- ತಮ್ಮ ಹಳೆಯ ಪ್ರವೃತಿ ಮುಂದುವರೆಸಿದ ಭಾರತದ ಹೆಮ್ಮೆಯ ಆಟಗಾರ
- ಸೈಯದ್ ಮುಷ್ತಾಕ್ ಆಲಿ ಟ್ರೋಫಿ ಆಡಲಿರುವ ಎಸ್. ಶ್ರೀಶಾಂತ್
ಸರಿ ಸುಮಾರು 8 ವರ್ಷಗಳ ಕಾಲ ಕ್ರಿಕೆಟ್ ಗೆ ವಿದಾಯ ಹೇಳಿದ ಭಾರತದ ಹೆಮ್ಮೆಯ ಹಿರಿಯ ಆಟಗಾರ ಶ್ರೀಶಾಂತ್ ರವರು ಮುಷಾಕ್ ಆಲಿ ಟ್ರೋಫಿ ಟೂರ್ನಿ ಕೇರಳ ತಂಡದಲ್ಲಿ ಹಿರಿಯ ವೇಗಿ ಮತ್ತೆ ಅಭಿಮಾನಿಗಳ ಮುಂದೆ ಬರಲಿದ್ದಾರೆ.
ಹೊಸದಿಲ್ಲಿ:
ಟಿ20 ಟೂರ್ನಿಯ ನಿಮಿತ್ತ ಶ್ರೀಶಾಂತ್ ಅಭ್ಯಾಸ ಪಂದ್ಯಗಳಲ್ಲಿ ತೊಡಗಿದ್ದಾರೆ. ಹಿಂದೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತೋರಿದ್ದ ಅದೇ ಆಕ್ರಮಣಕಾರಿ ಮನೋಭಾವವನ್ನು ಮುಂದುವರಿಸಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಬೌಲಿಂಗ್ ಆರಂಭಿಸಿದ ಶ್ರೀಶಾಂತ್, ಬ್ಯಾಟ್ಸ್ಮನ್ಗಳನ್ನು ಸ್ಲೆಡ್ಜ್ ಮಾಡುವ ಮೂಲಕ ತಮ್ಮ ಹಳೆಯ ಪ್ರವೃತ್ತಿಯನ್ನು ಪುನರಾವರ್ತಿಸಿದ್ದಾರೆ.
ಕೇರಳ ಕ್ರಿಕೆಟ್ ಅಸೋಸಿಯೇಷನ್(ಕೆಸಿಎ) ಶ್ರೀಶಾಂತ್ ಅವರ ಬೌಲಿಂಗ್ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಶೇರ್ ಮಾಡಿದೆ..
ಜನವರಿ 10 ರಿಂದ ಆರಂಭವಾಗುವ ಟಿ20 ಚಾಂಪಿಯನ್ಶಿಪ್ ನಿಮಿತ್ತಾ ಕೇರಳ ಟೀಮ್ ಮ್ಯಾನೇಜ್ಮೆಂಟ್ನಿಂದ ತಂಡದ ಕ್ಯಾಪ್ ಸ್ವೀಕರಿಸುತ್ತಿದ್ದ ವಿಡಿಯೋವನ್ನು ಸ್ವತಃ 37ರ ಪ್ರಾಯದ ವೇಗಿಯೇ ತಮ್ಮ ಟ್ವಿಟರ್ನಲ್ಲಿ ಬುಧವಾರ ಶೇರ್ ಮಾಡಿದ್ದರು. ಈ ವೇಳೆ ಟೈಮ್ಸ್ ಆಫ್ ಇಂಡಿಯಾಗೆ ಪ್ರತಿಕ್ರಿಯಿಸಿದ ವೇಗಿ, 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಬೇಕೆಂಬ ಗುರಿ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.