ಐಟಿ ರಿಟರ್ನ್ಸ್ ಸಲ್ಲಿಕೆ ಆಗಿಲ್ವಾ? ಈಗ್ಲೇ ಮಾಡ್ಕೊಳ್ಳಿ..!
– ಜುಲೈ 31 ಕೊನೆಯ ದಿನ: ಈಗಲೇ ಮಾಡಿದ್ರೆ ಓಕೆ
– ಐಟಿ ರಿಟರ್ನ್ಸ್ ಸಲ್ಲಿಕೆ ಮಾಡದಿದ್ರೆ ಏನಾಗುತ್ತೆ…?
NAMMUR EXPRESS NEWS
2023-24ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಲು ಜುಲೈ 31, 2024 ಕೊನೆಯ ದಿನಾಂಕವಾಗಿದೆ. ಆದರೆ, ಇದಕ್ಕಿನ್ನೂ ಬೇಕಾದಷ್ಟು ಸಮಯ ಇದೆ ಎಂದು ಕೊನೆಯ ದಿನಾಂಕದವರೆಗೂ ಕಾಯುವುದಕ್ಕಿಂತ ಮೊದಲೇ ಫೈಲ್ ಮಾಡುವುದು ಉತ್ತಮ. ಇದರಿಂದ ಹಲವು ಲಾಭಗಳಿವೆ.
2023-24ನೇ ಹಣಕಾಸು ವರ್ಷದ ಐಟಿಆರ್ ಸಲ್ಲಿಕೆ ಮಾಡಲು ಜುಲೈ 31, 2024 ಕೊನೆಯ ದಿನ ಇದಕ್ಕಿನ್ನೂ ಬೇಕಾದಷ್ಟು ಸಮಯ ಇದೆ ಎಂದು ಕೊನೆಯ ದಿನಾಂಕದವರೆಗೂ ಕಾಯುವುದು ಒಳ್ಳೆಯದಲ್ಲ ಮೊದಲೇ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವುದು ಉತ್ತಮ, ಇದರಿಂದ ಇದೆ ಹಲವು ಲಾಭ.. 2023-24ರ ಹಣಕಾಸು ವರ್ಷದ ಆದಾಯ ತೆರಿಗೆ (ಐಟಿ) ರಿಟರ್ನ್ಸ್ ಫೈಲ್ ಮಾಡಲು ಮುಂದಿನ ತಿಂಗಳು ಅಂದ್ರೆ ಜುಲೈ 31, 2024 ಅಂತಿಮ ದಿನಾಂಕವಾಗಿದೆ. ಆದರೆ, ಇದಕ್ಕಿನ್ನೂ ಸಮಯ ಇದೆ ಎಂದು ಕೊನೆಯ ದಿನಾಂಕದವರೆಗೂ ಕಾಯುವುದಕ್ಕಿಂತ ಮೊದಲೇ ಫೈಲ್ ಮಾಡುವುದು ಬಹಳ ಜಾಣತನ. ಕೊನೆಯ ಸಮಯದಲ್ಲಿ ಸರ್ವರ್ ವೇಗ ಕಡಿಮೆ ಆಗಲಿದೆ. ನಿಮ್ಮ ಆಡಿಟರ್ ಬ್ಯುಸಿ ಆಗಬಹುದು. ನಿಮಗೆ ದಾಖಲೆ ನೀಡಲು ಒತ್ತಡ ಆಗಬಹುದು.