ತೀರ್ಥಹಳ್ಳಿ ಜೆಸಿಐ ಪ್ರಾಯೋಜಕತ್ವದಲ್ಲಿ ಏಕವ್ಯಕ್ತಿ ನಾಟಕ ಪ್ರದರ್ಶನ
* ಇಂದು ತಾಯಿಯಾಗುವುದೆಂದರೆ ಏಕವ್ಯಕ್ತಿ ರಂಗ ಪ್ರಯೋಗ
* ಸಂಜೆ ನಾಟಕ: ಸರ್ವರಿಗೂ ಸ್ವಾಗತಿಸಿದ ಜೆಸಿಐ ತೀರ್ಥಹಳ್ಳಿ
NAMMUR EXPRESS NEWS
ತೀರ್ಥಹಳ್ಳಿ: ಜೆಸಿಐ ತೀರ್ಥಹಳ್ಳಿ ಜೆ.ಸಿ ಸಪ್ತಾಹ-2024ರ ಪ್ರಯುಕ್ತ ತಾಯಿಯಾಗುವುದೆಂದರೆ ಏಕವ್ಯಕ್ತಿ ರಂಗಪ್ರಯೋಗ ದಿನಾಂಕ: 14.09.2024 ಶನಿವಾರ ಸಮಯ: ಸಂಜೆ 6.30ಕ್ಕೆ ಶ್ರೀ ಶಾಂತವೇರಿ ಗೋಪಾಲ ಗೌಡ ರಂಗಮಂದಿರ, ಸೊಪ್ಪುಗುಡ್ಡೆ ತೀರ್ಥಹಳ್ಳಿಯಲ್ಲಿ ನಡೆಯಲಿದೆ.
ರಂಗಹೃದಯ, ಹಾಸನ ಪ್ರಸ್ತುತಿಯಲ್ಲಿ ರಂಗರೂಪ, ವಿನ್ಯಾಸ, ಸಂಗೀತ ಮತ್ತು ನಿರ್ದೇಶನವನ್ನು ಕೃಷ್ಣಮೂರ್ತಿ ಕವತ್ತಾರ್ ಮಾಡಿದ್ದಾರೆ. ರಚನೆ – ನಟನೆ: ಪೂಜಾ ರಘುನಂದನ್ ಮಾಡಿದ್ದಾರೆ.
ನಾಟಕದ ವಿಶೇಷ
ತಾಯಿ,ಇೊು ಸಾಮಾನ್ಯ ಪದವಲ್ಲ ಪ್ರತಿಯೊಬ್ಬನ ಜೀವನದಲ್ಲೂ ತಾಯಿಯೆನ್ನುವುದು ಒಂದು ಮಹತ್ವದ ಅಂತರಂಗದ ಶಕ್ತಿ ಮತ್ತು ಸ್ಫೂರ್ತಿ. ಇಂತಹ ಒಂದು ತಾಯಿಯ ವಸ್ತುವುಳ್ಳ ಕಥಾಹಂದರವನ್ನು ಇಟ್ಟುಕೊಂಡು ಹಾಸನದ ಉದಯೋನ್ಯುಖ ಕಲಾವಿದೆ ಶ್ರೀಮತಿ ಪೂಜಾ ರಘು ನಂದನ್ ಇವರು ರಚಿಸಿ ಅಭಿನಯಿಸಿದ್ದಾರೆ.
ವಾಸ್ತವವಾಗಿ ಪೂಜಾರವರ ನಿಜ ಜೀವನದ ಕಥೆಯಾಗಿದ್ದು,ಅವರು ಅನುಭಸಿದ ದುಃಖ ದುಮ್ಮಾನ, ಸಂತೋಷ, ಸವಾಲು ಹಾಗೂ ಪರಿಹಾರದ ಪರಿಣಾಮವೆ ರಂಗಪ್ರಯೋಗದಲ್ಲಿ ವ್ಯಕ್ತವಾಗಿದೆ.
ಎಷ್ಟೋ ಜನ ಮಹಿಳೆಯರು ಮಕ್ಕಳಿಲ್ಲ ಎನ್ನುವ ಕಾರಣಕ್ಕೆ ಕೊರಗಿ ಅನುಭವಿಸುವ ಪರಿಪಾತ, ಅದಕ್ಕಾಗಿ ಅವರು ನಡೆಸುವ ಪ್ರಯತ್ನ, ಅದರಿಂದಾಗಿ ಸಮಾಜ ಹಾಗೂ ಕುಟುಂಬದ ಸದಸ್ಯರಿಂದ ಕೇಳಬೇಕಾದ ಮತ್ತು ಕೇಳಿ ಅನುಭವಿಸಬೇಕಾದ ಅವಮಾನಗಳು ಈ ನಾಟಕದಲ್ಲಿ ವ್ಯಕ್ತವಾಗುತ್ತದೆ.