-ಜಾತಿ ಸೂಚಕ ಸ್ಟೀಕರ್ ಇದ್ದರೆ ಬಿಳುತ್ತೆ ಫೈನ್
-ಉತ್ತರಪ್ರದೇಶ ಸಾರಿಗೆ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಆದೇಶ ಜಾರಿಗೆ
ತಮಿಳುನಾಡು ಪೋಲಿಸರು ಕಳೆದ ಹಲವು ದಿನಗಳಿಂದ ಕಾರುಗಳಲ್ಲಿ ಅಳವಡಿಸಿರುವ ಹೆಚ್ಚುವರಿ ಬಂಪರ್ ಗಳನ್ನು ತೆಗೆದು ಹಾಕುವ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಒಳಗಾಗಿತ್ತು. ಇದೀಗ ತಮಿಳುನಾಡು ಮತ್ತು ಉತ್ತರಪ್ರದೇಶದಲ್ಲಿ ಸಹ ವಿಶೇಷವಾದ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ದ್ವಿಚಕ್ರ ವಾಹನ ಹಾಗೂ ಕಾರುಗಳ ಮಾಲೀಕರು ನಂಬರ್ ಪ್ಲೇಟ್ಹಾಗೂ ವಿಂಡ್ಸ್ಕ್ರೀನ್ಗಳಲ್ಲಿ ಜಾತಿ ಸೂಚಕ ಸ್ಟಿಕ್ಕರ್ಗಳನ್ನು ಅಂಟಿಸಿಕೊಳ್ಳುವುದು ಸಾಮಾನ್ಯ
ವಾದದ್ದು, ಆದರೆ ದೇಶಾದ್ಯಂತ ಇದು ಕಂಡು ಬಂದರೂ ಉತ್ತರ ಪ್ರದೇಶದಲ್ಲಿ ತುಸು ಜಾಸ್ತಿಯೇ ಆಗಿದೆ. ಈ ಬಗ್ಗೆ ಮಹಾರಾಷ್ಟ್ರದ ಶಿಕ್ಷಕರೊಬ್ಬರು ಪ್ರಧಾನ ಮಂತ್ರಿಗಳ ಕಚೇರಿಗೆ ಪತ್ರ ಬರೆದು ಜಾತಿ ಸೂಚಕ ಸ್ಟಿಕ್ಕರ್ ಅಳವಡಿಕೆ ವ್ಯವಸ್ಥೆಗೆ ಕೊನೆ ಹಾಡಬೇಕು ಎಂದು ಮನವಿ ಮಾಡಿದ್ದರು.
ದೂರನ್ನು ಪರಿಶೀಲಿಸಿದ ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿಗಳು ವಾಹನಗಳ ಮೇಲೆ ಜಾತಿ ಸೂಚಕ ಸ್ಟಿಕ್ಕರ್ ಗಳನ್ನು ಪ್ರದರ್ಶಿಸುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದರು.
ಪ್ರಧಾನ ಮಂತ್ರಿ ಕಚೇರಿಯ ಸೂಚನೆಗಳನ್ನು ಅನುಸರಿಸಿ, ವಾಹನಗಳ ಮೇಲೆ ಈ ರೀತಿಯ ಸ್ಟಿಕ್ಕರ್ಗಳನ್ನು ಅಂಟಿಸುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಸಾರಿಗೆ ಇಲಾಖೆಯು ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.