–ಬಾಯಾರಿಕೆಯಲ್ಲಿದೆ ಆರೋಗ್ಯದ ಸತ್ಯ
-ಬಾಯಿ ಒಣಗುತ್ತಿದ್ದರೆ ಇರಲಿ ಗಮನ
ದೇಹದಲ್ಲಿರುವ ನೀರು ಮೂತ್ರ ವಿಸರ್ಜನೆ, ಅತಿಸಾರ, ವಾಂತಿ ಮತ್ತು ಬೆವರಿನ ಮೂಲಕ ಹೊರ ಹೋಗುತ್ತದೆ. ದೇಹದಲ್ಲಿ ನೀರಿನಾಂಶ ಖಾಲಿಯಾದಾಗ ಅತಿಯಾಗಿ ಬಾಯಾರಿಕೆಯಾಗುತ್ತದೆ. ಈ ಅತಿಯಾದ ಬಾಯಾರಿಕೆ ಕೂಡ ಕೆಲವು ರೋಗಗಳ ಲಕ್ಷಣವಾಗಿದೆ.
ಮಧುಮೇಹ ರೋಗದಿಂದ ಬಳಲುತ್ತಿರುವವರ ದೇಹದಲ್ಲಿ ಸಕ್ಕರೆ ಮಟ್ಟ ಅಧಿಕವಾಗಿದ್ದಾಗ ಮೂತ್ರಪಿಂಡಗಳು ಸಕ್ಕರೆ ಮಟ್ಟವನ್ನು ನಿಭಾಯಿಸಲಾಗದೆ ಅದು ಮೂತ್ರದಲ್ಲಿ ಸೇರಿಕೊಂಡು ದೇಹದ ನೀರನ್ನು ಹೊರಹಾಕುತ್ತದೆ.
ಅತಿಸಾರ, ಶಾಖ, ಜ್ವರದಿಂದ ದೇಹದಲ್ಲಿನ ನೀರಿನಾಂಶ ಕಡಿಮೆಯಾಗುತ್ತದೆ. ಇದರಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗಿ ಅತಿ ಹೆಚ್ಚು ಬಾಯಾರಿಕೆಯಾಗುವ ಸಾಧ್ಯತೆ ಇದೆ.
ನೀವು ಅತಿಯಾದ ಚಿಂತೆ ಮಾಡುತ್ತಿದ್ದಾಗ ಲಾಲಾರಸವು ನಷ್ಟವಾಗುತ್ತದೆ. ಇದರಿಂದ ಬಾಯಿ ಒಣಗಿದಂತೆ ಭಾಸವಾಗುತ್ತದೆ.
ಮಸಾಲೆ ಮತ್ತು ಎಣ್ಣೆ ಪದಾರ್ಥಗಳನ್ನು ಸೇವಿಸಿದಾಗ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ. ಆ ವೇಳೆ ಆಹಾರ ಜೀರ್ಣವಾಗಲು ದ್ರವ ಸಾಕಾಗದಿದ್ದಾಗ ಅತಿಯಾಗಿ ಬಾಯಾರಿಕೆ ಉಂಟಾಗುತ್ತದೆ.
ದೇಹದಲ್ಲಿ ರಕ್ತಹೀನತೆ ಸಮಸ್ಯೆ ಇದ್ದಾಗ, ಕೆಂಪು ರಕ್ತದ ಕಣ ಕಡಿಮೆ ಇದ್ದಾಗ ಆರೋಗ್ಯ ಸಮಸ್ಯೆ ಎದುರಾಗಿ ಅತಿಯಾಗಿ ಬಾಯಾರಿಕೆ ಉಂಟಾಗಬಹುದು.