- ಸ್ತ್ರೀ ಶಕ್ತಿ ಸಂಘಗಳ ಕಂತು ಕೂಡ ಈಗ ಕಷ್ಟ ಕಷ್ಟ
- ಸರಕಾರ ಗಮನಿಸಲಿ..ಜನರ ನೋವಿಗೆ ದನಿಯಾಗಲಿ!
- 3 ತಿಂಗಳು ಮುಂದೂಡಿಕೆಗೆ ಜನರ ಪಟ್ಟು..!
ಬೆಂಗಳೂರು: ಕರೋನಾದಿಂದ ಇಡೀ ಕರುನಾಡು ಸಂಕಷ್ಟದಲ್ಲಿದೆ. ಹಳ್ಳಿ ಹಳ್ಳಿ ಜನ ದುಡಿಮೆ ಇಲ್ಲದೆ ಪರದಾಟ ನಡೆಸುತ್ತಿದ್ದಾರೆ. ಉದ್ಯಮ, ಉದ್ಯೋಗ, ಕೆಲಸ ಇಲ್ಲದೆ ಜನ ಹಣದ ಮುಖ ನೋಡಲು ಸಾಧ್ಯವಾಗುತ್ತಿಲ್ಲ.
ತುತ್ತು ಹೊತ್ತಿನ ಊಟಕ್ಕೂ ಕಷ್ಟ ಇದೆ. ಆದರೆ ಈ ಹಿಂದೆ ಮಾಡಿರುವ ಸಾಲ ಕೂಡ ಹಲವರ ಬಲಿ ಪಡೆಯುತ್ತಿದೆ. ಆದರೆ ಕೇಂದ್ರ, ರಾಜ್ಯ ಸರಕಾರ ಇದುವರೆಗೂ ಯಾವುದೇ ನಿರ್ಧಾರ ಪ್ರಕಟ ಮಾಡಿಲ್ಲ. ರಾಜ್ಯ ಸರಕಾರಕ್ಕೆ ಈ ಹಕ್ಕು ಇಲ್ಲ. ಆರ್ಬಿಐ ಮೂಲಕ ಕೇಂದ್ರ ಸರಕಾರ ಈ ಅದೇಶ ಹೊರಡಿಸಬೇಕಿದೆ. ರಾಜ್ಯದ ಸಂಸದರು ಈ ಬಗ್ಗೆ ದನಿ ಎತ್ತಬೇಕಿದೆ.
ಪ್ರತಿ ಕಾರ್ಯಕರ್ತರು, ನಾಯಕರು ಸರಕಾರಗಳ ಗಮನ ಸೆಳೆಯಬೇಕಿದೆ. ಪ್ರತಿ ಮನೆಯಲ್ಲೂ ಸಾಲ ಇದೆ. ಸ್ತ್ರೀ ಶಕ್ತಿ ಸಂಘ, ಖಾಸಗಿ ಫೈನಾನ್ಸ್, ಬ್ಯಾಂಕ್ಗಳಿಂದ ಜನ ಸಾಲ ಪಡೆದು ಉದ್ಯಮ, ಮನೆ, ಉದ್ಯೋಗ ಮಾಡುತ್ತಿದ್ದಾರೆ. ಆದರೆ ಕರೋನಾ ಎಲ್ಲಾ ಯೋಜನೆ, ಯೋಚನೆಗಳನ್ನು ಬುಡಮೇಲು ಮಾಡಿದೆ. ಹೀಗಾಗಿ ತಕ್ಷಣ ಸರಕಾರ 3 ತಿಂಗಳು ಕಂತು ಮುಂದೂಡಿಕೆ ಮಾಡಲು ನಿರ್ಧಾರ ಮಾಡಬೇಕು. ಇಲ್ಲವಾದಲ್ಲಿ ಜನರನ್ನು ಫೈನಾನ್ಸ್ ಸಂಸ್ಥೆ ಹಿಂಡಿ ಹಿಪ್ಪೆ ಮಾಡಿ ಮಾನಸಿಕ ಹಿಂಸೆ ಮಾಡುತ್ತಿದ್ದಾರೆ. ಇದರಿಂದ ಸಾವಿರಾರು ಮಂದಿ ಆತ್ಮಹತ್ಯೆ ಹಾದಿ ಹಿಡಿದರೂ ಅಚ್ಚರಿ ಇಲ್ಲ.
ಕೈಗೆ ಉದ್ಯೋಗ ಕೊಡಿ.. ಇಲ್ಲವೇ ಆರೋಗ್ಯ ವ್ಯವಸ್ಥೆ ಸುಧಾರಿಸಿ.. ಇಲ್ಲವೇ ಸರಕಾರವೆ ಹಣ ನೀಡಲಿ ಎಂಬ ಆಕ್ರೋಶ ಕಂಡು ಬರುತ್ತಿದೆ. ಇಷ್ಟು ವರ್ಷಗಳ ಸುಳ್ಳು, ಹುಸಿ ಭರವಸೆ, ಭವಿಷ್ಯದ ಚಿಂತನೆಇಲ್ಲದ ಸರಕಾರ, ಅಳುವವರ ಕೆಟ್ಟ ಚಿಂತನೆಗೆ ಕರೋನಾ ಬುದ್ದಿ ಕಳಿಸಿದೆ. ಇನ್ನಾದರೂ ಎಚ್ಚರ ವಹಿಸಬೇಕು. ಇಲ್ಲವಾದರೆ ಕಾಲವೇ ಉತ್ತರಿಸಲಿದೆ