ಮಲೆನಾಡು ಸೊಸೈಟಿ ನೂತನ ಕಟ್ಟಡ ಉದ್ಘಾಟನೆಗೆ ಸಜ್ಜು!
– ಸೆ. 21ರಂದು ಮಲೆನಾಡು ಭವನ” ನೂತನ ಕಟ್ಟಡ ಉದ್ಘಾಟನಾ ಸಮಾರಂಭ
– ರಾಜಧಾನಿ ಮಲೆನಾಡಿಗರ ಹೆಮ್ಮೆಯ ಸಹಕಾರ ಸಂಸ್ಥೆ
NAMMUR EXPRESS NEWS
ಬೆಂಗಳೂರು: ಮಲೆನಾಡ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ನಲ್ಲಿ ಮಲೆನಾಡು ಭವನ” ನೂತನ ಕಟ್ಟಡ ಉದ್ಘಾಟನಾ ಸಮಾರಂಭ 21-09-2024ನೇ ಶನಿವಾರ, ಬೆಳಿಗ್ಗೆ 9-30 ಗಂಟೆಗೆ ಸರ್.ಎಂ. ವಿಶ್ವೇಶ್ವರಯ್ಯ ಲೇಔಟ್. 8ನೇ ಬ್ಲಾಕ್, ಕುವೆಂಪು ರಸ್ತೆ, ದ.ರಾ. ಬೇಂದ್ರ ಅಡ್ಡರಸ್ತೆ, ಅನ್ನಪೂರ್ಣೇಶ್ವರಿನಗರ, ಬೆಂಗಳೂರು ಇಲ್ಲಿ ನೆರವೇರಲಿದೆ.
ಉದ್ಘಾಟನೆಯನ್ನು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು, ಪೀಠಾಧ್ಯಕ್ಷರು, ಶ್ರೀ ಆದಿಚುಂಚನಗರ ಮಹಾಸಸ್ಥಾನ ಮಠ ವರು ಈ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ ಆರಗ ಜ್ಞಾನೇಂದ್ರ ಮಾಜಿ ಗೃಹ ಸಚಿವರು ಹಾಗೂ ಶಾಸಕರು, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ,
ಶ್ರೀ ಎಸ್.ಟಿ. ಸೋಮಶೇಖರ್, ಶ್ರೀ ಟಿ.ಡಿ. ರಾಜೇಗೌಡ
ಶ್ರೀ ಪಿ. ಮಹೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ. ಅಧ್ಯಕ್ಷತೆಯನ್ನ ಶ್ರೀ ಜೆ.ಕೆ. ಲೋಕೇಶ್ ಅಧ್ಯಕ್ಷರು, ಮಲೆನಾಡ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಇವರ ಅಧ್ಯಕ್ಷತೆಯಲ್ಲಿ ನೆರವೇರಲಿದೆ.
ಬೆಂಗಳೂರು ಮಹಾನಗರದಲ್ಲಿ ವಾಸಿಸುತ್ತಿರುವ ಮಲೆನಾಡಿಗರಿಗೆ ಶಿಕ್ಷಣ, ಉದ್ದಿಮೆ, ಗೃಹ ನಿರ್ಮಾಣ, ವೈಯುಕ್ತಿಕ, ಸಣ್ಣ ವ್ಯಾಪಾರ ಮುಂತಾದ ಚಟುವಟಿಕೆಗಳಿಗೆ ಆರ್ಥಿಕ ಸಹಾಯವನ್ನು ಒದಗಿಸುವ ಉದ್ದೇಶದಿಂದ 1997ರಲ್ಲಿ ಸಮಾನ ಮನಸ್ಕರ ಸಹಯೋಗದಿಂದ ಮಲೆನಾಡು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಬೆಂಗಳೂರಿನ ರಾಜಾಜಿನಗರದಲ್ಲಿ ಸ್ಥಾಪಿಸಲಾಯಿತು. ಅನಂತರದ ವರ್ಷಗಳಲ್ಲಿ ಸಂಘವು ಆರ್ಥಿಕವಾಗಿ ಬೆಳೆದಂತೆ ತನ್ನದೇ ಆದ ಸ್ವಂತ ಕಟ್ಟಡವನ್ನು ಹೊಂದಲು ಸಿ.ಎ. ನಿವೇಶನಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಿತು.
ಆಯಾಯಾ ಕಾಲದಲ್ಲಿ ಅಧಿಕಾರದಲ್ಲಿದ್ದ ಸಂಘದ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಹತ್ತಾರು ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಬಿ.ಡಿ.ಎ. ಯಿಂದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಿವೇಶನ ಸಂಖ್ಯೆ 14ನ್ನು ಹಂಚಿಕೆಯಾಗಿದ್ದು, ಸದರಿ ನಿವೇಶನದಲ್ಲಿ ‘ಮಲೆನಾಡು ಭವನ’ ನಿರ್ಮಾಣವಾಗಿದೆ. ಈ ಸಂಘವು ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಮತ್ತು ಸಂಪನ್ಮೂಲವನ್ನು ಕ್ರೋಢೀಕರಿಸಿ ಕಟ್ಟಡವು ಮೇಲೇಳಲು ಸಂಘದ ಠೇವಣಿದಾರರು, ಸಾಲಗಾರರು ಮತ್ತು ಹಿತೈಷಿಗಳು ನೆರವಾಗಿದ್ದಾರೆ. ಇವರೆಲ್ಲರಿಗೂ ಕೃತಜ್ಞತೆ ಸಲಲಿಸಿದಾರೆ.
ಸರ್ವರಿಗ ಕಾರ್ಯಕ್ರಮಕ್ಕೆ ಸ್ವಾಗತಿಸಲಾಗಿದೆ.