ಎಲೆಕ್ಷನ್ ಮಾಹಿತಿ ಗೊತ್ತಿಲ್ವಾ.. ಈ ಆಪ್ ನೋಡಿ!
– 9 ಆಪ್ ಮೂಲಕ ಸಾರ್ವಜನಿಕರಿಗೆ ಮಾಹಿತಿ
– ಮತ ಪಟ್ಟಿ, ನಿಮ್ಮ ವೋಟರ್ ಐಡಿ, ಅಭ್ಯರ್ಥಿ ವಿವರ ಲಭ್ಯ
NAMMUR EXPRESS NEWS
ಲೋಕಸಭಾ ಚುನಾವಣೆ ಕಾವು ದೇಶದಲ್ಲಿ ಶುರುವಾಗಿದೆ. ಎಲ್ಲೆಡೆ ಮತ ಪ್ರಚಾರ ನಡೆಯುತ್ತಿದೆ. ಚುನಾವಣೆ ಆಯೋಗ ಸಹ ಮತ್ತು ಪಕ್ಷ, ಅಭ್ಯರ್ಥಿಗಳ ಅನುಕೂಲಕ್ಕಾಗಿ ವಿವಿಧ ಆ್ಯಪ್ ಗಳನ್ನು ಸಿದ್ಧಪಡಿಸಿದೆ. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ 9 ಆ್ಯಪ್ಗಳು ಬಳಕೆ ಯಾಗುತ್ತಿವೆ. ಹಾಗಾದ್ರೆ ಅವುಗಳ ಪ್ರಯೋಜನ ಏನು? ಮಾಹಿತಿ ಪಡೆಯೋದು ಹೇಗೆ? ಇಲ್ಲಿದೆ ಡೀಟೇಲ್ಸ್.
ಎನ್ಕೋರ್ ನೋಡಲ್:
ಇದು ನೋಡಲ್ ಅಧಿಕಾರಿಗಳಿಗೆ ಉಪಯುಕ್ತವಾಗಿದೆ. ರಾಜಕೀಯ ಪಕ್ಷಗಳಿಗೆ ರೋಡ್ ಶೋ, ಮೆರವಣಿಗೆ, ಸಮಾವೇಶ ಇತ್ಯಾದಿಗಳಿಗೆ ನಿರಾಕ್ಷೇಪ ಪತ್ರ ನೀಡಲಾಗುತ್ತದೆ. ಇದು ಭದ್ರತಾ ಸಿಬ್ಬಂದಿ ಬಳಕೆಗೆ ಬರುತ್ತದೆ.
ವೋಟರ್ ಟರ್ನೌಟ್
ಮತದಾನ ದಿನದಂದು 2 ಗಂಟೆಗೊಮ್ಮೆ ಮತದಾನದ ಪ್ರಮಾಣ ತಿಳಿದುಕೊಳ್ಳ ಬಹುದು. ಇಲ್ಲಿ ಕ್ರೋಡೀಕೃತ ವರದಿ ಲಭ್ಯವಿರುತ್ತದೆ.
ಸಿ-ವಿಜಿಲ್
ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದರೆ ಸಾರ್ವಜನಿಕರು ನೇರವಾಗಿ ಚಿತ್ರ, ಆಡಿಯೊ ಮತ್ತು ವಿಡಿಯೊ ರೂಪದಲ್ಲಿ ದೂರು ಸಲ್ಲಿಸಬಹುದು. 100 ನಿಮಿಷದಲ್ಲಿ ಅದರ ವಿರುದ್ಧ ಅಧಿಕಾರಿಗಳು ಕ್ರಮಕೈಗೊಳ್ಳುತ್ತಾರೆ.
ವೋಟರ್ ಹೆಲ್ಪ್ ಲೈನ್
ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕಲು, ಮತದಾರರ ಪಟ್ಟಿಯಲ್ಲಿನ ತೊಡಕುಗಳ ಸಂಬಂಧ ದೂರು ನೀಡಲು, ಡಿಜಿಟಲ್ ವೋಟರ್ ಸ್ಲಿಪ್ ಡೌನ್ ಲೋಡ್ ಮಾಡಿಕೊಳ್ಳಬಹುದು. ಮತದಾರರು ತಮ್ಮ ಹೆಸರು ನೋಂದಾಯಿಸಲು, ವರ್ಗಾವಣೆ, ಪರಿಷ್ಕರಣೆಗಳಿಗೂ ಉಪಯುಕ್ತ. ಚುನಾವಣೆ ಸಂಬಂಧಿ ಮಾಹಿತಿ ಪಡೆಯಲು ಸಹಕಾರಿ.
ಕೆವೈಸಿ
ಸಾರ್ವಜನಿಕರು ಅಭ್ಯರ್ಥಿಗಳ ಆಸ್ತಿ ವಿವರ, ಅಪರಾಧ ಹಿನ್ನೆಲೆ ಹೊಂದಿದ್ದಾರೆಯೇ? ಇನ್ನಿತರ ಮಾಹಿತಿಗಳನ್ನು ಅಫಿಡವಿಟ್ ಮೂಲಕ ಪಡೆಯಬಹುದು. ಇಲ್ಲಿ ಇಡೀ ದೇಶದ ಎಲ್ಲ ರಾಜ್ಯಗಳಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ವಿವರ ಲಭ್ಯವಿದೆ.
ಸುವಿಧಾ
ಚುನಾವಣೆ ಪ್ರಚಾರ, ಸಮಾವೇಶ, ಮೆರವಣಿಗೆಗೆ ಅಗತ್ಯವಿರುವ ಪರವಾನಗಿ ಪಡೆಯಬಹುದು. ಅರ್ಜಿಯ ಸ್ಥಿತಿ ವೀಕ್ಷಿಸಬಹುದು.
ಅಬ್ಸರ್ವರ್
ಚುನಾವಣೆ ಕರ್ತವ್ಯದಲ್ಲಿರುವ ವೀಕ್ಷಕರು ತಮ್ಮ ಹಾಜರಾತಿ ದಾಖಲಿಸಬಹುದು. ಮತಗಟ್ಟೆ, ಮತದಾರರ ಸಂಖ್ಯೆ, ಆರ್ಗಳ ಬಗ್ಗೆಯೂ ಮಾಹಿತಿ ಲಭ್ಯ ಇರುತ್ತದೆ.
ಇಎಸ್ಎಂಎಸ್
ಎಫ್ಎಸ್ಟಿ, ಎಸ್.ಎಸ್ಟಿ ವಶಕ್ಕೆ ಪಡೆದ ಸಾಮಗ್ರಿಗಳ ಬಗ್ಗೆ ಮಾಹಿತಿ ಇಲ್ಲಿರುತ್ತದೆ. ದೇಶದೆಲ್ಲೆಡೆ ಎಷ್ಟು ಪ್ರಕರಣಗಳಾಗಿವೆ. ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕ್ರೋಡೀಕೃತ ಮಾಹಿತಿ ಲಭ್ಯವಿದೆ.
ಸಕ್ಷಮ್
ವಿಶೇಷಚೇತನರು ಮತದಾನದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಸಕ್ಷಮ್ ಆಪ್ ಮೂಲಕ ವಿಶೇಷಚೇತನರ ಹೆಸರು, ಫೋಟೋ ಮಾಹಿತಿ ಪಡೆದು ಈ ಆಪ್ ಮೂಲಕ ಅವರ ದಾಖಲೆ ಕ್ರೂಡಿಕರಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ.