಮಕ್ಕಳನ್ನು ಡಾರ್ಲಿಂಗ್ ಎಂದು ಕರೆಯುವುದು, ಛೇಡಿಸುವ ಚಾಳಿ ಇದ್ದರೆ, ಯುವಕರು ಕೂಡಲೇ ಈ ಚಾಳಿಯನ್ನು ಬಿಡಬೇಕು. ಏಕೆಂದರೆ, “ಅಪರಿಚಿತ ಹೆಣ್ಣುಮಕ್ಕಳನ್ನು ಡಾರ್ಲಿಂಗ್ ಎಂದು ಕರೆಯುವುದು ಕೂಡ ಲೈಂಗಿಕ ಕಿರುಕುಳವಾಗಿದ್ದು ಅಪರಾಧ ಪ್ರಕರಣ ದಾಖಲಿಸಿ” ಎಂಬುದಾಗಿ ಕೊಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿದೆ. ಹೌದು, ಅಪರಿಚಿತ ಮಹಿಳೆ ಅಥವಾ ಯುವತಿಯನ್ನು ಡಾರ್ಲಿಂಗ್ ಎಂದು ಕರೆಯುವುದು ಭಾರತೀಯ ದಂಡ ಸಂಹಿತೆ ಸೆಕ್ಷನ್ 354 ಎ (ಮಹಿಳೆ ಜತೆ ಅತಿರೇಕದ ವರ್ತನೆ) ಹಾಗೂ 509 (ಹೆಣ್ಣುಮಕ್ಕಳನ್ನು ಚುಡಾಯಿಸುವುದು) ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಿಸಬೇಕು. ಅವರನ್ನು ಡಾರ್ಲಿಂಗ್ ಎಂದು ಕರೆಯುವುದು ಕೂಡ ಸೆಕ್ಸುವಲ್ ಹೇಳಿಕೆಯಾಗಿದೆ. ಅದರಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಜಯ್ ಸೇನ್ಗುಪ್ತಾ ಆದೇಶ ಹೊರಡಿಸಿದ್ದಾರೆ.