ಜಟ್ಟಿನಮಕ್ಕಿ ಶೂಟ್ ಔಟ್ ಕೇಸ್: ಆರೋಪಿಗೆ 5 ವರ್ಷ ಜೈಲು!
– ತೀರ್ಥಹಳ್ಳಿ ತಾಲೂಕು ದೇವಂಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದ್ದ ಘಟನೆ
– ದಾರಿ ವಿಚಾರಕ್ಕೆ ಕೋವಿಯಲ್ಲಿ ಗುಂಡು: ಏನಿದು ಪ್ರಕರಣ?
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಸಮೀಪ ದೇವಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಟ್ಟಿನಮಕ್ಕಿ ರೈತರಾದ ಕೃಷ್ಣಮೂರ್ತಿ ಎಂಬುವರಿಗೆ 23.04.2018ರಂದು ಅಶೋಕ ಎಂಬುವರು ಗುಂಡು ಹಾರಿಸಿ ಕೊಲೆಗೆ ಪ್ರಯತ್ನ ಪ್ರಕರಣದಲ್ಲಿ ತೀರ್ಥಹಳ್ಳಿ ಪೊಲೀಸರು ಪ್ರಕರಣವನ್ನು ದಾಖಲು ಮಾಡಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದರು .ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ದಲ್ಲಿ ಪ್ರಕರಣದ ವಿಚಾರಣೆ ನಡೆದು ಜಿಲ್ಲಾ ನ್ಯಾಯಾಧೀಶರಾದ ಗೌರವಾನ್ವಿತ ಮಂಜುನಾಥ ನಾಯಕರವರು ಆರೋಪಿ ಜೆಟ್ಟಿನ ಮಕ್ಕಿ ಅಶೋಕಗೆ ಐದು ವರ್ಷ ಕಠಿಣ ಶಿಕ್ಷೆ ಮತ್ತು ಐವತ್ತು ಸಾವಿರ ರೂಪಾಯಿ ದಂಡವನ್ನು ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಹಣದ 25000 ರೂಪಾಯಿ ದೂರುದಾರ ಕೃಷ್ಣಮೂರ್ತಿಗೆ ನೀಡಲು ಆದೇಶ ಮಾಡಿದ್ದಾರೆ. ಸರ್ಕರ ಪರವಾಗಿ ರ್ಕಾರಿ ಅಭಿಯೋಜಕರಾದ ಎ.ಎಂ. ಸುರೇಶ್ ರವರು ಸಾಕ್ಷಿಗಳ ವಿಚಾರಣೆ ನಡೆಸಿ ವಾದವನ್ನು ಮಂಡಿಸಿದರು. ಆರೋಪಿ ಅಶೋಕ್ ದೇವಂಗಿ ಗ್ರಾಮದಲ್ಲಿ ಅನೇಕ ಕ್ರಿಮಿನಲ್ ಪ್ರಕರಣಗಳಲ್ಲಿ ತೊಡಗಿದ್ದು ಪೊಲೀಸ್ ಠಾಣೆಯಲ್ಲಿ ದಾಖಲು ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸ್ ಮಾಹಿತಿ ತಿಳಿಸಿದೆ.
ದಾರಿ ವಿಚಾರಕ್ಕೆ ಕೋವಿಯಲ್ಲಿ ಗುಂಡು!
ತೀರ್ಥಹಳ್ಳಿ ತಾಲೂಕು ಜಟ್ಟಿನಮಕ್ಕಿಯ ಅಶೋಕ(62) ಶಿಕ್ಷೆಗೆ ಗುರಿಯಾದವರು. ಜಮೀನು ದಾರಿ ವಿಚಾರವಾಗಿ ಅಶೋಕ ಮತ್ತು ಕೃಷ್ಣಮೂರ್ತಿ ನಡುವೆ ಬಹಳ ವರ್ಷಗಳಿಂದ ಗಲಾಟೆಯಾಗಿತ್ತು. 2018ನೇ ಏಪ್ರಿಲ್ 23ರಂದು ಬೆಳಗ್ಗೆ ಕೃಷ್ಣಮೂರ್ತಿ ಅವರು ತಮ್ಮ ಜಮೀನಿಗೆ ನಡೆದುಕೊಂಡು ಹೋಗುವಾಗ ಕೋವಿ ಹಿಡಿದುಕೊಂಡು ಬಂದ ಅಶೋಕ್ ಜಗಳ ಮಾಡಿ ಕೃಷ್ಣಮೂರ್ತಿ ಮೇಲೆ ಗುಂಡು ಹಾರಿಸಿದ್ದರು. ಕೃಷ್ಣಮೂರ್ತಿ ಕುತ್ತಿಗೆಗೆ ಗುಂಡು ತಾಗಿ ತೀವ್ರ ಗಾಯಗೊಂಡಿದ್ದರು.
ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ವಿರುದ್ಧ ದೋಷಾರೋಪ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿಸಜೆ ವಿಧಿಸಿದ್ದಾರೆ. ದಂಡದ ಮೊತ್ತದಲ್ಲಿ 25 ಸಾವಿರ ರೂ.ಗಳನ್ನು ಕೃಷ್ಣಮೂರ್ತಿ ಅವರಿಗೆ ಪರಿಹಾರ ನೀಡಲು ಆದೇಶಿಸಿದ್ದಾರೆ. ಸರಕಾರದ ಪರವಾಗಿ ಎ.ಎಂ.ಸುರೇಶ್ಕುಮಾರ್ ವಾದಿಸಿದ್ದರು