ಶಿವಮೊಗ್ಗ ಲೋಕಸಭಾ: ಶೇ.78.24 ಮತದಾನ!
– ಶಿವಮೊಗ್ಗ ಗ್ರಾಮಾಂತರ ಹೆಚ್ಚು, ಶಿವಮೊಗ್ಗ ನಗರ ಕಡಿಮೆ
– ಯಾವ ತಾಲೂಕು ಎಷ್ಟೆಷ್ಟು…?
NAMMUR EXPRESS NEWS
ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಶೇ. 78.24 ರಷ್ಟು ಮತ ಚಲಾವಣೆಯಾಗಿದ್ದು, ಅಂಕಿ ಅಂಶಗಳ ಅಂತಿಮ ವರದಿಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಜಿಲ್ಲಾಡಳಿತ ಈ ವರದಿಯನ್ನು ಬಿಡುಗಡೆ ಮಾಡಿದೆ.
ಎಲ್ಲೆಲ್ಲಿ ಎಷ್ಟೆಷ್ಟು ?
• ಶಿವಮೊಗ್ಗ ಗ್ರಾಮಾಂತರ : 83.61%
• ಶಿಕಾರಿಪುರ : 82.66%
• ಸಾಗರ : 80.2%
• ಭದ್ರಾವತಿ : 71.72%
• ಸೊರಬ : 83.27%
• ತೀರ್ಥಹಳ್ಳಿ : 82.23%
• ಬೈಂದೂರು : 76.4%
• ಶಿವಮೊಗ್ಗ : 70.33%
ಮಸ್ಟರಿಂಗ್ ಕೇಂದ್ರಗಳ ಮೇಲೆ ಪೊಲೀಸ್ ಕಣ್ಣು!
– ಶಿವಮೊಗ್ಗ ಜಿಲ್ಲೆಯ ಎಲ್ಲಾ ಕೇಂದ್ರದಲ್ಲೂ ಮಸ್ಟರಿಂಗ್ ಕೇಂದ್ರ
ಶಿವಮೊಗ್ಗ ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು.
111-ಶಿವಮೊಗ್ಗ ಗ್ರಾಮಾಂತರ ಮತ ಕ್ಷೇತ್ರಕ್ಕೆ ಎಚ್ಎಸ್ ರುದ್ರಪ್ಪ ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಶಿವಮೊಗ್ಗ, 112-ಭದ್ರಾವತಿ ಮತಕ್ಷೇತ್ರಕ್ಕೆ ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಭದ್ರಾವತಿ, 113-ಶಿವಮೊಗ್ಗ ಮತಕ್ಷೇತ್ರಕ್ಕೆ ಸಹ್ಯಾದ್ರಿ ಕಾಮರ್ಸ್ ಆಂಡ್ ಮ್ಯಾನೇಜ್ ಮೆಂಟ್ ಕಾಲೇಜು, 114-ತೀರ್ಥಹಳ್ಳಿಗೆ ಡಾ.ಯು. ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜ್ ತೀರ್ಥಹಳ್ಳಿ, 115 – ಶಿಕಾರಿಪುರ ಮತಕ್ಷೇತ್ರಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ, 116-ಸೊರಬ ಮತಕ್ಷೇತ್ರಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೊರಬ ಹಾಗೂ 117 -ಸಾಗರ ಮತಕ್ಷೇತ್ರಕ್ಕೆ ಸರ್ಕಾರಿ ಜ್ಯೂನಿಯರ್ ಪಿಯು ಕಾಲೇಜು, ಸಾಗರ ಮಸ್ಟರಿಂಗ್ ಕೇಂದ್ರಗಳಾಗಿವೆ. ಮಸ್ಟರಿಂಗ್ ಮತ್ತು ಡಿಮಸ್ಪರಿಂಗ್ ದಿನಗಳಂದು ಕರ್ತವ್ಯಕ್ಕೆ ನಿಯೋಜಿಸಿದ ಚುನಾವಣಾ ಸಿಬ್ಬಂದಿಗಳನ್ನು ಸಂಬಂಧಿಸಿದ ಮತಗಟ್ಟೆ ಕೇಂದ್ರಗಳಿಗೆ ಕರೆದುಕೊಂಡು ಹೋಗಲು ಅನುಕೂಲವಾಗುವಂತೆ 269 ಬಸ್ ಗಳು, 7 ಮೀಸಲು ಬಸ್ ಮತ್ತು 13 ಮಿನಿ ಬಸ್ ಸೇರಿದಂತೆ 289 ಬಸ್ಗಳ ನಿಯೋಜನೆ ಮಾಡಲಾಗಿತ್ತು.
ನಗರದ ಎಚ್ ಎಸ್ ರುದ್ರಪ್ಪ ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಮೈದಾನ ಸೇರಿ ಎಲ್ಲ ಮಸ್ಟರಿಂಗ್ ಕೇಂದ್ರಗಳಲ್ಲಿ ಮತಗಟ್ಟೆ ಸಿಬ್ಬಂದಿಗಳು ಹೊರಡಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಇವಿಎಂ, ವಿವಿ ಪ್ಯಾಟ್ಗಳು, ಕಂಟ್ರೋಲಿಂಗ್ ಯುನಿಟ್, ಶಾಯಿ, ಚುನಾವಣೆಗೆ ಅಗತ್ಯವಾದ ಇತರೆ ಸಾಮಗ್ರಿ ಗಳೊಂದಿಗೆ ಅಧಿಕಾರಿ, ಸಿಬ್ಬಂದಿಗಳು ಸಿದ್ಧತೆ ಮಾಡಿಕೊಂಡು ನಿಯೋಜಿಸಲಾದ ಬಸ್ಗಳಲ್ಲಿ ಸಂಬಂಧಿಸಿದ ಮತಗಟ್ಟೆಗಳಿಗೆ ತೆರಳಿ ಸುಸೂತ್ರವಾಗಿ ಚುನಾವಣೆ ನಡೆಸಿದರು.