ಅಡಿಕೆ ಆಯ್ತು, ಈಗ ಕಾಳುಮೆಣಸು ದರ ಇಳಿಕೆ!?
– ವಿದೇಶದಿಂದ ಆಮದು ಮಾಡಿಕೊಳ್ಳುವ ನಿರ್ಧಾರ
– ಕಾಳುಮೆಣಸಿಗೆ ರಿಯಾಯಿತಿ ಘೋಷಿಸಿದ ಕೇಂದ್ರ ಸರಕಾರ
– ರೈತರು, ವ್ಯಾಪಾರಿಗಳಿಗೆ ಆತಂಕ
NAMMUR EXPRESS NEWS
ಬೆಂಗಳೂರು: ಕಾಳುಮೆಣಸು ಬೆಲೆ ಏರಿಕೆ ಬಳಿಕ ತುಸು ಕುಸಿದು ಮತ್ತೆ ಏರಿಕೆಯಾಗಿದ್ದರೂ ವಿದೇಶದಿಂದ ಆಮದು ಮಾಡಿಕೊಳ್ಳುವ ಕಾಳುಮೆಣಸಿಗೆ ಹೆಚ್ಚು ರಿಯಾಯಿತಿ ನೀಡಲು ಕೇಂದ್ರ ಸರಕಾರ ಮುಂದಾಗಿರುವುದಕ್ಕೆ ರೈತರು, ವ್ಯಾಪಾರಿಗಳು ಆತಂಕಕ್ಕೊಳಗಾಗಿದ್ದಾರೆ.
ವಿದೇಶಗಳಿಂದ ಕಾಳುಮೆಣಸು ಆಮದು ಮಾಡಿ, ಮೌಲ್ಯವರ್ಧಿತ ಉತ್ಪನ್ನವಾಗಿ ಮತ್ತೆ ವಿದೇಶಕ್ಕೆ ರಫ್ತು ಮಾಡಲು ಆರು ತಿಂಗಳವರೆಗೆ ಸರಕುಗಳನ್ನು ಇರಿಸಿಕೊಳ್ಳಲು ಕಂಪನಿಗಳಿಗೆ ಅನುಮತಿ ನೀಡಲು ವಾಣಿಜ್ಯ ಸಚಿವಾಲಯ ಆದೇಶಿಸಿದೆ. ಈ ಹೊಸ ಆದೇಶದಿಂದ ವಿದೇಶಿ ಕಾಳುಮೆಣಸು ಹೆಚ್ಚು ಮಾರುಕಟ್ಟೆಗೆ ಬರಲು ಹಾಗೂ ಆ ಮೂಲಕ ಬೆಲೆ ಕುಸಿತಕ್ಕೆ ದಾರಿ ಮಾಡಿಕೊಡಲಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳಲ್ಲಿ ಬೇರೆಬೇರೆ ದೇಶಗಳಿಂದ 5,065 ಟನ್ ಕಾಳುಮೆಣಸು ಆಮದು ಮಾಡಿಕೊಳ್ಳಲಾಗಿದೆ. ಶ್ರೀಲಂಕಾದಿಂದ 4,405 ಟನ್ ಮದಾಗಿದೆ. ಮುಕ್ತ ವ್ಯಪಾರ ಪ್ಪಂದದಂತೆ ಶ್ರೀಲಂಕಾದಿಂದ ಇನ್ನೂ 2,000 ಟನ್ಗಳನ್ನು ಸುಂಕವಿಲ್ಲದೆ ಆಮದು ಮಾಡಿಕೊಳ್ಳಬಹುದು. ಹೆಚ್ಚುತ್ತಿರುವ ಆಮದು ರೈತರಲ್ಲಿ ಆತಂಕ ಮೂಡಿಸಿದೆ. ಪ್ರತಿ ಕೆಜಿ ಗಾರ್ಬಲ್ಸ್ ಕಾಳುಮೆಣಸಿಗೆ 14 ರೂ. ಕುಸಿದರೂ ಪ್ರಸ್ತುತ ಮತ್ತೆ ದರ ಏರಿಕೆಯಾಗಿದೆ. 670 ರೂ. ಇದ್ದ ಕಾಳುಮೆಣಸು ದರ 615 ರೂ.ಗೆ ಇಳಿಕೆಯಾಗಿ ಪ್ರಸ್ತುತ 650 ರೂ.ಗೆ ತಲುಪಿದೆ.
ಕಾಳುಮೆಣಸು ಆಮದು ಮಾಡಿಕೊಳ್ಳುವ ಕಂಪನಿಗಳಿಗೆ ದಾಸ್ತಾನು ಅವಧಿ ವಿಸ್ತರಿಸಿರುವುದು ಬೆಳೆಗಾರರಿಗೆ ಹಿನ್ನಡೆಯಾಗಲಿದೆ.ಕಾಳುಮೆಣಸು ಆಮದು ಮಾಡಿಕೊಳ್ಳುವ ಕಂಪನಿಗಳಿಗೆ ದಾಸ್ತಾನು ಅವಧಿ ವಿಸ್ತರಿಸಿರುವುದು ಬೆಳೆಗಾರರಿಗೆ ಹಿನ್ನಡೆಯಾಗಲಿದೆ.