-ಗಣಹೋಮದಲ್ಲಿ ಭಾಗಿಯಾದ ಬಿ.ಎಸ.ವೈ.
-ಗಣಪತಿಯ ಆಶೀರ್ವಾದಕ್ಕೆ ಪಾತ್ರರಾದ ಯಡಿಯೂರಪ್ಪ
ಉಡುಪಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಂದಾಪುರ ತಾಲ್ಲೂಕಿನ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಮಂಗಳವಾರ ಗಣಹೋಮದಲ್ಲಿ ಭಾಗಿಯಾಗಿದ್ದರು.
ದೇವರಿಗೆ ಪೂಜೆ ಸಲ್ಲಿಸಿ ಗಣಹೋಮದಲ್ಲಿ ಭಾಗವಹಿಸಿ ಪೂರ್ಣಾಹುತಿ ಸಲ್ಲಿಸಿದರು.
ಸಿಎಂ ಭೇಟಿ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕೆ ಭಕ್ತರೂ ಸೇರಿದಂತೆ ಮಾಧ್ಯಮಗಳಿಗೂ ಪ್ರವೇಶ ನಿರಾಕರಿಸಲಾಗಿತ್ತು. ರಾಜಕೀಯ ಜಂಜಾಟಗಳಿಂದ ವಿಶ್ರಾಂತಿ ಪಡೆಯಲು, ಶಾಂತಿ ನೆಮ್ಮದಿಯಿಂದ ಆಡಳಿತ ನೆಡಸುವ ಸಲುವಾಗಿ, ದೇವರ ಪೂಜೆ ಹಾಗೂ ಗಣಹೋಮದಲ್ಲಿ ಭಾಗವಹಿಸುತ್ತಿರುವುದಾಗಿ ಯಡಿಯೂರಪ್ಪ ತಿಳಿಸಿದರು.