ಒನ್ಪ್ಲಸ್ ಮೊಬೈಲ್ ಗ್ರಾಹಕರಿಗೆ ಶಾಕ್!
– ಇದ್ದಕ್ಕಿದ್ದಂತೆ ಮೊಬೈಲ್ ಡಿಸ್ಪ್ಲೇ ಡಮಾರ್
– ಎಲ್ಲೆಡೆ ಸ್ಮಾರ್ಟ್ಫೋನ್, ಟ್ಯಾಬ್ಲೆಟ್, ಇಯರ್ಬಡ್ ಮಾರಾಟ ಸ್ಥಗಿತ
– ದೇಶದ 4,500 ಮಳಿಗೆಗಳು ನಿರ್ಧಾರ: ಯಾಕೆ ಈ ನಿರ್ಧಾರ?
NAMMUR EXPRESS NEWS
ಒನ್ಪ್ಲಸ್ ಸ್ಮಾರ್ಟ್ಫೋನ್ಗಳು, ಟ್ಯಾಬ್ಲೆಟ್ಗಳು ಮತ್ತು ಇಯರ್ಬಡ್ ಸೇರಿದಂತೆ ಧರಿಸಬಹುದಾದ ವಸ್ತುಗಳು ಮಾರಾಟವನ್ನು ಸ್ಥಗಿತಗೊಳಿಸಲು 23 ಚಿಲ್ಲರೆ ಮಾರಾಟ ಮಳಿಗೆ ಚೈನ್ಗಳು ನಿರ್ಧರಿಸಿವೆ. ಇತ್ತೀಚಿಗೆ ಈ ಬ್ರಾಂಡ್ ಮೊಬೈಲ್ ಡಿಸ್ಪ್ಲೇ ಇದ್ದಕ್ಕಿದ್ದಂತೆ ಹೋಗಿದ್ದು ಗ್ರಾಹಕರ ಸಮಸ್ಯೆಗೆ ಕಂಪನಿ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ನ ಸುಮಾರು 4,500 ಮಳಿಗೆಗಳಲ್ಲಿ ಒನ್ಪ್ಲಸ್ ಉತ್ಪನ್ನಗಳು ಲಭ್ಯವಿರುವುದಿಲ್ಲ. ಇನ್ನು ಮೊಬೈಲ್ ಹಾನಿಯಾದ ಬಗ್ಗೆ ಗ್ರಾಹಕರು ದೂರು ನೀಡುತ್ತಿದ್ದಾರೆ. ಕಡಿಮೆ ಪ್ರಮಾಣದ ಲಾಭಾಂಶ, ಕ್ಲೈಮ್ ಪ್ರಕ್ರಿಯೆಯಲ್ಲಿನ ವಿಳಂಬ ಮತ್ತು ಬಂಡಲಿಂಗ್ಗೆ ಸಂಬಂಧಿಸಿದ ಬಗೆಹರಿಯದ ಸಮಸ್ಯೆಗಳಿಂದಾಗಿ ಉತ್ಪನ್ನಗಳ ಮಾರಾಟ ನಿಲ್ಲಿಸುವ ಕಠಿಣ ನಿರ್ಧಾರಕ್ಕೆ ಮಳಿಗೆಗಳು ಬಂದಿವೆ.
ಕಳೆದ ವರ್ಷವಿಡೀ ಒನ್ಪ್ಲಸ್ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದಂತೆ ಗಮನಾರ್ಹ ಸಮಸ್ಯೆಗಳನ್ನು ನಾವು ಎದುರಿಸಿದ್ದೇವೆ. ಇದು ಇನ್ನೂ ಬಗೆಹರಿದಿಲ್ಲ. ಗೌರವಾನ್ವಿತ ಪಾಲುದಾರರಾಗಿ ಒನ್ಪ್ಲಸ್ನೊಂದಿಗೆ ಹೆಚ್ಚು ಫಲಪ್ರದ ಸಹಯೋಗವನ್ನು ನಾವು ಆಶಿಸಿದ್ದೇವೆ. ಈಗಿರುವ ಸಮಸ್ಯೆಗಳಿಂದಾಗಿ ನಮ್ಮ ಮಳಿಗೆಗಳಲ್ಲಿ ನಿಮ್ಮ ಉತ್ಪನ್ನಗಳ ಮಾರಾಟವನ್ನು ನಿಲ್ಲಿಸುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆಗಳಿಲ್ಲ,” ಎಂದು ಏಪ್ರಿಲ್ 10ರಂದು ಒನ್ಪ್ಲಸ್ ಇಂಡಿಯಾದ ಮಾರಾಟ ವಿಭಾಗದ ನಿರ್ದೇಶಕ ರಂಜೀತ್ ಸಿಂಗ್ ಅವರಿಗೆ ಬರೆದ ಪತ್ರದಲ್ಲಿ ದಕ್ಷಿಣ ಭಾರತೀಯ ಸಂಘಟಿತ ಚಿಲ್ಲರೆ ವ್ಯಾಪಾರಿಗಳ ಸಂಘದ (ಒಆರ್ಎ) ಅಧ್ಯಕ್ಷ ಶ್ರೀಧರ್ ಟಿಎಸ್ ತಿಳಿಸಿದ್ದಾರೆ.
ವಾರೆಂಟಿ ಮತ್ತು ಸರ್ವಿಸ್ ಕ್ಲೇಮ್ಗಳನ್ನು ಪ್ರಕ್ರಿಯೆಗೊಳಿಸುವುದರಲ್ಲಿ ಮುಂದುವರಿದ ವಿಳಂಬ ಮತ್ತು ಸಮಸ್ಯೆಗಳನ್ನು ಚಿಲ್ಲರೆ ವ್ಯಾಪಾರಿಗಳು ಎತ್ತಿ ತೋರಿಸಿದ್ದಾರೆ. ಇದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ಸಮಸ್ಯೆಗಳನ್ನು ಪರಿಹರಿಸಲು ಹಲವು ಸಲ ಪ್ರಯತ್ನ ನಡೆಸಿಯೂ ಫಲ ನೀಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ