ಮುಂಜಾನೆಯಿಂದ ನಾಗರ ಪೂಜೆ!
– ನಾಗ ದೇವಾಲಯ, ನಾಗರಕಟ್ಟೆಯಲ್ಲಿ ಪೂಜೆ
– ಹೂವು, ಹಣ್ಣು ಹಾಕಿ ವಿಶೇಷ ಪ್ರಾರ್ಥನೆ
NAMMUR EXPRESS NEWS
ಶ್ರಾವಣ ಮಾಸದ ನಾಗರ ಪಂಚಮಿ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಎಲ್ಲೆಡೆಯೂ ಆಚರಿಸಲಾಗುತ್ತಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಬರುವ ಈ ಹಬ್ಬದ ದಿನ ನಾಗ ದೇವರನ್ನು ಪೂಜಿಸಿ ಉಪವಾಸ ಮಾಡುವ ಸಂಪ್ರದಾಯವಿದೆ. ನಾಗ ದೇವರನ್ನು ಪೂಜಿಸುವುದರಿಂದ ವ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎನ್ನುವ ನಂಬಿಕೆಯಿದೆ ಭಕ್ತಿ ಪೂರ್ವಕವಾಗಿ ಪೂಜಿಸಲಾಗುತ್ತಿದೆ. ಹಾಗಾಗಿ ನಾಗ ದೇವಾಲಯ, ನಾಗರ ಕಟ್ಟೆಗಳಲ್ಲಿ ನಾಗನಿಗೆ ಹಾಲು ಎರೆದು ವಿಶೇಷ ಪೂಜೆ ಮಾಡಲಾಗುತ್ತಿದೆ.
ಮುಂಜಾನೆ ಎದ್ದು ಶುದ್ಧರಾಗಿ ಹೊಸ ಬಟ್ಟೆಯನ್ನು ಧರಿಸಿ, ನಾಗರ ಕ್ಲಲುಗಳಿಗೆ ಹಾಲೆರೆದು, ಅರಿಶಿನ,ಕುಂಕುಮ, ಕೇದಿಗೆ ಹೂವು, ನಾಗರಿಗೆ ಪ್ರಿಯವಾದ ಭೋಗವನ್ನು ಅರ್ಪಿಸಿ, ದೂಫ ದೀಪ ಬೆಳಗಿ ಪ್ರದಕ್ಷಿಣೆಯನ್ನು ಹಾಕಲಾಗುತ್ತಿದೆ.
ಎಂಟು ಹಾವುಗಳನ್ನು ಈ ಹಬ್ಬದ ಪ್ರಮುಖ ದೇವರುಗಳೆಂದು ಪರಿಣಿಸಲಾಗುತ್ತದೆ. ಈ ದಿನ ಅನಂತ, ವಾಸುಕಿ, ಪದ್ಮ, ಮಹಾಪದ್ಮ, ತಕ್ಷಕ, ಕುಳಿರ, ಕಾರ್ಕೋಟಕ ಮತ್ತು ಶಂಖ ಎಂಬ ಎಂಟು ಸರ್ಪಗಳನ್ನು ಪೂಜಿಸಲಾಗುತ್ತದೆ.
ಚತುರ್ಥಿಯ ದಿನ ಒಂದು ಹೊತ್ತಿನ ಊಟ ಮಾಡಿ ಪಂಚಮಿ ದಿನ ಉಪವಾಸ ಮಾಡಿ ಸಂಜೆ ಒಂದು ಹೊತ್ತಿನ ಊಟ ಮಾಡುವ ಆಚರಣೆ ಕೆಲವೆಡೆ ಕಾಣಬಹುದಾಗಿದೆ.
ಮರದ ಪೀಠ ಅಥವಾ ಮಣೆಯ ಮೇಲೆ ಮಣ್ಣಿನ ಮೂರ್ತಿ ಅಥವಾ ಹಾವಿನ ವಿಗ್ರಹವನ್ನು ಇಟ್ಟು ಪೂಜೆಯನ್ನು ಮಾಡಲಾಗುತ್ತದೆ.
ನಂತರ ನಾಗ ದೇವರಿಗೆ ಅರಿಶಿನ, ಕುಂಕುಮ, ಅಕ್ಕಿ ಮತ್ತು ಹೂವುಗಳನ್ನು ಅರ್ಪಿಸಿ ಪೂಜಿಸಲಾಗುತ್ತದೆ.
ನಂತರ ಹಸಿ ಹಾಲು, ತುಪ್ಪ ಮತ್ತು ಸಕ್ಕರೆಯನ್ನು ಬೆರೆಸಿ ಪೀಠದ ಮೇಲೆ ಪ್ರತಿಷ್ಠಾಪಿಸಲಾದ ನಾಗ ದೇವರಿಗೆ ಅರ್ಪಿಸಿ
ಪೂಜೆಯ ನಂತರ ನಾಗದೇವರಿಗೆ ಆರತಿಯನ್ನು ಮಾಡಲಾಗುತ್ತದೆ.
ಈ ದಿನ ಹಾವಾಡಿಗರಿಗೆ ಸ್ವಲ್ಪ ದಕ್ಷಿಣೆಯನ್ನು ನೀಡಿ ಹಾವಿಗೆ ಹಾಲೆರೆಯುವ ಪದ್ಧತಿ ಪ್ರಸ್ತುತದವರೆಗೂ ಕಾಣಬಹುದಾಗಿದ್ದು
ಇಂದು ನಾಗರ ಪಂಚಮಿ ಕಥೆಯನ್ನು ಕೇಳಬೇಕೂ ಅಥವಾ ಓದಬೇಕು ಎನ್ನುವುದು ವಾಡಿಕೆ.
ಈ ದಿನ ಹಾವಿಗೆ ಹಾಲಿನಿಂದ ಅಭಿಷೇಕವನ್ನು ಮಾಡಿದರೆ ಶಾಶ್ವತ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯೊಂದಿಗೆ ಸಕಲ ಸಿದ್ದತೆಯ ಮೂಲಕ ಅಚ್ಚುಕಟ್ಟಾಗಿ ಈ ಹಬ್ಬವನ್ನೂ ಅಚರಿಸುವ ಪರಿಯನ್ನು ಕಾಣಬಹುದಾಗಿದೆ.