-ಮಂಗಳೂರಿನಲ್ಲಿ ಇಬ್ಬರ ಬಂಧನ
-ಕಸ್ಟಮ್ ಅಧಿಕಾರಿಗಳಿಂದ ತಪಾಸಣೆ
ಮಂಗಳೂರು: ಶಾರ್ಜಾದಿಂದ ಕೇರಳಕ್ಕೆ ಅಕ್ರಮವಾಗಿ 1.09 ಕೋಟಿ ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾ ಡುತ್ತಿದ್ದ ವೇಳೆ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ತಪಾಸಣೆ ನಡೆಸಿ ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಕಾಸರಗೋಡಿನ ಫೈಜಲ್ ತೊಟ್ಟಿ ಮೆಲ್ಪರಂಬ (37) ಮತ್ತು ಮೊಹಮ್ಮದ್ ಶೋಯೇಬ್ ಮುಗು (31) ಬಂಧಿತ ಆರೋಪಿಗಳು.
ಶಾರ್ಜಾದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ ಇವರಿಬ್ಬರನ್ನು ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ ಆರೋಪಿಗಳು ಒಳ ಉಡುಪಿನಲ್ಲಿ 24 ಕ್ಯಾರೆಟ್ನ ಸುಮಾರು 2.15ಕೆ.ಜಿ. ತೂಕದ ಚಿನ್ನದ ಗಟ್ಟಿಯನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳನ್ನು ಕಸ್ಟಮ್ಸ್ ಆಯುಕ್ತ ಇಮಾಮುದ್ದೀನ್ ಅಹ್ಮದ್, ಜಂಟಿ ಆಯುಕ್ತ ಜೋನ್ಸ್ ಜಾರ್ಜ್ ಅಭಿನಂದಿಸಿದ್ದಾರೆ. ಕಸ್ಟಮ್ಸ್ ಉಪ ಆಯುಕ್ತ ಪ್ರವೀಣ್ ಖಾಂದಿ, ಸೂಪರಿಂಡೆಂಟ್ಗಳಾದ ಶ್ರೀಕಾಂತ್ ಕೆ., ನವೀನ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿಗಳನ್ನು ಪತ್ತೆಹಚ್ಚಿದರು.