ಅಮೃತ ಭಾರತಿ ಶಿಕ್ಷಣ ಸಂಸ್ಥೆ ಹೆಬ್ರಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ!!
* ಶ್ರೀ ಕೃಷ್ಣ ಜನ್ಮಾಷ್ಟಮಿ ಶೋಭಯಾತ್ರೆ ಕಾರ್ಯಕ್ರಮ!!
* ಕುಚ್ಚೂರು ಗೇರುಬೀಜ ಕಾರ್ಖಾನೆಯಿಂದ ಶೋಭಯಾತ್ರೆಗೆ ಆಗಮಿಸಿದ ವಿದ್ಯಾರ್ಥಿಗಳು!!
NAMMUR EXPRESS NEWS
ಹೆಬ್ರಿ:ಬಂಟರ ಭವನ, ಅಮೃತ ಭಾರತಿ ವಿದ್ಯಾ ಸಂಸ್ಥೆ ಹೆಬ್ರಿ ಶೋಭಯಾತ್ರೆಯು ಶ್ರೀಕೃಷ್ಣನನ್ನು ವಾಹನದ ಮೂಲಕ ಆರಾಧಿಸಿ ಪ್ರಾರಂಭಿಸಿದರು.ಸುಮಾರು ಒಂದು ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಕುಚ್ಚೂರು ಗೇರುಬೀಜ ಕಾರ್ಖಾನೆಯಿಂದ ಶೋಭಯಾತ್ರೆಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದು,ಹುಲಿವೇಷ, ಯಕ್ಷಗಾನ, ನೃತ್ಯ, ಭರತನಾಟ್ಯ, ಕೋಲಾಟ, ಭಜನೆ, ಮೊಸರು ಕುಡಿಕೆ ಮತ್ತು ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶೋಭಯಾತ್ರೆಯಲ್ಲಿ ಮಕ್ಕಳ ರಾಧಾಕೃಷ್ಣಛದ್ಮವೇಷ,ಯಕ್ಷಗಾನ,ನೃತ್ಯ, ಭರತನಾಟ್ಯ, ಕೋಲಾಟ, ಭಜನೆ, ಮೊಸರು ಕುಡಿಕೆ,ಹಾಗೂ ಸಾಂಪ್ರದಾಯಿಕ ಶೈಲಿಯಲ್ಲಿ ಕಲಶಗಳ ಜೊತೆಗೆ ಶೋಭಾಯಾತ್ರೆ ಕಾರ್ಯಕ್ರಮ ನಡೆಯಿತು.
ಶ್ರೀ ಕೃಷ್ಣನ ಜನ್ಮದಿನದಂದು ರಸ್ತೆ ಬದಿಗಳಲ್ಲಿ ಜೈ ಕಾರಗಳು ವಿಜೃಂಭಣೆಯಿಂದ ಸದ್ದು ಮಾಡುತಿತ್ತು. ಆಧುನಿಕ ಯುಗದಲ್ಲಿ ಮೊಬೈಲ್ ಹಿಡಿದು ಮೂಲ ಸೇರುವ ಮಕ್ಕಳ ಮಧ್ಯ ಬಂಟರ ಭವನ, ಅಮೃತ ಭಾರತಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ತಾಳ,ಶಂಖಗಳ ಹಿಡಿದು ನಂದಗೋಕುಲನ ಆರಾಧನೆಯಲ್ಲಿ ಭಾಗಿಯಾಗಿದ್ದರು.ಯುವಕರು ಒಬ್ಬರ ಮೇಲೊಬ್ಬರು ನಿಂತು ಮಡಕೆ ಹೊಡೆದು ಸಂಭ್ರಮಿಸುತ್ತಿದ್ದರು.
ಈ ಸಂದರ್ಭದಲ್ಲಿ ಅಮೃತ ಭಾರತಿ ವಿದ್ಯಾ ಸಂಸ್ಥೆ ಟ್ರಸ್ಟ್ ನ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು,ಸಂಸ್ಥೆಯ ಮುಖ್ಯೋಪಾಧ್ಯಾಯರು,ಪ್ರಾಂಶುಪಾಲರು,ಶಿಕ್ಷಕ ವೃಂದದವರು ಪೋಷಕ ವೃಂದ, ಸಿಬ್ಬಂದಿ ವರ್ಗ ಹಾಗೂ ಸಾವಿರಾರು ವಿದ್ಯಾರ್ಥಿಗಳು, ಆರಕ್ಷಕರು ಮತ್ತು ಸಾರ್ವಜನಿಕರು ಶೋಭಯಾತ್ರೆಯಲ್ಲಿ ಪಾಲ್ಗೊಂಡಿದ್ದರು.