ಟಾಪ್ ನ್ಯೂಸ್ ಕರಾವಳಿ
ಬಾವಿಗೆ ಬಿದ್ದ ಮಗು ರಕ್ಷಿಸಿದ ಹುಡುಗ ಕರಾವಳಿ ಹೀರೋ!
– ಬಂಟ್ವಾಳ ಹಂಚಿಕಟ್ಟೆಯಲ್ಲಿ ನಡೆದಿದ್ದ ಘಟನೆ
– ಬಾವಿಗೆ ಬಿದ್ದ ಮಗುವನ್ನು ರಕ್ಷಿಸಿದ ಯುವಕನಿಗೆ ಮೆಚ್ಚುಗೆ
NAMMUR EXPRESS NEWS
ಬಂಟ್ವಾಳ: ಮಗುವನ್ನು ರಕ್ಷಿಸಲು ಜೀವದ ಹಂಗು ತೊರೆದು ಬಾವಿಗಿಳಿದ ಯುವಕ ಈಗ ನಿಜಕ್ಕೂ ಹೀರೋ ಆಗಿದ್ದಾನೆ. ಹೌದು. ಸರಪಾಡಿಯ ಹಂಚಿಕಟ್ಟೆಯಲ್ಲಿ ಈ ಘಟನೆ ನಡೆದಿದ್ದು ಬಾವಿಗೆ ಬಿದ್ದ ಮಗುವನ್ನು ತುಂಡಾಗುವ ಸ್ಥಿತಿಯಲ್ಲಿದ್ದ ಹಳೆಯ ಹಗ್ಗವನ್ನು ಬಳಸಿ ಮೇಲಕ್ಕೆತ್ತಿದ ಯುವಕನ ಕುರಿತು ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಹಂಚಿಕಟ್ಟೆ ನಿವಾಸಿ ನೋಣಯ್ಯ ನಾಯ್ಕ್ ಅವರ ಪುತ್ರ ಅಭಿಷೇಕ್ (೩) ಬಾವಿಗೆ ಬಿದ್ದ ಬಾಲಕ. ಮಠದಬೆಟ್ಟು ನಿವಾಸಿ ಉಮೇಶ್ ನಾಯ್ಕ್ ಮಗುವನ್ನು ರಕ್ಷಿಸಿದ ಯುವಕ ನೋಣಯ್ಯ ನಾಯ್ಕ ಅವರ ಮನೆಯ ಅಂಗಳದಲ್ಲಿ ಬಾವಿಯೊಂದಿದ್ದು, ಅದಕ್ಕೆ ಕಸ ಬೀಳದಂತೆ ಹಸಿರು ಬಣ್ಣದ ನರ್ಸರಿ ನೆಟ್ ಕಟ್ಟಿದ್ದರು. ಮೇ ೧೪ರಂದು ಸಂಜೆ ೬ರ ಸುಮಾರಿಗೆ ಅವರ ಪುತ್ರ ಅಭಿಷೇಕ್ (೩) ಮನೆಯ ಅಂಗಳದಲ್ಲಿ ಎಂದಿನಂತೆ ಆಟದಲ್ಲಿ ನಿರತನಾಗಿದ್ದ. ಮಗುವಿನ ತಾಯಿ ಮನೆಕೆಲಸದಲ್ಲಿ ನಿರತರಾಗಿದ್ದು, ಮಗುವಿನ ತಂದೆ ತಂದೆ ನೋಣಯ್ಯ ಅವರು ಕೆಲಸ ಹಿಂತಿರುಗಿ ಮನೆಯಿಂದ ಆಚೆ ಹೋಗಿದ್ದರು.
ಇದೇ ವೇಳೆ ಅಂಗಳದಲ್ಲಿ ಆಟವಾಡುತ್ತಿದ್ದ ಮಗು ಬಾವಿಯ ದಂಡೆಯ ಮೇಲೇರಿ ಹಸಿರು ನೆಟ್ ಮೇಲೆ ಹೋಗಿದ್ದು, ಮಧ್ಯಕ್ಕೆ ತಲುಪುವ ವೇಳೆ ಅದು ಭಾರದಿಂದ ಹರಿದು, ಮಗು ಬಾವಿಗೆ ಬಿದ್ದಿತು. ಮನೆಯೊಳಗೆ ಮಗುವಿನ ತಾಯಿ ಹಾಗೂ ಆಕೆಯ ಸಹೋದರಿ ಮಾತ್ರ ಇದ್ದು, ನೀರಿಗೆ ಏನೋ ಬಿದ್ದ ಶಬ್ದ ಕೇಳಿ ಓಡಿ ಬಂದು ನೋಡಿದಾಗ ಮಗು ನೀರಿಗೆ ಬಿದ್ದಿರುವುದು ಗೋಚರಿಸಿದೆ. ನೋಣಯ್ಯ ಅವರ ಮನೆ ರಸ್ತೆ ಬದಿಯಲ್ಲೇ ಇದ್ದು, ಗಾಬರಿಗೊಂಡ ತಾಯಿಯ ಆಕ್ರಂದನ ಆಲಿಸಿದ ಬೈಕಿನಲ್ಲಿ ಸಾಗುತ್ತಿದ್ದ ಯುವಕ ಉಮೇಶ್ ನಾಯ್ಕ್ ನೆರವಿಗೆ ಧಾವಿಸಿ ಬಂದರು. ತುಂಡಾಗುವ ಸ್ಥಿತಿಯಲ್ಲಿ ಇದ್ದ ಹಳೆಯ ಹಗ್ಗವನ್ನು ಬಳಸಿ ಹಿಂದೆ ಮುಂದೆ ನೋದದೇ ತಕ್ಷಣ ಬಾವಿಗೆ ಇಳಿದು ಮಗುವನ್ನು ಎತ್ತಿ ಹಿಡಿದು ರಕ್ಷಿಸಿದ್ದಾರೆ. ಈ ವೇಳೆ ಹೊರಗೆ ಹೋಗಿದ್ದ ಮಗುವಿನ ತಂದೆ ನೋಣಯ್ಯ ನಾಯ್ಕ್ ಹಾಗೂ ಮತ್ತಿಬ್ಬರು ಬಂದಿದ್ದು, ಅವರು ಬೇರೆ ಹಗ್ಗದ ಸಹಾಯದಿಂದ ಮಗುವನ್ನು ಮೇಲಕ್ಕೆ ಎತ್ತಿದ್ದಾರೆ.
ಮಗುವಿನ ಕುತ್ತಿಗೆಯ ವರೆಗೂ ಬಾವಿಯಲ್ಲಿ ನೀರಿದ್ದು, ಕೊಂಚು ನೀರು ಹೆಚ್ಚಿದ್ದರೂ ಅಥವಾ ಉಮೇಶ್ ಬರುವುದು ಸ್ವಲ್ಪ ತಡವಾಗುತ್ತಿದ್ದರೂ ದುರ್ಘಟನೆ ನಡೆಯುವ ಸಾಧ್ಯತೆ ಇತ್ತು . ಮಗು ಕೂಡಾ ಯಾವತ್ತೂ ಬಾವಿಯ ಬಳಿಗೆ ಹೋದವನಲ್ಲ. ಯಾಕೆ ಹೋಗಿದ್ದಾನೆ ಎಂಬುದು ಗೊತ್ತಿಲ್ಲ. ಮಗು ಬೀಳುವ ಹೊತ್ತಿಗೆ ದೇವರೇ ಉಮೇಶ್ ಅವರನ್ನು ಕಳುಹಿಸಿದ್ದು, ಅಷ್ಟು ಆಳಕ್ಕೆ ಬಿದ್ದ ಮಗು ಯಾವುದೇ ಗಾಯಗಳಿಲ್ಲದೆ ಮೇಲೆ ಬಂದಿರುವುದು ದೇವರ ದಯೆಯೇ ಸರಿ ಎಂದು ಮಗುವಿನ ತಂದೆ ನೋಣಯ್ಯ ಅವರ ಅಭಿಪ್ರಾಯವಾಗಿದೆ. ಉಮೇಶ್ ಅವರ ಸಾಹಸಕ್ಕೆ ಪ್ರಸ್ತುತ ಎಲ್ಲಡೆಯಿಂದಲೂ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ
ಕುಂದಾಪುರ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಿಡುಗಡೆಗೆ ಆದೇಶ
ಕುಂದಾಪುರ ತಾಲೂಕಿನ ಸ್ಫೂರ್ತಿಧಾಮ ಸಂಸ್ಥೆಯ ಪುನರ್ವಸತಿಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ 2ನೇ ಆರೋಪಿ ಕೇಶವ ಕೋಟೇಶ್ವರ ಅವರನ್ನು ಬಿಡುಗಡೆಗೊಳಿಸಿ ಉಡುಪಿ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ. ಸಂಸ್ಥೆಯ ಕಾರ್ಯದರ್ಶಿ ಕೇಶವ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪವಿತ್ತು. ಘಟನೆಯ ಬಗ್ಗೆ ಗೊತ್ತಿದ್ದರೂ ದೂರು ದಾಖಲಿಸಲು ವಿಫಲವಾಗಿರುವ ಕೇಶವ ಕೋಟೇಶ್ವರರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ರೂ. ದಂಡ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೆ, ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಕಾಲಾವಧಿಯನ್ನು ಪರಿಗಣಿಸಿ ಕೇಶವ ಅವರಿಗೆ ವಿಧಿಸಿರುವ ಒಂದು ವರ್ಷದ ಶಿಕ್ಷೆ ಕಡಿತಗೊಳಿಸಿ ಬಿಡುಗಡೆ ಮಾಡಲಾಗಿದೆ. ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಅವರು ಈ ತೀರ್ಪು ನೀಡಿದ್ದು, ಆರೋಪಿ ಪರ ವಕೀಲ ವಿಜಯ ವಾಸು ಪೂಜಾರಿ ವಾದ ಮಂಡಿಸಿದ್ದರು.
ಮಣಿಪಾಲ: ಗಾಂಜಾ ಸೇವನೆ : 7 ಮಂದಿ ಯುವಕರು
ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಅರೋಪದ ಮೇಲೆ ತ್ ಮಂದು ಯುವಕರನ್ನು ಜನರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಉಡುಪಿಯ ಮಣಿಪಾಲದಲ್ಲಿ ನಡೆದಿದೆ. ಪ್ರಜ್ವಲ್ (21), ಆರ್ಯನ್ (20), ಪ್ರಧುಮಾನ್ (21), ಹೆಮಾನ್ಯ (20), ಸುಭಾಸ್ (23), ನಿಶಾಂತ್ (22), ಅಮಿತ್ (20)ನನ್ನು ವಶಕ್ಕೆ ಪಡೆಯಲಾಗಿದೆ. ಫಾರೆನ್ಸಿಕ್ ವರದಿಯ ಪ್ರಕಾರ ಏಳು ಮಂದಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಇನ್ನು ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.