- ಹಲವೆಡೆ ಮತದಾರರ ಪ್ರಶ್ನೆ
ಬೆಂಗಳೂರು: ಗ್ರಾಮ ಪಂಚಾಯತ್ ಮೊದಲ ಹಂತದ ಚುನಾವಣೆ ಮುಕ್ತಾಯಗೊಂಡಿದೆ.
ರಾಜ್ಯದ ಬಹುತೇಕ ಕಡೆ ಶಾಂತಿಯುತ ಮತದಾನವಾಗಿದೆ. ಆದರೆ ವಿಧಾನಸಭಾ, ಲೋಕ ಸಭಾ ಚುನಾವಣೆಯಲ್ಲಿ ತಮಗೆ ಯಾವ ಅಭ್ಯರ್ಥಿಯೂ ಇಷ್ಟ ಇಲ್ಲ. ಆದರೆ ಮತದಾನದ ಹಕ್ಕು ಚಲಾಯಿಸಲು “ನೋಟಾ” ಆಯ್ಕೆ ನೀಡಲಾಗಿದೆ. ಆದರೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಈ ಆಯ್ಕೆ ನೀಡಿಲ್ಲ. ಬ್ಯಾಲೆಟ್ ಪೇಪರ್ ಮೇಲೆ ಮತ ಹಾಕಲು ಅವಕಾಶ ನೀಡಲಾಗಿದೆ. ಆದರೆ ನೋಟಾ ಆಯ್ಕೆ ನೀಡಿಲ್ಲ. ಈ ಹಿಂದೆ 17 ಎ ಎಂಬ ಫಾರ್ಮ್ ಮೇಲೆ ಬರೆದುಕೊಡಬಹುದಿತ್ತು. ಆದರೆ ಈಗ ಆ ಫಾರ್ಮ್ ಕೂಡ ಇಲ್ಲ. ಈ ಬಗ್ಗೆ ಮತಗಟ್ಟೆ ಅಧಿಕಾರಿಗಳಿಗೂ ಮಾಹಿತಿ ಇರಲಿಲ್ಲ ಎಂದು ಕೆಲವರು ಹೇಳಿದ್ದಾರೆ.