ಹೋಟೆಲ್ ಕಷ್ಟದ ಸ್ಟೋರಿ ಹೇಳಿದ ನಟ ಸುನಿಲ್ ಶೆಟ್ಟಿ!
– ಕರಾವಳಿಗರಿಗೆ ಬದುಕು ನೀಡಿದ ಹೋಟೆಲ್ ಉದ್ಯಮ
– ಅಪ್ಪ ಕೆಲಸ ಮಾಡಿದ್ದ ಹೋಟೆಲ್ ಖರೀದಿ ಮಾಡಿದ ಸುನೀಲ್ ಶೆಟ್ಟಿ
– 9ನೇ ವಯಸ್ಸಿಗೆ ಮುಂಬೈಗೆ: ಸುನಿಲ್ ಶೆಟ್ಟಿ ತಂದೆ ರಿಯಲ್ ಹೀರೋ…!
NAMMUR EXPRESS NEWS
ಖ್ಯಾತ ಬಾಲಿವುಡ್ ನಟ ಮಂಗಳೂರು ಮೂಲದ ಸುನಿಲ್ ಶೆಟ್ಟಿ ತಮ್ಮ ತಂದೆ ಬದುಕಿಗಾಗಿ ತಮ್ಮ 9 ವರ್ಷಕ್ಕೆ ಮಂಗಳೂರು ಬಿಟ್ಟು ಮುಂಬೈ ಮಹಾನಗರಕ್ಕೆ ಬಂದು ಸಾಧನೆ ಮಾಡಿದ ಕಥೆಯನ್ನು ಇಂಟರ್ವ್ಯೂ ಒಂದರಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ ರಿಯಲ್ ಲೈಫ್ ಅಲ್ಲಿ ಅವರ ತಂದೆಯೇ ಹೀರೋ ಆಗಿದ್ದಾರೆ. ಜತೆಗೆ ಕರಾವಳಿ ಹೋಟೆಲ್ ಉದ್ಯಮದ ದಂತ ಕಥೆಯಾಗಿದ್ದಾರೆ.
ಸುನಿಲ್ ಶೆಟ್ಟಿ ಅವರ ತಂದೆ ವೀರಪ್ಪ ಶೆಟ್ಟಿ ಮಂಗಳೂರು ಮೂಲ್ಕಿ ಮೂಲದವರು. ಆಗ ಅವರ ವಯಸ್ಸು 9. ಚಿಕ್ಕ ವಯಸ್ಸಿನಲ್ಲಿ ಮಂಗಳೂರು ಬಿಟ್ಟು ಮುಂಬೈಗೆ ಓಡಿ ಬಂದ ನನ್ನ ಅಪ್ಪ ದಕ್ಷಿಣ ಭಾರತದ ಹೋಟೆಲ್ ವೊಂದರಲ್ಲಿ ಟೇಬಲ್ ಕ್ಲೀನರ್ ಆಗಿ ಕೆಲಸ ಆರಂಭಿಸಿದ್ದರು. ಆಗ ಅಪ್ಪ ಕೆಲಸ ಮಾಡಿದ್ದ ಮೂರು ಹೋಟೆಲ್ಗಳಿಗೆ ಈಗ ನಾನು ಮಾಲೀಕ ಎಂದು ಸುನಿಲ್ ಶೆಟ್ಟಿ ಹೆಮ್ಮೆಯೊಂದಿಗೆ ಹೇಳಿಕೊಂಡಿದ್ದಾರೆ.
ವೀರಪ್ಪ ಶೆಟ್ಟಿ ಅವರ ಬಗ್ಗೆ ಭಾವನಾತ್ಮಕವಾಗಿ ಸುನೀಲ್ ಶೆಟ್ಟಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲೇ ನನ್ನ ಅಪ್ಪನ ತಂದೆ ಮರೆಯಾಗಿದ್ದು, ಕುಟುಂಬಕ್ಕೆ ಆಸರೆಯಾಗಿದ್ದರು. 9ನೇ ವಯಸ್ಸಿನಲ್ಲೇ ಮುಂಬೈಗೆ ಓಡಿ ಬಂದ ನನ್ನ ತಂದೆ ಮೊದಲಿಗೆ ದಕ್ಷಿಣ ಭಾರತದ ಹೋಟೆಲ್ ವೊಂದರಲ್ಲಿ ಟೇಬಲ್ ಕ್ಲೀನರ್ ಆಗಿ ಕೆಲಸಕ್ಕೆ ಸೇರಿಕೊಂಡರು. ನಮ್ಮ ಸಮುದಾಯದಲ್ಲಿ ಆಗ ಪರಸ್ಪರ ಒಬ್ಬರಿಗೊಬ್ಬರು ಆಗುತ್ತಿದ್ದರು. ಹೀಗಾಗಿ ಹೋಟೆಲ್ನಲ್ಲಿ ಕ್ಲೀನರ್ ಆಗಿ ಕೆಲಸ ಸಿಕ್ಕಿತ್ತು. ಹೋಟೆಲ್ ಕೆಲಸ ಅಲ್ಲೇ ಕೆಲಸ ಮುಗಿಸಿ ಗೋಣಿ ಚೀಲ ಹಾಸಿಕೊಂಡು ಮಲಗುತ್ತಿದ್ದರು. ಹೋಟೆಲ್ ಉದ್ಯಮದಲ್ಲೇ ಕ್ಲೀನರ್ ನಿಂದ ಹಂತ ಹಂತವಾಗಿ ಮೇಲೇರಿದ ನನ್ನ ತಂದೆ. ಬಳಿಕ ಆದೇ ಹೋಟೆಲ್ನ ಮ್ಯಾನೇಜರ್ ಆದರು. ಅಷ್ಟೇ ಅಲ್ಲ, ತಾವು ಕೆಲಸ ಮಾಡಿದ ಮೂರು ಹೊಟೇಲ್ಗಳ ಮಾಲೀಕರಾದರು. ಉಡುಪಿ ರೆಸ್ಟೋರೆಂಟ್ ಸೇರಿ ಎಲ್ಲವನ್ನು ಖರೀದಿ ಮಾಡಿದರು. ಈಗ ನಾನು ಈ ಮೂರು ಹೋಟೆಲ್ಗಳು ಮಾಲೀಕನಾಗಿದ್ದು, ಹಾಗೆಯೇ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಎಂದಿದ್ದಾರೆ.
ಅಪ್ಪನ ಹೋಟೆಲ್ ನಡೆಸುತ್ತಿರುವ ಸುನಿಲ್ ಶೆಟ್ಟಿ!
ತುಳುನಾಡ ಕುಟುಂಬದಲ್ಲಿ 11 ಆಗಸ್ಟ್ 1961ರಲ್ಲಿ ಜನಿಸಿದ ಸುನಿಲ್ ಶೆಟ್ಟಿ ಭಾರತ ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರು. 30 ವರ್ಷಗಳ ಹಿಂದಿ ಸಿನಿಮಾ ಜರ್ನಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಒಂದು ಕಾಲಕ್ಕೆ ಮೇರು ನಟರಲ್ಲಿ ಒಬ್ಬರು. ಕನ್ನಡದ ಖ್ಯಾತಿಯನ್ನು ದೇಶದ ಉದ್ದಕ್ಕೂ ಪಸರಿಸಿದ ನಾಯಕ.
ಪತ್ನಿ ಮನ ಶೆಟ್ಟಿ, ಮಗಳು ಅತಿಯಾ ಶೆಟ್ಟಿ, ಮಗ ಅಹನ್ ಶೆಟ್ಟಿ ಕುಟುಂಬ. ಖ್ಯಾತ ಕ್ರಿಕೆಟ್ ಪಟು ಕೆ. ಎಲ್ ರಾಹುಲ್ ಅಳಿಯ.
ತಮ್ಮ ತಂದೆಯ ಉಡುಪಿ ರೆಸ್ಟೋರೆಂಟ್ ಅನ್ನು ಲಿಟಲ್ ಇಟಲಿ ಎಂಬ ರೆಸ್ಟೋರೆಂಟ್ ಆಗಿ ಪರಿವರ್ತಿಸಿದ್ದಾರೆ.