ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ 10 ದಿನ ರಜೆ.!
– ಕಾರ್ಮಿಕರ ದಿನ, ಬಸವ ಜಯಂತಿ ಇತ್ಯಾದಿ ರಜಾ ದಿನ
– ಯಾವತ್ತು ಸರ್ಕಾರಿ ರಜೆ: ಯಾವತ್ತು ಬ್ಯಾಂಕ್ ರಜೆ?
NAMMUR EXPRESS NEWS
ಬೆಂಗಳೂರು: ಆರ್ಬಿಐ ಕ್ಯಾಲಂಡರ್ ಪ್ರಕಾರ 2024ರ ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ 11 ದಿನ ರಜೆ ಇದೆ. ಚುನಾವಣೆಯ ಮೂರರಿಂದ ಆರು ಹಂತಗಳ ಮತದಾನದ ಹಿನ್ನೆಲೆಯಲ್ಲಿ ಕೆಲವೆಡೆ ರಜೆ ಇರುವುದು ಸೇರಿ ಮೇ ತಿಂಗಳಲ್ಲಿ 14 ದಿನ ಬ್ಯಾಂಕ್ ರಜೆ ಇದೆ. ಕರ್ನಾಟಕದಲ್ಲಿ 10 ದಿನ ರಜೆ ಇದೆ. ಮೇ 1ರಂದು ಕಾರ್ಮಿಕರ ದಿನದ ನಿಮಿತ್ತ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ 11 ರಾಜ್ಯಗಳಲ್ಲಿ ಬ್ಯಾಂಕುಗಳು ಬಂದ್ ಆಗಲಿವೆ. ಮೇ 7, 13, 20 ಮತ್ತು 25ರಂದು ವಿವಿಧೆಡೆ ಮತದಾನ ನಡೆಯಲಿದೆ. ಮೇ 7ರಂದು ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಇರುವುದರಿಂದ ಅಲ್ಲಿನ ಬ್ಯಾಂಕುಗಳು ಬಂದ್ ಇರುತ್ತವೆ. ಮೇ ತಿಂಗಳಲ್ಲಿ ನಾಲ್ಕು ಭಾನುವಾರ ಮತ್ತು ಎರಡು ಶನಿವಾರ ರಜೆಗಳೂ ಇವೆ.
ಕರ್ನಾಟಕದಲ್ಲಿ 10 ದಿನ ರಜೆ:
ಕರ್ನಾಟಕದಲ್ಲಿ ಮೇ 1ಕ್ಕೆ ಕಾರ್ಮಿಕರ ದಿನದ ನಿಮಿತ್ತ ರಜೆ ಇದೆ. ಮೇ 7ಕ್ಕೆ 3ನೇ ಹಂತದ ಚುನಾವಣೆ ಇರುವುದರಿಂದ 14 ಲೋಕಸಭಾ ಕ್ಷೇತ್ರಗಳಲ್ಲಿ ಬ್ಯಾಂಕ್ ರಜೆ ಇರುತ್ತದೆ. ಮೇ 10ರಂದು ಬಸವ ಜಯಂತಿ, ಮೇ 23ರಂದು ಬುದ್ಧ ಪೂರ್ಣಿಮಾ ಇರುವುದರಿಂದ ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ಆರ್ಬಿಐ ರಜೆ ಕಲ್ಪಿಸಿದೆ.
ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ಇರುವ ರಜೆಗಳು:
ಮೇ 1, ಬುಧವಾರ: ಕಾರ್ಮಿಕರ ದಿನ
ಮೇ 5: ಭಾನುವಾರ
ಮೇ 7, ಮಂಗಳವಾರ: ಚುನಾವಣೆ (ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳಲ್ಲಿ)
ಮೇ 10, ಶುಕ್ರವಾರ: ಬಸವ ಜಯಂತಿ/ ಅಕ್ಷಯ ತೃತೀಯ
ಮೇ 11: ಎರಡನೇ ಶನಿವಾರ
ಮೇ 12: ಭಾನುವಾರ
ಮೇ 19: ಭಾನುವಾರ
ಮೇ 23, ಗುರುವಾರ: ಬುದ್ಧ ಪೂರ್ಣಿಮಾ
ಮೇ 25: ನಾಲ್ಕನೇ ಶನಿವಾರ
ಮೇ 26: ಭಾನುವಾರ
ಬ್ಯಾಂಕುಗಳು ಬಂದ್ ಆಗಿದ್ದರೂ ಬಹುತೇಕ ಬ್ಯಾಂಕಿಂಗ್ ಸೇವೆಗಳು ಆನ್ಲೈನ್ನಲ್ಲಿ ಸದಾ ಲಭ್ಯ ಇರುತ್ತವೆ. ಎಟಿಎಂ, ನೆಟ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್, ಯುಪಿಐ ಇತ್ಯಾದಿ ಮೂಲಕ ಹಣದ ವಹಿವಾಟು ನಡೆಸಬಹುದು.