ಬ್ಯಾಂಕ್ ಅಕೌಂಟ್ ಹೊಸ ನಿಯಮ
– ಮಿನಿಮಂ ಬ್ಯಾಲೆನ್ಸ್ ಇಲ್ದಿದ್ರೂ ಶುಲ್ಕ ವಿಧಿಸುವಂತಿಲ್ಲ
– ಗ್ರಾಹಕರಿಗೆ ತೊಂದರೆ ಆಗ್ಬಾರ್ದು ಎಂದ ಆರ್.ಬಿಐ
NAMMUR EXPRESS NEWS
ಇಂದು ಪ್ರತಿಯೊಬ್ಬರೂ ಬ್ಯಾಂಕಲ್ಲಿ ಒಂದು ಖಾತೆಯನ್ನು ಪ್ಹೊಂದಿರುತ್ತೀರಿ. ಹೊಸದಾಗಿ ಖಾತೆ ತೆರೆದಾಗ ಬ್ಯಾಂಕ್ ಸಿಬ್ಬಂದಿ ಮಿನಿಮಮ್ ಬ್ಯಾಲೆನ್ಸ್ ಇಷ್ಟಿರಬೇಕು ಎನ್ನುವ ಮಾಹಿತಿಯನ್ನು ಕೊಟ್ಟಿರುತ್ತಾರೆ. ನೀವು ಅದರ ಪ್ರಕಾರ ನಿಮ್ಮ ಖಾತೆಯಲ್ಲಿ ಅಷ್ಟು ಹಣ ಇರುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಮಿನಿಮಮ್ ಬ್ಯಾಲೆನ್ಸ್ ಇಲ್ಲದೆ ಇದ್ರೆ ಬ್ಯಾಂಕ್ ಶುಲ್ಕ ವಿಧಿಸುತ್ತದೆ. ಆದರೆ ಇನ್ನು ಮುಂದೆ ಶುಲ್ಕ ವಿಧಿಸಲು ಆರ್. ಬಿ. ಐ ಹೊಸ ನಿಯಮ ತಂದಿದೆ.
ಬ್ಯಾಂಕ್ ಮೂಲಕ ಹಣಕಾಸಿನ ವ್ಯವಹಾರ ಮಾಡುವಾಗ ಎಷ್ಟೋ ಬಾರಿ ನಮಗೆ ವಾರ್ಷಿಕ ಶುಲ್ಕ ಅಥವಾ ಮಾಸಿಕ ಶುಲ್ಕ ಕಡಿತಗೊಂಡಾಗ ಯಾಕೆ ಹಣ ಕಡಿತಗೊಳಿಸಲಾಗಿದೆ ಎನ್ನುವುದರ ಬಗ್ಗೆ ಮಾಹಿತಿ ಇರುವುದಿಲ್ಲ. ಆದ್ದರಿಂದ ಈ ಕೆಲವು ಪ್ರಮುಖ ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರತಿಯೊಂದು ಉಳಿತಾಯ ಖಾತೆಯಲ್ಲಿ ಎಷ್ಟು ಮಿನಿಮಮ್ ಬ್ಯಾಲೆನ್ಸ್ ಇರಬೇಕು ಎಂಬುದನ್ನು ತಿಳಿಸುತ್ತದೆ. ಆದರೆ ಇದು ಬ್ಯಾಂಕ್ನಿಂದ ಬ್ಯಾಂಕ್ಗೆ ವ್ಯತ್ಯಾಸವಾಗಿರುತ್ತದೆ. ಒಂದೊಂದು ಬ್ಯಾಂಕ್ ನಲ್ಲಿ 500 ರೂಪಾಯಿಗಳ ಮಿನಿಮಂ ಬ್ಯಾಲೆನ್ಸ್ ಆಗಿದ್ರೆ ಇನ್ನೂ ಕೆಲವು ಬ್ಯಾಂಕ್ಗಳಲ್ಲಿ ಹತ್ತು ಸಾವಿರ ರೂಪಾಯಿಗಳವರೆಗೂ ಇರಬಹುದು. ಆದ್ರೆ ಕೆಲವು ಖಾತೆಗಳಿಗೆ ಇನ್ಮುಂದೆ ಈ ನಿಯಮ ಅನ್ವಯ ಆಗಲ್ಲ.
– ಈ ಖಾತೆಗಳಲ್ಲಿ ಮಿನಿಮಂ ಬ್ಯಾಲೆನ್ಸ್ ಇಲ್ಲದೆ ಇದ್ರೆ ಶುಲ್ಕ ವಿಧಿಸುವಂತಿಲ್ಲ!
ಬ್ಯಾಂಕ್ನ ನಿಯಮದ ಅನುಸಾರ ನೀವು ವರ್ಷದಲ್ಲಿ ಮಿನಿಮಮ್ ಬ್ಯಾಲೆನ್ಸ್ ಅಥವಾ ಕನಿಷ್ಠ ಮೊತ್ತ ಉಳಿಸಿಕೊಳ್ಳದೆ ಇದ್ರೆ ಅದಕ್ಕೆ ಬ್ಯಾಂಕ್ ಶುಲ್ಕವನ್ನು ವಿಧಿಸುತ್ತದೆ. ಆದರೆ ಈಗ ಆರ್ ಬಿ ಐ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದ್ದು, ಈ ಎರಡು ರೀತಿಯ ಬ್ಯಾಂಕ್ ಅಕೌಂಟ್ ನಲ್ಲಿ ಮಿನಿಮಂ ಬ್ಯಾಲೆನ್ಸ್ ಇಲ್ಲದೆ ಇದ್ರೆ ಬ್ಯಾಂಕುಗಳು ಶುಲ್ಕ ವಿಧಿಸುವಂತಿಲ್ಲ.
1. ನಿಷ್ಕ್ರಿಯ ಗೊಂಡಿರುವ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದೆ ಇದ್ರೆ ಶುಲ್ಕ ವಿಧಿಸುವಂತಿಲ್ಲ. ಅಂದರೆ ನೀವು ಯಾವುದಾದರೂ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿದ್ದು ಒಂದು ವರ್ಷದವರೆಗೂ ಅದರಲ್ಲಿ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ಮಾಡದೆ ಇದ್ದಾಗ ಆ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಆದರೆ ಇಂತಹ ನಿಷ್ಕ್ರಿಯಗೊಂಡಿರುವ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲವಾದರೆ ಬ್ಯಾಂಕ್ ದೊಡ್ಡ ಅಥವಾ ಶುಲ್ಕ ವಿಧಿಸುವಂತಿಲ್ಲ.
2.ಸ್ಕಾಲರ್ಷಿಪ್ ಅಥವಾ ಸರ್ಕಾರದ ಸೌಲಭ್ಯ ವರ್ಗಾವಣೆಗಾಗೀ ಮಾತ್ರ ಬಳಸಲ್ಪಡುವ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದೆ ಇದ್ದಾಗಲೂ ಶುಲ್ಕ ವಿಧಿಸುವಂತಿಲ್ಲ. ಎಷ್ಟು ಬಾರಿ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಹಣ ಖಾತೆಗೆ ಬರುವುದಕ್ಕಾಗಿ ಉಳಿತಾಯ ಖಾತೆಯನ್ನು ತೆರೆದಿರಬಹುದು.
ಹಣವನ್ನು ಪಡೆದು ಮತ್ತು ಬ್ಯಾಂಕ್ ವ್ಯವಹಾರವನ್ನು ಮಾಡದೆ ಇರಬಹುದು. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ತೆರೆದಿರುವ ಖಾತೆಗೆ ಕನಿಷ್ಠ ಮೊತ್ತ ನಿರ್ವಹಿಸಲು ಸಾಧ್ಯವಾಗದೇ ಇದ್ರೆ ಬ್ಯಾಂಕ್, ಶುಲ್ಕ ವಿಧಿಸುವಂತಿಲ್ಲ ಎಂದು ಆರ್ಬಿಐ ಸ್ಪಷ್ಟಪಡಿಸಿದೆ. ಒಟ್ಟಿನಲ್ಲಿ ಒಂದು ಅಥವಾ ಎರಡು ವರ್ಷಗಳ ಕಾಲ ನೀವು ಉಳಿತಾಯ ಖಾತೆಯನ್ನು ಹೊಂದಿದ್ದು ಅದರ ನಿರ್ವಹಣೆ ಮಾಡದೇ ಇದ್ದಲ್ಲಿ ಅಥವಾ ಬ್ಯಾಂಕ್ ವ್ಯವಹಾರ ಮಾಡದೆ ಇದ್ದಲ್ಲಿ ಖಾತೆ ನಿಷ್ಕ್ರಿಯಗೊಳ್ಳುತ್ತದೆ. ಆದರೆ ನೀವು ಮಿನಿಮಮ್ ಬ್ಯಾಲೆನ್ಸ್ ಇಲ್ಲ ಎನ್ನುವ ಕಾರಣಕ್ಕೆ ಶುಲ್ಕ ಪಾವತಿಸಬೇಕಾಗಿಲ್ಲ. ಹಾಗೂ ಯಾವಾಗ ಬೇಕಿದ್ದರೂ ನಿಮ್ಮ ಬ್ಯಾಂಕ್ ಖಾತೆಯನ್ನು ನೀವು ಮುಚ್ಚಬಹುದು. ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಇದ್ದು ನೀವು ಖಾತೆಯ ಬಳಕೆ ಮಾಡದೆ ಇದ್ದಾಗ. ಆ ಖಾತೆಯಿಂದ ಶುಲ್ಕವನ್ನು ಕಡಿತಗೊಳಿಸಬಹುದು. ಒಟ್ಟಿನಲ್ಲಿ ಗ್ರಾಹಕರಿಗೆ ಶುಲ್ಕದ ಹೊರೆ ಅಧಿಕವಾಗಬಾರದು ಎನ್ನುವ ಕಾರಣಕ್ಕೆ ಆರ್ ಬಿ ಐ ಈ ಹೊಸ ನಿಯಮವನ್ನು ಜಾರಿಗೆ ತಂದಿದೆ ಇದು ಏಪ್ರಿಲ್ 1, 2024 ರಿಂದ ಎಲ್ಲಾ ಬ್ಯಾಂಕುಗಳಲ್ಲಿಯೂ ಅನ್ವಯವಾಗಲಿದೆ.