ಮಳೆಗಾಲ: ಆಡಳಿತ ಅಲರ್ಟ್!
– ಚುನಾವಣೆಗೆ ಸಮಯ ವ್ಯರ್ಥವಾಗಿದೆ: ಇನ್ನಾದ್ರೂ ಕೆಲಸ ಮಾಡೋಣ
– ಸರ್ಕಾರಿ ಆಸ್ಪತ್ರೆ ಸಮಸ್ಯೆಗಳ ಬಗ್ಗೆ ಚರ್ಚೆ!: ಏನೇನ್ ಚರ್ಚೆ ಆಯ್ತು
– ಶಿಕ್ಷಕರ ಕೊರತೆ, ಗಾಂಜಾ ದಂಧೆ ವಿರುದ್ಧ ಸಭೆಯಲ್ಲಿ ದನಿ
NAMMUR EXPRESS NEWS
ತೀರ್ಥಹಳ್ಳಿ: ಮಳೆ ಮುಂಜಾಗ್ರತಾ ಕೆಲಸಗಳು, ಕೃಷಿ ಪೂರ್ವ ಕೆಲಸಗಳು, ಗ್ರಾಮೀಣ ರಸ್ತೆಗಳ ನಿರ್ವಹಣೆ, ಶುದ್ದ ಕುಡಿಯುವ ನೀರಿನ ಸರಬರಾಜು ಹೀಗೆ ಬಹಳಷ್ಟು ಕೆಲಸಗಳು ವ್ಯವಸ್ಥಿತ ರೀತಿಯಲ್ಲಿ ಆಗಲೇ ಬೇಕಿದೆ. ಚುನಾವಣೆಗಾಗಿ ಇಡೀ ಆಡಳಿತ ಯಂತ್ರ 3-4 ತಿಂಗಳು ವ್ಯಯಿ ಸಲ್ಪಟ್ಟಿವೆ. ಈಗ ಕ್ಷೇತ್ರದ ಜನರಿಗೆ, ರೈತರಿಗೆ ಬರಲಿರುವ ಮಳೆಗಾಲದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಕಡಿಮೆ ಅವಧಿಯಲ್ಲಿ ಹೆಚ್ಚುಕೆಲಸ ಮಾಡಲೇಬೇಕಾದ ಹೊಣೆ ನಿಮ್ಮದು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರ ಅಭಿವೃದ್ಧಿ ಹಾಗೂ ಜನಸಾಮಾನ್ಯರ ಕೆಲಸ ಕಾರ್ಯಗಳು ನಿಲ್ಲಬಾರದು. ಅಧಿಕಾರಿ ವರ್ಗಕ್ಕೆ ಏನೇ ಅಗತ್ಯಗಳು ಬೇಕಿದ್ದಲ್ಲಿ ನಾನು ಅದನ್ನು ಕಲ್ಪಿಸಿಕೊಡುತ್ತೇನೆ. ನೀವು ಜನಸ್ಪಂದನೆಯ ಕರ್ತವ್ಯ ನಿರ್ವಹಿಸಬೇಕು. ನಾಗರೀಕರ ಮೂಲಭೂತ ಸೌಕರ್ಯಗಳಿಗೆ ತೊಂದರೆ ಆಗಬಾರದು. ರೈತರ ಕೃಷಿ ಚಟುವಟಿಕೆಗಳಿಗೆ ಏನೆಲ್ಲಾ ವ್ಯವಸ್ಥೆಗಳು ಬೇಕೋ ಅದು ಆಗಬೇಕು ಎಂದು ಜೂನ್ 11 ರಂದು ಶಾಸಕ ಆರಗ ಜ್ಞಾನೇಂದ್ರ ಅಧಿಕಾರಿಗಳಿಗೆ ಮಾರ್ಗದರ್ಶನ ಗೈದರು.