ಮನೆ ಮನೆ, ಹಳ್ಳಿ ಹಳ್ಳಿಗಳಲ್ಲಿ ಹಬ್ಬದ ಸಂಭ್ರಮ!
– ಗಣಪತಿ ಕೂರಿಸಿ ವಿಶೇಷ ಪೂಜೆ: ಮನೆಗಳಲ್ಲಿ ಆಚರಣೆ
– ಕರಾವಳಿಯಲ್ಲಿ ಹುಲಿ ವೇಷದ ಸೊಬಗು
– ದೇಶದ ಮೂಲೆ ಮೂಲೆಯಲ್ಲಿ ಗಣಪತಿಗೆ ಜೈ
NAMMUR EXPRESS
ಗಣಪತಿ ಹಬ್ಬ ಎಂದರೆ ಪ್ರತಿಯೊಬ್ಬರಿಗೂ ಸಂಭ್ರಮ ಸಡಗರ. ಹಬ್ಬಕೆಂದೇ ಹೊಸ ಬಟ್ಟೆ ತೆಗೆದುಕೊಡುವ ತಾಯಿ ತಂದೆ.
ನಾನಾ ತರದ ಅಡುಗೆ ತಯಾರಿ, ನೆಂಟರ ಹಾವಳಿ ಎಲ್ಲಾ ಜೋರೋ ಜೋರು.ಗಣೇಶನ ಹಬ್ಬಕ್ಕೆ ಕಡುಬು, ಮೋದಕ, ಲಡ್ಡು ಸ್ಪೆಷಲ್, ಮಕ್ಕಳಿಗಂತೂ ಗಣೇಶ ಹಬ್ಬ ಮದುವೆ ಮನೆಯ ಸಂಭ್ರಮವನ್ನು ನೀಡುತ್ತದೆ.
ಪ್ರತಿಯೊಂದು ಗ್ರಾಮ ಗ್ರಾಮಗಳಲ್ಲೂ ಗಣೇಶನನ್ನು ಕೂರಿಸಿ ಅಲಂಕಾರ ಮಾಡಿ ಪೂಜೆ ಮಾಡುಹುದು ಕ್ರಮ ಆದರೆ ಎಲ್ಲೆಡೆ ಇಂತಿಷ್ಟೇ ದಿನ ಗಣಪತಿನ ಕೂರಿಸಬೇಕು ಎಂಬ ಕಡ್ಡಾಯವೇನಿಲ್ಲ ಮೊದಲ ವರ್ಷ ಯಾವ ರೀತಿ ನಿಯಮ ಪಾಲನೆ ಆಚರಿಸುತ್ತಿದ್ದಾರೋ ಅದನ್ನೇ ಮುಂದುವರಿಸುವ ಪದ್ಧತಿ ಅಷ್ಟೇ… ಕೆಲವೊಂದು ಕಡೆ ಮೂರು ದಿನ ಇನ್ನೂ ಮಲೆನಾಡು ಶಿವಮೊಗ್ಗ ಭಾಗಗಳಲ್ಲಿ ,9,15, ಒಂದು ಿಂಗಳವರೆಗೆ ಗಣಪತಿ ಕೂರಿಸಿ ಪೂಜೆ ನಡೆಸುತ್ತಾರೆ. ಆದರೆ ಕರಾವಳಿ ಭಾಗದಲ್ಲಿ ಕಡಿಮೆ, ಹೆಚ್ಚೆಂದರೆ ಒಂಬತ್ತು ದಿನ ಅಷ್ಟೇ, ಮತ್ತೆ ಮೂರು ದಿನ ಹೆಚ್ಚಾಗಿ ಪೂಜೆ ಆಚರಣೆ ಇರುತ್ತದೆ.
ಹಬ್ಬ ಎಂದರೆ ಎಲ್ಲೆಡೆ ಸಂಭ್ರಮ ಇದ್ದೆ ಇರುತ್ತೆ!
ಗಣಪತಿ ಹಬ್ಬದಂದು ಮನೆಯ ಔತಣ ಕೂಟ ಮುಗಿಸಿ ಗಣಪತಿ ವೀಕ್ಷಣೆಗೆ ಹೆಚ್ಚಾಗಿ ರಾತ್ರಿ ಸಮಯದಲ್ಲಿ ಹೋರಾಡುತ್ತಾರೆ. ಗಣೇಶ ಅಂತೂ ಫುಲ್ ಅಲಂಕಾರದಿಂದ ಕಂಗೊಳಿಸುತ್ತಿರುತ್ತಾನೆ. ಆತನ ಕೇಳೋದೆ ಬೇಡ ಎಷ್ಟದ್ರೂ, ಅವಂದೇ ದಿನ ಅಲ್ವಾ?
ಮತ್ತೆ ಸಾರ್ವಜನಿಕರಂತೂ ಪೂರ್ತಿ ಜೋಶ್ ಹಾಕಿ ಹಬ್ಬದ ಹೊರಗಡೆ ನೆರೆದಿರುವ ಜಾತ್ರೆ ವೀಕ್ಷಣೆಯಲ್ಲಿ ಬ್ಯುಸಿ. ಮಹಿಳೆಯರು ಗಣೇಶನ ಪೂಜೆ ಸಾಂಸ್ಕೃತಿಕ ಕಾರ್ಯಕ್ರಮದ ವೀಕ್ಷಣೆಯಲ್ಲಿ ತೊಡಗಿಕೊಂಡಿರುತ್ತಾರೆ.
* ಕರಾವಳಿಯಲ್ಲಿ ಹುಲಿವೇಷಗಳ ರಂಗು
ಕರಾವಳಿಯಲ್ಲಂತೂ ಕೇಳೋದೆ ಬೇಡ, ಎಲ್ಲೆಡೆ ಹಬ್ಬದ ಮೆರಗು ಮನೆಮಾಡಿರುತ್ತದೆ. ಅದ್ರಲ್ಲೂ ಕರಾವಳಿ ಸ್ಪೆಷಲ್ ಹುಲಿವೇಷ. ಸಾಮಾನ್ಯವಾಗಿ ದಸರಾ ಸಂಭ್ರಮಕ್ಕೆ ಹುಲಿವೇಷ ಹಾಕುವವರಲ್ಲಿ ಒಂದರ್ಧ ಭಾಗ ಯುವಕರು ಗಣೇಶ ಹಬ್ಬಕ್ಕೂ ರಂಗ್ ಹಚ್ಚಿಕೊಂಡು ಕುಣಿಯುವುದುಂಟು.ಮೆರವಣಿಗೆ ಜಾತ್ರೆ ಸಮಯದಲ್ಲಿ ಕಾರವಳಿ ಭಾಗದಲ್ಲಿ ಕೆಲವೊಂದೆಡೆ ಹುಲಿವೇಷ ಭರ್ಜರಿಯಾಗಿ ನಡೆಯುತ್ತದೆ.ಹುಲಿವೇಷ ಇಲ್ಲದೆ ಕರಾವಳಿ ಹಬ್ಬ ಪರಿಪೂರ್ಣವಾಗಲೂ ಸಾಧ್ಯವೇ ಇಲ್ಲ ಎಂಬುಹುದು ಕರಾವಳಿ ಭಾಗದ ಜನರ ನಂಬಿಕೆ ಮುಂದೆ ಗಣಪತಿ ಹಿಂದೆ ಒಂದೊಂದು ವೇಷಧಾರಿಗಳು ಸಾಲು ಸಾಲು ಕಟ್ಟಿ ಮೆರವಣಿಗೆ ಹೊರಡುವುದುಂಟು, ಅದರ ಹಿಂದೆ ಕರಾವಳಿಯಲ್ಲಿ ಹುಲಿವೇಷ ಇದ್ದು, ಮೆರವಣಿಗೆಯಲ್ಲಿ ಕುಣಿಯುವುದೂ ಉಂಟು ಹಿರಿಯರೂ ಕೂಡ ಈ ಮೆರವಣಿಯಲ್ಲಿ ಪಾಲ್ಗೊಂಡು ಜೈ ಕಾರ ಕೂಗುತ್ತಾರೆ. ಮಕ್ಕಳು ನಾ ಮುಂದೆ ತಾಮುಂದೆ ಎಂದು ಪೈಪೋಟಿ ನಡೆಸುತ್ತಾ ಸಾಗುತ್ತಾರೆ.ಇದರ ಮಧ್ಯೆ ಕೀಲುಕುದುರೆ, ಕೋಲಾಟ, ಕುಣಿತ ಭಜನೆ ನಾನಾ ಬಗೆಯ ವೇಷಧಾರಿಗಳ ೆರವಣಿಗೆಯನ್ನು ಕಾಣಬಹುದಗಿದೆ.. ಎಲ್ಲರೂ ಗಣೇಶ ಹಬ್ಬ ಮೆರವಣಿಯಲ್ಲಿ ಪಾಲ್ಗೊಂಡು ಸಂಭ್ರಮವನ್ನು ಆಚರಿಸೋಣ.