ರಾಜ್ಯದ ಶಿಕ್ಷಣ ದಾಸೋಹದ ಸಂತ ಡಾ.ಮೋಹನ್ ಆಳ್ವ!
– ಗುಣಮಟ್ಟದ ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಲೋಕದ ರಾಯಭಾರಿ: ಸಾವಿರಾರು ಮಂದಿಗೆ ಉದ್ಯೋಗದಾತ
– ಹುಟ್ಟು ಹಬ್ಬದ ಶುಭಾಶಯಗಳು ಸಾರ್
NAMMUR EXPRESS NEWS
ಮೂಡಬಿದರೆ: ರಾಜ್ಯದ ಶಿಕ್ಷಣ ದಾಸೋಹದ ಸಂತ, ಶಿಕ್ಷಣ ತಜ್ಞ, ಆಳ್ವಾಸ್ ಶಿಕ್ಷಣ ಸಂಸ್ಥಾಪಕ ಮೋಹನ್ ಆಳ್ವ ಅವರ ಜನ್ಮ ದಿನ ಮೇ 31. ದೇಶದ ಶಿಕ್ಷಣ ಕ್ಷೇತ್ರದಲ್ಲಿ ಇವರದ್ದು ದೊಡ್ಡ ಹೆಸರು. 3 ದಶಕಗಳಿಂದ ಗುಣಮಟ್ಟದ ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಲೋಕದ ರಾಯಭಾರಿಯಾಗಿ ಲಕ್ಷ ಲಕ್ಷ ಮಂದಿಗೆ ಉದ್ಯೋಗದಾತರಾಗಿದ್ದು, ಕೋಟ್ಯಂತರ ವಿದ್ಯಾರ್ಥಿಗಳ ಬದುಕಿಗೆ ಗುರುಗಳಾಗಿದ್ದಾರೆ. ಇದೀಗ ಮೇ 31 ಅವರ ಹುಟ್ಟು ಹಬ್ಬದಂದು ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಆಳ್ವಾಸ್ ಪ್ರಗತಿ ಮೂಲಕ ಪ್ರತಿ ವರ್ಷ ಉದ್ಯೋಗ ಮೇಳ ಆಯೋಜಿಸಿ ಸಾವಿರಾರು ಮಂದಿಗೆ ಉದ್ಯೋಗ ಕೂಡ ಕೊಡಿಸುತ್ತಿದ್ದಾರೆ.
ಕೃಷಿ ಕುಟುಂಬದಲ್ಲಿ ಹುಟ್ಟಿ ಸಾಧನೆ!
ಡಾ.ಮೋಹನ್ ಆಳ್ವ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಮಿಜಾರು ಎಂಬಲ್ಲಿ ಮೇ 31, 1952 ರಂದು ಕೃಷಿಕ ಕುಟುಂಬದಲ್ಲಿ ಜನಿಸಿದರು. ಇವರು ತಮ್ಮ ಸ್ಥಳೀಯ ಹಳ್ಳಿಯಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದು, ನಂತರ ಉನ್ನತ ಶಿಕ್ಷಣವನ್ನು ಉಡುಪಿಯ ಎಸ್ ಡಿ ಎಂ ಆಯುರ್ವೇದ ಕಾಲೇಜಿನಲ್ಲಿ ಪಡೆದರು. 1995ರಲ್ಲಿ ಆಳ್ವಾಸ್ ಎಜುಕೇಶನ್ ಫೌಂಡೇಶನ್ (ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ)ವನ್ನು ಸ್ಥಾಪಿಸಿದರು. ಪ್ರತಿ ವರ್ಷ 25,000ಕ್ಕೂ ಅಧಿಕ ವಿದ್ಯಾರ್ಥಿಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಸಂಸ್ಥೆಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ವೈದ್ಯರಾಗಿ ಬಡವರಿಗೆ, ಎಚ್ಐವಿ ಸೋಂಕಿತರಿಗೆ ಸಹಾಯ ಮಾಡಿದ್ದಾರೆ.
ಭಾರತೀಯ ಶಾಸ್ತ್ರೀಯ ಮತ್ತು ಸಾಂಪ್ರದಾಯಿಕ ಸಂಗೀತ, ನೃತ್ಯ, ನಾಟಕ ಹಾಗೂ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಸಾವಿರಾರು ಕ್ರೀಡಾಪಟುಗಳು, ಸಾಂಸ್ಕೃತಿಕ ನಾಯಕರನ್ನು ತಯಾರು ಮಾಡಿದ ನಾಯಕರು ಡಾ.ಮೋಹನ್ ಆಳ್ವ. ಆಳ್ವಾಸ್ ನುಡಿ ಸಿರಿ ಮೂಲಕ ಸಾಂಸ್ಕೃತಿಕ ಕ್ಷೇತ್ರಕ್ಕೆ ಅನೇಕ ಸಾಧಕರನ್ನು ನೀಡಿದ್ದಾರೆ. ಜತೆಗೆ ಸಂಸ್ಕೃತಿ, ಕಲೆ, ಜಾನಪದ, ಸಾಂಸ್ಕೃತಿಕ ಕ್ಷೇತ್ರಕ್ಕೆ ಅತೀ ಹೆಚ್ಚು ಕೊಡುಗೆ ನೀಡಿದ್ದಾರೆ.
ಪ್ರತಿ ವರ್ಷವೂ 5000ಕ್ಕೂ ಹೆಚ್ಚು ಮಂದಿಗೆ ಉದ್ಯೋಗ!
ಆಳ್ವಾಸ್ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿ ವರ್ಷವೂ 5000ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡುವ ಮೂಲಕ ಸಾವಿರಾರು ಕುಟುಂಬಗಳಿಗೆ ಉದ್ಯೋಗದಾತರಾಗಿದ್ದಾರೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷ ಲಕ್ಷ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದಾರೆ.
ಬಡವರ ಪಾಲಿನ ಅರೋಗ್ಯದಾತ!
ವೈದ್ಯಕೀಯ ಸೇವೆಗಳನ್ನು ಸುಸಜ್ಜಿತ 300 ಹಾಸಿಗೆಯ ‘ಆಳ್ವಾಸ್ ಆರೋಗ್ಯ ಕೇಂದ್ರ ‘ದಲ್ಲಿ ಅನುಭವಿ ವೈದ್ಯರು ಮತ್ತು ಬಹು ವಿಶೇಷ ವೈದ್ಯಕೀಯ ಸೇವೆಯನ್ನು ಕಲ್ಪಿಸಿದ್ದಾರೆ. ಇಲ್ಲಿನ ಜನರು ವೈದ್ಯಕೀಯ ಸೇವೆಗಾಗಿ 35- 40 ಕಿ. ಮಿ ದೂರ ದಣಿದು ಮಂಗಳೂರು ತೆರಳಬೇಕಿತ್ತು, ಇಲ್ಲಿನ ಜನರ ಸೇವೆ ಮಾಡಲು ಆರೋಗ್ಯ ಕೇಂದ್ರವನ್ನು ಸ್ಥಾಪಿಸಿದ್ದರು. ಅವರು ಮೂಡಬಿದ್ರೆ ಜಿಲ್ಲೆಯಲ್ಲಿ ಮೊದಲ ಹಾವು ಕಡಿತದ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಿದರು. ಅನೇಕ ಪ್ರಕರಣಗಳಲ್ಲಿ ಇದುವರೆಗೂ 2 ಅಥವಾ 3 ಸಾವಿನ ಪ್ರಕರಣಗಳು ಹೊರತುಪಡಿಸಿ ಹಾವು ಕಡಿತದಿಂದ ಸುಮಾರು 6000 ಪ್ರಕರಣಗಳಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ. 1990ರಲ್ಲಿ ಅವರು ಸ್ಥಾಪಿಸಿದ ಉಚಿತ ಬರ್ತ್ ಕಂಟ್ರೋಲ್ ಸೆಂಟರ್ ಅಲ್ಲಿ ಸಾವಿರಾರು ಜನರು ಆಳ್ವಾಸ್ ಆರೋಗ್ಯ ಕೇಂದ್ರದಲ್ಲಿ ಉಚಿತ ಬರ್ತ್ ಕಂಟ್ರೋಲ್ ಟ್ರೀಟ್ಮೆಂಟ್ ಪಡೆದ್ದಿದ್ದಾರೆ. ಬಳಿಕ ಎಚ್ ಐ ವಿ ಪಾಸಿಟಿವ್ ರೋಗಿಗಳು ಎದುರಿಸುವ ತೊಂದರೆಗಳನ್ನು ಅರಿತ ಎಚ್ಐವಿ ಉಚಿತ ಚಿಕಿತ್ಸೆ ಕೇಂದ್ರವಾಗಿ ಉನ್ನತೀಕರಿಸಲಾಯಿತು.
ಡಾ ಎಂ. ಮೋಹನ್ ಆಳ್ವರ ನಾಯಕತ್ವದಲ್ಲಿ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಡಿಯಲ್ಲಿ ವಿವಿಧ ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಬೋಧನಾ ವಿಧಾನ ಪಠ್ಯಕ್ರಮದ ಮಿತಿ ಇಲ್ಲದೆ, ವ್ಯಕ್ತಿತ್ವ ಬೆಳವಣಿಗೆ, ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡೆಗಳು, ಫೈನ್ ಆರ್ಟ್ಸ್ ಮತ್ತು ತರಬೇತಿ ಪಡೆದ ಶಿಕ್ಷಕರ ಅಡಿಯಲ್ಲಿ ರಾಷ್ಟ್ರೀಯ ಏಕೀಕರಣ ಕಡೆಗೆ ಇತರ ಸಾಮಾಜಿಕ ತರಬೇತಿಯನ್ನು ನೀಡುತ್ತಿದೆ.
ಆಳ್ವಾಸ್ ವಿದ್ಯಾ ಸಂಸ್ಥೆಗಳ ಸಾಧನೆ
ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ
ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ
ಆಳ್ವಾಸ್ ಕೇಂದ್ರೀಯ ವಿದ್ಯಾಲಯ ಆಳ್ವಾಸ್ ವಿಶೇಷ ಮಕ್ಕಳ ಶಾಲೆ
ಆಳ್ವಾಸ್ ಪದವಿ ಪೂರ್ವ ಕಾಲೇಜು
ಆಳ್ವಾಸ್ ಕಾಲೇಜು(ಸ್ನಾತಕ, ಸ್ನಾತಕೋತ್ತರ)
ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು
ಆಳ್ವಾಸ್ ಹೋಮಿಯೋಪಥಿ ಮೆಡಿಕಲ್ ಕಾಲೇಜು
ಆಳ್ವಾಸ್ ಕಾಲೇಜ್ ಆಫ್ ಫಿಸಿಯೋಥೆರಪಿ
ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್
ಆಳ್ವಾಸ್ ನರ್ಸಿಂಗ್ ಕಾಲೇಜು
ಆಳ್ವಾಸ್ ನ್ಯಾಚುರೋಪತಿ ಆಂಡ್ ಯೋಗಿಕ್ ಸೈನ್ಸ್
ಆಳ್ವಾಸ್ ಕಾಲೇಜ್ ಆಫ್ ಮೆಡಿಕಲ್ ಲ್ಯಾಬ್ ಟಕ್ನಿಷಿಯನ್
ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ
ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯ
ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು
ವಿಶೇಷ ಚೇತನರಿಗೂ ನೆರವು
ಮೂಡಬಿದಿರೆಯ ಸುಮಾರು 700 ವಿಕಲಾಂಗ ಮಕ್ಕಳಿಗೆ ಸ್ಕಾಲರ್ ಶಿಪ್ ನೀಡುತ್ತಾ ಬಂದಿದ್ದಾರೆ. 2008 ರಲ್ಲಿ ಆಳ್ವ ರವರ ಬೆಳವಣಿಗೆಯ ಅಸಮರ್ಥ್ಯ ಮಕ್ಕಳಿಗೆ ಗುಣಮಟ್ಟದ ಜೀವನ ಮತ್ತು ಶಿಕ್ಷಣ ಒದಗಿಸುವ ಸಲುವಾಗಿ ಒಂದು ಶಾಲೆಯ ಆರಂಭಿಸಲು ನಿರ್ಧರಿಸಿದ್ದರು. ಪ್ರಸ್ತುತ 25 ಮಕ್ಕಳು,ವಿಶೇಷವಾಗಿ ತರಬೇತಿ ಪಡೆದ ಶಿಕ್ಷಕರು ಮತ್ತು ಸಾಮಾಜಿಕ ಕೆಲಸಗಾರರ ಮೂಲಕ ತರಬೇತಿ ಪಡೆಯುತ್ತಿದ್ದಾರೆ. ಯಾವುದೆ ಹಣಕಾಸಿನ ನೆರವು ಅಥವಾ ಬೆಂಬಲವಿಲ್ಲದೆ ಇವರು ಈ ಶಾಲೆಯನ್ನು ನಡೆಸುತ್ತಿದ್ದಾರೆ. ಮೂಡಬಿದ್ರೆ ಮತ್ತು ಸುಮಾರು ಬಡ ಗ್ರಾಮೀಣ ಶಾಲೆಗಳಿಗೆ ಶಿಕ್ಷಕರ ತುರ್ತು ಅವಶ್ಯಕತೆ ಅರಿತ 25-30 ಶಿಕ್ಷಕರನು ಒದಗಿಸಿ, ಶಿಕ್ಷಕರ ಮಾಸಿಕ ವೇತನವನ್ನು ನೋಡಿಕೊಳ್ಳುತ್ತಿದ್ದಾರೆ. ಈ ವರ್ಷವು 30 ಶಿಕ್ಷಕರನ್ನು ಡಾ ಆಳ್ವರವರು ಹಿಂದುಳಿದ ಗ್ರಾಮೀಣ ಶಾಲೆಗಳಿಗೆ ಉಚಿತವಾಗಿ ನೀಡಿದ್ದಾರೆ.
ಕ್ರೀಡಾ ಕ್ಷೇತ್ರದ ಭೀಷ್ಮ
ಡಾ.ಮೋಹನ್ ಆಳ್ವರವರು ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಪ್ರೋತ್ಸಾಹ ಉಪಕ್ರಮಗಳಿಗೆ ಹೆಸರುವಾಸಿಯಾಗಿದೆ.ಅವರ ಕಾಲೇಜು ದಿನಗಳಲ್ಲಿ ಉತ್ತಮ ಕ್ರೀಡಾಪಟು, ಅವರ ಉತ್ಸಾಹ ಮತ್ತು ಪ್ರಬಲ ದೃಷ್ಟಿಯಿಂದ ಯುವಕ ಯುವತಿಯರನ್ನು ಪ್ರೋತ್ಸಾಹಿಸಲು ‘ಏಕಲವ್ಯ ಸ್ಪೋರ್ಟ್ಸ್ ಕ್ಲಬ್.1984ರಲ್ಲಿ ಸ್ಥಾಪಿಸಿದರು. ನಂತರ ಸುಮಾರು 600-650 ವಿದ್ಯಾರ್ಥಿಗಳು ಈ ಯೋಜನೆಯಡಿಯಲ್ಲಿ ಸರಿಯಾಗಿ ತರಬೇತಿ ನೀಡಿ ಉಚಿತ ಆಹಾರ ಮತ್ತು ವಸತಿಯನ್ನು ಕಲ್ಪಿಸಲಾಗಿದೆ.ಈಗ ಸುಮಾರು 100 ಕ್ರೀಡಾ ಪುರುಷರು ಮತ್ತು ಮಹಿಳೆಯರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಉತ್ತಮ ಹೆಸರು ತಂದುಕೊಟ್ಟಿದ್ದಾರೆ ಮತ್ತು ಈಗ ಅವರು ಚೆನ್ನಾಗಿ ಜೀವನದಲ್ಲಿ ಮುಂದುವರಿಯುತ್ತಿದ್ದಾರೆ, 2008 ರಲ್ಲಿ ಸುಮಾರು 200 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಆಹಾರ ಮತ್ತು ಸೌಕರ್ಯಗಳನ್ನು ಕ್ರೀಡಾ ವಿಭಾಗದಲ್ಲಿ ಕಲ್ಪಿಸಿಕೊಟ್ಟಿದ್ದಾರೆ. ದೇಶಕ್ಕೆ ಅತೀ ಹೆಚ್ಚು ಕ್ರೀಡಾಪಟುಗಳನ್ನು ಆಳ್ವಾಸ್ ಸಂಸ್ಥೆ ಕೊಟ್ಟಿದೆ. ಈಗ ಅವರ ಪುತ್ರರಾದ ವಿವೇಕ್ ಆಳ್ವ ಮತ್ತು ವಿನಯ್ ಆಳ್ವ ಸಂಸ್ಥೆಯ ಏಳ್ಗೆಗಾಗಿ ತಂದೆಯ ಹಾದಿಯಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ.