ಕೊಚ್ಚಿನ್ ಶಿಪ್ ಯಾರ್ಡಿಗೆ ‘ತುಳುನಾಡ ಪುದರ್’!!
* ಭಾರತೀಯ ನೌಕಾಪಡೆಗೆ 2 ಹಡಗುಗಳ ಹಸ್ತಾಂತರ
* ಹಡಗುಗಳಿಗೆ ಐ. ಎನ್. ಎಸ್. ಮಲ್ಪೆ, ಐ. ಎನ್. ಎಸ್. ಮುಲ್ಕಿ ಎಂದು ನಾಮಕರಣ
NAMMUR EXPRESS NEWS
ಮಂಗಳೂರು/ಉಡುಪಿ: ಕರಾವಳಿ ದೇಶ ವಿದೇಶದಲ್ಲೂ ತನ್ನ ಹೆಸರನ್ನು ಬಿತ್ತಿದ ಊರು. ಇದೀಗ ಕೇರಳದ ಕೊಚ್ಚಿನ್ ಶಿಪ್ ಯಾರ್ಡ್ ಕೊಚ್ಚಿನ್ ನಲ್ಲಿ ಎರಡು ಯುದ್ಧ ಹಡಗುಗಳನ್ನು ನಿರ್ಮಾಣ ಮಾಡಿದ್ದು, ಭಾರತೀಯ ನೌಕಾಪಡೆಗೆ ಹಸ್ತಾಂತರ ಮಾಡಲಾಯಿತು. ಈ ಹಡಗುಗಳಿಗೆ ಐ. ಎನ್. ಎಸ್. ಮಲ್ಪೆ ಮತ್ತು ಐ. ಎನ್. ಎಸ್. ಮುಲ್ಕಿ ಎಂದು ನಾಮಕರಣ ಮಾಡಿ ತುಳುನಾಡಿನ ಎರಡು ಪ್ರದೇಶದ ಹೆಸರಿಗೆ ಗೌರವ ಮತ್ತು ಹೆಮ್ಮೆ ನೀಡಿದೆ. ಈ ಯುದ್ಧ ನೌಕೆಗಳು ಭಾರತದ ಸಾಗರದ ಕಡಲ ಕೆಳಗೆ ರಕ್ಷಣೆ ಮಾಡಿ ಭಾರತಿಯ ಸೇವೆಯನ್ನು ಮಾಡುವ ಅವಕಾಶ ಪಡೆದುಕೊಂಡಿರುವುದು ಕರಾವಳಿಗರಿಗೆ ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.