ರೈಲ್ವೆಯಲ್ಲಿ ಮತ್ತೆ 4,660 ಹುದ್ದೆ: ನೀವೂ ಅರ್ಜಿ ಹಾಕಬಹುದು!
– 4,208 ಕಾನ್ಸ್ಟೆಬಲ್, 452 ಸಬ್ ಇನ್ಸ್ಪೆಕ್ಟರ್ ಹುದ್ದೆ
– ಅರ್ಜಿ ಸಲ್ಲಿಕೆ ಕೊನೆ ದಿನಾಂಕ ಯಾವಾಗ…?
NAMMUR EXPRESS NEWS
ಭಾರತೀಯ ರೈಲ್ವೆಯು ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಮತ್ತೊಂದು ಅಧಿಸೂಚನೆ ಹೊರಡಿಸಿದೆ. ಈ ಮೂಲಕ ವರ್ಷದಲ್ಲಿ ಮೂರನೇ ಅಧಿಸೂಚನೆ ಹೊರಡಿಸುವ ಮೂಲಕ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳು ಈ ಅವಕಾಶ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದ್ದು, ನೇಮಕಾತಿ ಸಂಪೂರ್ಣ ವಿವರ ಈ ಕೆಳಕಂಡಂತಿದೆ. ಭಾರತೀಯ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ರೈಲ್ವೆಯ ರಕ್ಷಣಾ ಸಿಬ್ಬಂದಿ ಪಡೆಯ ರೈಲ್ವೆ ಸಬ್ಇನ್ಸ್ಪೆಕ್ಟರ್, ರೈಲ್ವೆ ಕಾನ್ಸ್ಟೇಬಲ್ ಸೇರಿ ಒಟ್ಟು 4660 ಖಾಲಿ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಲ್ಲದೆ ಆರ್ಆರ್ಬಿ ಆರ್ಪಿಎಫ್ನ ಎಸ್ಐ, ಕಾನ್ಸ್ಟೇಬಲ್ ಹುದ್ದೆಗಳ ಕುರಿತು ಆಸಕ್ತಿ ಇರುವವರು ಈ ಕೆಳಕಂಡ ಮಾಹಿತಿಯಲ್ಲಿ ತಿಳಿಯಬಹುದಾಗಿದೆ.
ನೇಮಕಾತಿ ವಿವರ:
ಸಂಸ್ಥೆ ಹೆಸರು: ಭಾರತೀಯ ರೈಲ್ವೆ
ಹುದ್ದೆ ಹೆಸರು: ಆರ್ಪಿಎಫ್ ಸಬ್ ಇನ್ಸ್ಪೆಕ್ಟರ್, ಆರ್ಪಿಎಸ್ ಕಾನ್ಸ್ಟೇಬಲ್
ರೈಲ್ವೆ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಸಂಖ್ಯೆ: 452
ರೈಲ್ವೆ ಕಾನ್ಸ್ಟೇಬಲ್ ಹುದ್ದೆಗಳ ಸಂಖ್ಯೆ: 4208
ಖಾಲಿ ಹುದ್ದೆ ಒಟ್ಟು ಸಂಖ್ಯೆ: 4660
ಮಾಸಿಕ ವೇತನ: 21700 ರಿಂದ 35,400 ರೂಪಾಯಿ
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಏಪ್ರಿಲ್ 1
ಪೋಸ್ಟಿಂಗ್- ದೇಶದ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಎಲ್ಲಿಯಾದರೂ
ವಿದ್ಯಾರ್ಹತೆ : ಸಬ್ಇನ್ಸ್ಪೆಕ್ಟರ್ ಹುದ್ದೆಗೆ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪೂರ್ಣಗೊಳಿಸಿರಬೇಕು.
ಕಾನ್ಸ್ಟೇಬಲ್ ಹುದ್ದೆಗೆ ಅಭ್ಯರ್ಥಿಗಳು ಅಂಗೀಕೃತ ಶಿಕ್ಷಣ ಸಂಸ್ಥೆಗಳಿಂದ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆ ಉತ್ತೀರ್ಣಗೊಳಿಸಿರಬೇಕು ಎಂದು ಅಧಿಸೂಚನೆ ನೀಡಲಾಗಿದೆ.
ವಯೋಮಿತಿ : ಸಬ್ಇನ್ಸ್ಪೆಕ್ಟರ್ ಹುದ್ದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮುಂದಿನ ಜುಲೈ 01ಕ್ಕೆ 20-28 ವರ್ಷವಾಗಿರಬೇಕು. ಉಳಿದಂತೆ ಕಾನ್ಸ್ಟೇಬಲ್ ಹುದ್ದೆಯ ಅಭ್ಯರ್ಥಿಗಳಿಗೆ ಅದೇ ದಿನಾಂಕಕ್ಕೆ 18-28 ವರ್ಷ ವಯಸ್ಸಾಗಿರಬೇಕು.
ಅರ್ಜಿ ಶುಲ್ಕ : ಸಾಮಾನ್ಯ ಅಭ್ಯರ್ಥಿಗಳು, ಒಬಿಸಿ
ಅಭ್ಯರ್ಥಿಗಳಿಗೆ ಶುಲ್ಕ: 500 ರೂ. ಎಸ್ಸಿ, ಎಸ್ಟಿ, ಮಾಜಿ ಸೈನಿಕ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ: 250 ರೂ.
ಪ್ರಮುಖ ದಿನಾಂಕಗಳು
ಆನ್ಲೈನ್ ಅಪ್ಲಿಕೇಶನ್ ಸ್ವೀಕಾರ ಆರಂಭಿಕ ದಿನಾಂಕ: 15-04-2024
ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 14-05-2024
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಲಿಂಕ್ ಅನ್ನು 2024ರ ಏಪ್ರಿಲ್ 15 ರಂದು ಆಯಾ ರೈಲ್ವೆ ವಲಯಗಳ ಪ್ರಾದೇಶಿಕ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಅಧಿಸೂಚನೆಯನ್ನು ಲಿಂಕ್ ಗೆ ಭೇಟಿ www.rrbbnc.gov.in ಪಡೆದುಕೊಳ್ಳಬೇಕು.
1 Comment
For better job in life