Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ನಾರಾಯಣ ಗುರು ಜಯಂತಿ

ತೀರ್ಥಹಳ್ಳಿಯಲ್ಲಿ ನಾರಾಯಣ ಗುರು ಜಯಂತಿ 

– ಶ್ರೀ ನಾರಾಯಣ ಗುರು ವಿಚಾರ ವೇದಿಕೆ, ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜನೆ 

– ಈಡಿಗ ಸಂಘ, ಬಿಲ್ಲವ ಸಂಘ, ಸಂಘ ಸಂಸ್ಥೆಗಳ ಸಹಯೋಗ

NAMMUR EXPRESS NEWS 

ತೀರ್ಥಹಳ್ಳಿ: ಶ್ರೀ ನಾರಾಯಣ ಗುರು ವಿಚಾರ ವೇದಿಕೆ ( ಎಸ್. ಎನ್.ಜಿ.ವಿ ) ತೀರ್ಥಹಳ್ಳಿ ಹಾಗೂ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅದ್ದೂರಿಯಾಗಿ ಶ್ರೀ ನಾರಾಯಣ ಗುರುಗಳ ಜಯಂತಿ ಹಾಗೂ ಮಾಜಿ ಮುಖ್ಯ ಮಂತ್ರಿ ದೇವರಾಜ್ ಅರಸುರವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಶಾಶಕರಾದ ಆರಗ ಜ್ಞಾನೇಂದ್ರ ಅನುಪಸ್ಥಿತಿಯಲ್ಲಿ ತಾಲ್ಲೂಕು ದಂಡಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಈಡಿಗ ಸಂಘದ ಅಧ್ಯಕ್ಷರಾದ ಮಟ್ಟಿನಮನೆ ರಾಮಚಂದ್ರ, ಬಿಲ್ಲವ ಸಂಘದ ಅಧ್ಯಕ್ಷರಾದ ಮಂಜುನಾಥ್, ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಅಧ್ಯಕ್ಷರಾದ ವಿಶಾಲ್ ುಾರ್,, ಶ್ರೀ ನಾರಾಯಣ ಗುರುಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊದಲ ಶಿವು,ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷರು ಆದ ಸಚ್ಚಿoದ್ರ ಹೆಗಡೆ, ಸ್ಥಾಯೀ ಸಮಿತಿ ಅಧ್ಯಕ್ಷ ಗಣಪತಿ,,ಮಹಿಳಾ ಸಂಘಗಳ ಅಧ್ಯಕ್ಷರಾದ ಕುಸುಮ ಕುಮಾರ್, ಸುಜಯಾ ಕಾಂತರಾಜ್, ಗೀತಾ ರಾಘವೇಂದ್ರ, ನಾಗವೇಣಿ ಚಂದ್ರಶೇಖರ್ ಹಾಗೂ ತಾಲ್ಲೂಕು ಆಡಳಿತದ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಂಪನ್ಮೂಲ ವ್ಯಕ್ತಿ ರವಿಕುಮಾರ್ ಅವರು ಶ್ರೀ ನಾರಾಯಣ ಗುರು ಅವರ ಬಗ್ಗೆ ಮಾತನಾಡಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.