ಬಿಜೆಪಿ ಮುಖಂಡ ಕೆರೆಗೆ ಹಾರಿ ಆತ್ಮಹತ್ಯೆ ಯತ್ನ: ಬಚಾವ್!
– ತೀರ್ಥಹಳ್ಳಿ ಯಡೆಹಳ್ಳಿಕೆರೆಗೆ ಹಾರಿ ಯತ್ನ: ಪೊಲೀಸರ ರಕ್ಷಣೆ
– ತೀರ್ಥಹಳ್ಳಿ ಪೊಲೀಸ್, ಸಾರ್ವಜನಿಕರಿಂದ ಪ್ರಶಂಸೆ
– ಗುತ್ತಿಗೆ ಕೆಲಸ ಮಾಡಿ ನಷ್ಟವಾಗಿ ಆತ್ಮಹತ್ಯೆಗೆ ಯತ್ನ?!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಯಡೆಹಳ್ಳಿ ಕೆರೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿ ಮುಳುಗುತ್ತಿದ್ದ ಹೊದ್ಲ ರಮೇಶ್ ಎಂಬುವವರನ್ನು ಕರ್ತವ್ಯ ಪ್ರಜ್ಞೆ ಇಂದ ಬದುಕಿಸಿದ ಪೊಲೀಸ್ ಸಿಬ್ಬಂದಿಗಳಾದ ರಾಮಪ್ಪ ಮತ್ತು ಲೋಕೇಶ್ ಇವರ ಸಾಹಸ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ತೀರ್ಥಹಳ್ಳಿ ಪೊಲೀಸ್ ಠಾಣೆಗೆ ರಾತ್ರಿ 11 ಗಂಟೆಗೆ ಕರೆ ಬಂದ ಹಿನ್ನಲೆಯಲ್ಲಿ ತಕ್ಷಣ ಕಾರ್ಯ ಪ್ರವೃತ್ತರಾದ 112 ರ ರೆಸ್ಪಾಂಡರ್ ರಾಮಪ್ಪ ಮಾಳೂರು ಪೊಲೀಸ್ ಠಾಣೆ ಮತ್ತು ಡ್ರೈವರ್ ಲೋಕೇಶ್ ಇವರುಗಳು ಕೂಡಲೇ ದೂರುದಾರರು ತಿಳಿಸಿದ ಯಡೆಹಳ್ಳಿ ಕೆರೆಯ ಹತ್ತಿರ ತಲುಪಿದಾಗ ಕಾರೊಂದು ಅನುಮಾನಾಸ್ಪದವಾಗಿ ನಿಂತಿರುವುದು ಗೋಚರಿಸಿತು. ಅನುಮಾನಗೊಂಡು ಪರಿಶಿಲಿಸಿದಾಗ ಪಕ್ಕದ ಕೆರೆಯಲ್ಲಿ ವ್ಯಕ್ತಿಯೋರ್ವರು ಮುಳುಗುತದ್ದುದದ್ನು ನೋಡಿ ಪೊಲೀಸ್ 112 ಸಿಬ್ಬಂದಿಗಳಾದ ರಾಮಪ್ಪ ಮತ್ತು ಲೋಕೇಶ್ ತಮ್ಮ ಜೀವದ ಹಂಗು ತೊರೆದು ಹೂಳು ಮತ್ತು ನೀರು ತುಂಬಿದ್ದ ನೀರಿಗೆ ಹಾರಿ ಮುಳುಗುತ್ತಿದ್ದ ವ್ಯಕ್ತಿಯನ್ನು ಹರಸಾಹಸದಿಂದ ದಡಕ್ಕೆ ತಲುಪಿಸಿದರು. ಅರಪ್ರಜ್ಞಾವಸ್ಥೆಯಲ್ಲಿದ್ದ ಆ ವ್ಯಕ್ತಿಯು ಹೊದ್ಲ ರಮೇಶ್ ಎಂದು ತಿಳಿದು ಬಂದಿದ್ದು ತಕ್ಷಣ ಅವರನ್ನು ಜಯಚಾಮರಾಜೇಂದ್ರ ಆಸ್ಪತ್ರೆಗೆ ಕರೆ ತಂದು, ಪ್ರಥಮ ಚಿಕಿತ್ಸೆಯನ್ನು ನೀಡಿ, ಹೆಚ್ಚಿನ ಚಿಕಿತ್ಸೆಗೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ರಮೇಶ್ ಅವ್ರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯಲ್ಲಿ ಜೀವದ ಹಂಗು ತೊರೆದು ವ್ಯಕ್ತಿಯೋರ್ವರನ್ನು ರಕ್ಷಿಸಿದ ಪೊಲೀಸ್ ಸಿಬ್ಬಂದಿಗಳ ಕರ್ತವ್ಯ ಪ್ರಜ್ಞೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಎಸ್ಟಿ ಎಸ್ಸಿ ಮೋರ್ಚಾ ಅಧ್ಯಕ್ಷರಾಗಿದ್ದ ರಮೇಶ್
ಮೀನು ಸಾಕಾಣಿಕೆ, ಬೇಕರಿ, ಯಕ್ಷಗಾನ ಸೇರಿ ಅನೇಕ ಕ್ಷೇತ್ರದ ಜತೆಗೆ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದರು. ಇದೀಗ ಅರೋಗ್ಯ ಸುಧಾರಿಸಿದೆ ಎನ್ನಲಾಗಿದೆ.
– ಮಾಜಿ ಗೃಹಸಚಿವ ಆರಗ ಪೊಲೀಸರಿಗೆ ಅಭಿನಂದನೆ
ಬಿಜೆಪಿ ಎಸ್ ಟಿ ಮೋರ್ಚಾ ಅಧ್ಯಕ್ಷ ರಮೇಶ್ ಏಕಾಏಕಿ ಆತ್ಮಹತ್ಯೆಗೆ ಯತ್ನಿಸಿದ್ದು ವಿಷಯ ತಿಳಿದು ತಮ್ಮ ಪ್ರಾಣವನ್ನು ಲೆಕ್ಕಿಸದೆ ಆತನನ್ನು ಕಾಪಾಡಿದ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಅಭಿನಂದನೆ ತಿಳಿಸಿದ್ದಾರೆ. ಅಧಿಕಾರಿಗಳನ್ನು ಸನ್ಮಾನ ಮಾಡಬೇಕು ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕನ್ಸ್ಟ್ರಕ್ಷನ್ ಕೆಲಸ ಮಾಡಿದ ಹಣ ನೀಡಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಪ್ರಯತ್ನ
ನ್ಸ್ಟ್ರಕ್ಷನ್ ಕೆಲಸ ಮಾಡಿದ ಹಣ ನೀಡಿಲ್ಲ ಎಂಬ ಕಾರಣಕ್ಕೆ ುತ್ಿಗೆದಾರ ಹಾಗ ಬಿಜೆಪಿ ಎಸ್ ಟಿ ಮೋರ್ಚಾ ಅಧ್ಯಕ್ಷ ರಮೇಶ್ ಎಂಬಾತ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ ಎಂದು ವರದಿಯಾಗಿದೆ. ಪಟ್ಟಣದ ಯಡೇಹಳ್ಳಿಕೆರೆಗೆ ಹೊದಲ ಅರಳಾಪುರ ಗ್ರಾಮದ ರಮೇಶ್ ಎಂಬಾತ ಮಂಗಳವಾರ ಸಂಜೆ ಹಲವು ಮುಖಂಡರಿಗೆ ಕರೆ ಮಾಡಿ ತಾನು ಸಾಯುತ್ತಿರುವುದಾಗಿ ತಿಳಿಸಿದ್ದಾನೆ. ನಂತರ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದು ಪೊಲೀಸರು ಯಡೇಹಳ್ಳಿಕೆರೆ ಬಳಿ ಆತ ನೀರಿನಲ್ಲಿ ಒದ್ದಾಡುತ್ತಿರುವುದನ್ನು ನೋಡಿ ಆತನನ್ನು ರಕ್ಷಿಸಿದ್ದಾರೆ.