ಮಳೆ, ಬಿಸಿಲು, ಚಳಿ: ಜನರ ಪರದಾಟ!
– ಮಳೆಗಾಲ ಮುಕ್ತಾಯ ಹಂತದಲ್ಲಿದ್ದರೂ ಮಾನ್ಸೂನ್ ಮಳೆಯ ಅಬ್ಬರ ಹೆಚ್ಚಳ
– ಆರೋಗ್ಯದ ಮೇಲೂ ಪರಿಣಾಮ: ಕೃಷಿ ಉಲ್ಟಾಪಲ್ಟಾ
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡು ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಮಳೆ ಎಡಬಿಡದೆ ಸುರಿಯುತ್ತಿದೆ, ಒಂದು ಕಡೆ ಮಳೆಯ ಎಫೆಕ್ಟ್ ಆದರೆ ಒಂದೊಮ್ಮೆ ಬಿಸಿಲು ಬಂದು ಮಾಯಾವಾಗುತ್ತದೆ. ರಾತ್ರಿಯ ಸಮಯದಲ್ಲಿ ಚಳಿ ಕೂಡ ಆರಂಭವಾಗಿದೆ. ಮಳೆಗಾಲ ಮುಕ್ತಾಯ ಹಂತದಲ್ಲಿದ್ದರೂ ಮಾನ್ಸೂನ್ ಮಳೆಯ ಅಬ್ಬರ ಹೆಚ್ಚಾಗುತ್ತಲೆ ಇದೆ. ಹೀಗಾಗಿ ವಾತಾವರಣದಲ್ಲಿ ಉಂಟಾಗುವ ಏರುಪೇರು ಜನರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಪ್ರತಿ ಮನೆಯಲ್ಲಿ ಜ್ವರ, ಶೀತ, ಕೆಮ್ಮು ಇಂತಹ ರೋಗಗಳಿಂದ ಜನರು ನರಳಾಡುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಜನರು ಕ್ಯೂ ನಿಂತಿದ್ದಾರೆ. ವಾತಾವರಣದ ಎಫೆಕ್ಟ್ ಆರೋಗ್ಯದ ಮೇಲೆ ಸಮಸ್ಯೆ ಬೀರುತ್ತಿದೆ.
ಒಂದು ಕಡೆ ಆರೋಗ್ಯದ ಸಮಸ್ಯೆ ಆದರೆ ಇನ್ನೊಂದು ಕಡೆ ವಾತಾವರಣದಿಂದ ಜನರ ಬದುಕಿನ ಆಧಾರವಾದ ಕೃಷಿಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಮಳೆ,ಬಿಸಿಲು ಕಾರಣ ಅಡಿಕೆಗೆ ಕೊಳೆ ರೋಗ ಹೆಚ್ಚಾಗಿದ್ದು, ತೋಟದಲ್ಲಿ ಅಡಿಕೆ ಉದುರುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಮಲೆನಾಡಿನ ಜೀವನಾಧಾರ ಬೆಳೆಯಾದ ಅಡಿಕೆಗೆ ಹೆಚ್ಚು ಸಮಸ್ಯೆ ಎದುರಾಗುತ್ತದೆ.
ಅಡಿಕೆಗೆ ಸಂಬಂಧಿಸಿದಂತೆ ಎಲೆ ಚುಕ್ಕಿ ರೋಗ , ಕೊಳೆರೋಗ ಇದರಿಂದಾಗಿ ಅಡಿಕೆಯ ಫಸಲು ಪ್ರಮಾಣ ಸಂಪೂರ್ಣ ಕಡಿಮೆ ಯಾಗುತ್ತಿದೆ. ಇದರಿಂದಾಗಿ ಮಲೆನಾಡು ಭಾಗದ ಜನಜೀವನ ಸಂಪೂರ್ಣ ಸಮಸ್ಯೆ ಗೆ ಸಿಲುಕಲಿದೆ. ಮಳೆಯ ಕಾರಣ ವಾತಾವರಣದಲ್ಲಿ ಸಮಸ್ಯೆ ಉಂಟಾಗಿರುವುದರಿಂದ ಇತರೆ ಬೆಳೆಗಳ ಮೇಲೆ ಕೂಡ ಪರಿಣಾಮ ಬೀರಲಿದೆ.
ಆಸ್ಪತ್ರೆಯಲ್ಲಿ ಜನರ ಕ್ಯೂ
ಮಳೆ, ಶೀತ ಕಾರಣ ಜನರ ಅರೋಗ್ಯ ಸಮಸ್ಯೆ ಎದುರಾಗಿದೆ. ಎಲ್ಲಾ ಆಸ್ಪತ್ರೆಗಳಲ್ಲಿ ಜನರ ಕ್ಯೂ ಇದೆ. ಪ್ರತಿ ಮನೆಯಲ್ಲಿ ಅರೋಗ್ಯ ಸಮಸ್ಯೆ ಕಾಣುತ್ತಿದೆ.