ಸಿಗರೇಟ್ ಮಾತ್ರವಲ್ಲ ಅಗರಬತ್ತಿಯಿಂದಲೂ ಕ್ಯಾನ್ಸರ್?
* ಊದುಬತ್ತಿಯಿಂದಲೂ ಕ್ಯಾನ್ಸರ್ ಸೇರಿದಂತೆ ಹಲವು ಅನಾರೋಗ್ಯಗಳು!!
* ಅಗರಬತ್ತಿಯಿಂದ ಆಗುವ ಹಾನಿಗಳೇನು?
NAMMUR EXPRESS NEWS
ಸಿಗರೇಟ್ ನಿಂದ ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳು ಬರುತ್ತವೆ ಎನ್ನುವುದನ್ನು ಕೇಳಿದ್ದೇವೆ.! ಆದರೆ ಅಗರಬತ್ತಿ ಅಥವಾ ಊದುಬತ್ತಿಯಿಂದಲೂ ಕ್ಯಾನ್ಸರ್ ಸೇರಿದಂತೆ ಹಲವು ಅನಾರೋಗ್ಯಗಳು ಬರುತ್ತವೆ ಎನ್ನುವುದನ್ನು ನೀವು ನಂಬುತ್ತೀರಾ? ನಂಬದಿದ್ದರೂ ಇದು ಸತ್ಯ.
ಸಿಗರೇಟ್ ಹೊಗೆಯಿಂದ ಕ್ಯಾನ್ಸರ್ ಬರುವಂತೆ, ಊದುಬತ್ತಿಯ ಹೊಗೆಯಿಂದಲೂ ಕ್ಯಾನ್ಸರ್ ಬರುವ ಸಾಧ್ಯತೆಯಿದೆ. ಅಗರಬತ್ತಿಗಳಲ್ಲಿರುವ ಪಾಲಿ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ಗಳು (Poly-Aromatic Hydrocarbons) ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಮಾತ್ರವಲ್ಲದೇ ಉಸಿರಾಟದ ತೊಂದರೆಗಳಿಗೂ ಇದು ಕಾರಣವಾಗಬಹುದಾಗಿದೆ.
* ಅಗರಬತ್ತಿಯಿಂದ ಆಗುವ ಹಾನಿಗಳೇನು?
ಊದುಬತ್ತಿಯ ಹೊಗೆಯನ್ನು ನಿರಂತರವಾಗಿ ಉಸಿರಾಡುತ್ತಿದ್ದರೆ, ಹೃದಯದ ಜೀವಕೋಶಗಳ ಮೇಲೆ ಇದು ಪರಿಣಾಮ ಬೀರಿ, ಹೃದಯದ ಜೀವಕೋಶಗಳಿಗೆ ಹಾನಿಯಾಗಿ ಹೃದಯಾಘಾತಕ್ಕೆ ಕಾರಣವಾಗಬಹುದು.
ಊದುಬತ್ತಿಯಲ್ಲಿ ಬಳಸುವ ರಾಸಾಯನಿಕಗಳು ಕಣ್ಣಿನ ತುರಿಕೆ ಹಾಗೂ ಚರ್ಮದ ಅಲರ್ಜಿಗೆ ಕಾರಣವಾಗಬಹುದು.
ಅಗರ ಬತ್ತಯಿಂದ ಹೊ ಬರುವ ಕಾರ್ಬನ್ ಮೋನೋ ಆಕ್ಸೈಡ್ ಶ್ವಾಸಕೋಶದ ಮೇಲೆ ಹಾನಿಯುಂಟು ಮಾಡುತ್ತದೆ. ಇದರಿಂದಲೂ ಶೀತ ಮತ್ತು ಕೆಮ್ಮು ಸಮಸ್ಯೆ ಕಾಣಿಸಿಕೊಳ್ಳಬಹುದು.
ಹೊಗೆ ಬತ್ತಿಯನ್ನು ಉಸಿರಾಡುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಸಂಭವಿಸುತ್ತದೆ. ಅದರಲ್ಲೂ ಧೂಮಪಾನಿಗಳಾಗಿದ್ದರೆ ಅಂತಹವರಿಗೆ ಅಗರಬತ್ತಿ ಹೊಗೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿದೆ.
ಅಗರಬತ್ತಿಯಲ್ಲಿರುವ ನೈಟ್ರೊಜನ್ ಮತ್ತು ಸಲ್ಫರ್ ಡೈ ಆಕ್ಸೈಡ್ ಗಳು ಅಸ್ತಮಾದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.