ಟಾಪ್ 3 ನ್ಯೂಸ್ ತೀರ್ಥಹಳ್ಳಿ
ತೀರ್ಥಹಳ್ಳಿಯಲ್ಲಿ 2 ದಿನ ಹೈಸ್ಕೂಲ್ ಮಟ್ಟದ ಕ್ರೀಡಾಕೂಟ
– ಸೆ. 19,20ರಂದು ಸಹ್ಯಾದ್ರಿ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಿಂದ ತಾಲ್ಲೂಕು ಮಟ್ಟದ ಬಾಲಕ/ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ
– ದಸರಾ ಉತ್ಸವ ಸಮಿತಿ ಸಂಚಾಲಕರಾಗಿ ಸಂದೇಶ್ ಜವಳಿ ಪುನರಾಯ್ಕೆ!
NAMMUR EXPRESS NEWS
ತೀರ್ಥಹಳ್ಳಿ : ಸಹ್ಯಾದ್ರಿ ಸಂಯುಕ್ತ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ತೀರ್ಥಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಅಥ್ಲೆಟಿಕ್ಸ್ ಕ್ರೀಡಾಕೂಟ ನೆರವೇರಲಿದೆ. 17 ವರ್ಷ ವಯೋಮಿತಿಯೊಳಗಿನ ವಲಯ ಹಾಗೂ ತಾಲ್ಲೂಕು ಮಟ್ಟದ ಬಾಲಕ/ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ, ಸೆ 19 ಗುರುವಾರ ಮತ್ತು 20 ಶುಕ್ರವಾರ, ಬೆಳಿಗ್ಗೆ 09-30 ಕ್ಕೆ ಡಾ. ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲಾ ಕ್ರೀಡಾಂಗಣ ನೆರವೇರಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಚಿವ ಎಸ್. ಮಧು ಬಂಗಾರಪ್ಪ ನೆರವೇರಿಸಲಿದ್ದಾರೆ. ಕ್ರೀಡಾ ಧ್ವಜಾರೋಹಣವನ್ನ ಶ್ರೀ ಆರಗ ಜ್ಞಾನೇಂದ್ರ ಮಾಜಿ ಗೃಹ ಸಚಿವರು ಮಾಲಿದ್ದಾರೆ. ಈ ಕಾರ್ಯಕ್ರಮದ ಅ್ಕ್ತೆಯನ್ನು ಶ್ರೀ ಬಾಳೇಹಳ್ಳಿ ಪ್ರಭಾಕರ್ ಅವರು ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಬಿ.ವೈ. ರಾಘವೇಂದ್ರ, ಶ್ರೀ ಆರ್.ಎಂ.ಮಂಜುನಾಥಗೌಡರು, ಕಿಮ್ಮನೆ ರತ್ನಾಕರ್, ಭೋಜೆಗೌಡ, ಭಾರತೀ ಶೆಟ್ಟಿ, ಡಿ ಎಸ್ ಅರುಣ್, ಗುರುರಾಜ್ ಹೀಗೆ ಅನೇಕ ಜನರು ಈ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ. ಸೆಪ್ಟೆಂಬರ್ 20 ಶುಕ್ರವಾರ ಮಧ್ಯಾಹ್ನ 3:30ಕ್ಕೆ ಸಮಾರೋಪ ಸಮಾರಂಭ ಕಾರ್ಯಕ್ರಮ ಕೂಡ ನೆರವೇರಲಿದೆ, ಇದರ ಅಧ್ಯಕ್ಷತೆಯನ್ನು ಬಾಳೇ ಹಳ್ಳಿ ಪ್ರಭಾಕರ್ ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ನಿರ್ದೇಶಕರು ಸರ್ವರನ್ನು ಕೂಡ ಆದರದಿಂದ ಸ್ವಾಗತವನ್ನು ಕೋರಿದ್ದಾರೆ.
ದಸರಾ ಉತ್ಸವ ಸಮಿತಿ ಸಂಚಾಲಕರಾಗಿ ಸಂದೇಶ್ ಜವಳಿ ಪುನರಾಯ್ಕೆ!
– ಶ್ರೀ ರಾಮೇಶ್ವರ ದೇವರ ದಸರಾ ಉತ್ಸವದ ಪೂರ್ವ ಸಿದ್ಧತೆ
ತೀರ್ಥಹಳ್ಳಿ: ಅಕ್ಟೋಬರ್ 11,12 ರಂದು ನಡೆಯಲಿರುವ ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವರ ದಸರಾ ಉತ್ಸವದ ಪೂರ್ವ ಸಿದ್ಧತೆ ಹಾಗೂ ಸಮಿತಿ ರಚನೆ ಗಾಗಿ ಸೆ.17ರಂದು ಶಾಸಕ ಆರಗ ಜ್ಞಾನೇಂದ್ರರ ಅಧ್ಯಕ್ಷತೆ ಯಲ್ಲಿ ದಸರಾ ಸಭೆ ಕರೆಯಲಾಗಿತ್ತು. 2023ನೇ ಸಾಲಿನಲ್ಲಿ ದಸರಾ ಸಮಿತಿ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದ ಪ.ಪಂ.ಮಾಜಿ ಅಧ್ಯಕ್ಷ ಸಂದೇಶ ಜವಳಿ ಅವರನ್ನೇ ಈ ಬಾರಿ ಸಂಚಾಲಕರನ್ನಾಗಿ ಪುನರಾಯ್ಕೆ ಮಾಡಲಾಯಿತು.ಹಿಂದಿನ ವರ್ಷದ ಉಪ ಸಮಿತಿಗಳನ್ನು ಈ ಬಾರಿಯೂ ಮುಂದುವರಿಸಲು ಸಭೆ ತೀರ್ಮಾನಿಸಿದೆ.
ತೀರ್ಥಹಳ್ಳಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ, ಬೆಳಗ್ಗೆ 9-00 ಗಟೆಗೆ ಸ.ಪ.ಪೂ ಕಾಲಜು ಮೈದಾನ, ತೀರ್ಥಹಳ್ಳಿಯಲ್ಲಿ ತೀರ್ಥಹಳ್ಳಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ನೆರವೇರಲಿದೆ. ಯಾವೆಲ್ಲಾ ಕ್ರೀಡಾಕೂಟಗಳ ಆಯ್ಕೆ ಸ್ಪರ್ಧೆಗಳು ಇದ್ದು, ಅಥ್ಲೆಟಿಕ್ಸ್, ವಾಲಿಬಾಲ್, ಖೋ-ಖೋ, ಕಬಡ್ಡಿ, ಥ್ರೋ ಬಾಲ್, ಬಾಲ್ ಬ್ಯಾಡ್ಮಿಂಟನ್ ಎಂದು ವಿಶೇಷ ಸೂಚನೆ ನೀಡಲಾಗಿದೆ, ಆಯಾ ತಾಲ್ಲೂಕಿನವರು ಮಾತ್ರ ಭಾಗವಹಿಸಬೇಕು, ಭಾಗವಹಿಸುವ ಸ್ಪರ್ದಿಗೆ 2 ವೈಯಕ್ತಿಕ ಮತ್ತು 1 ಗುಂಪು ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.
300 ಜನ ಕಾರ್ಮಿಕರಿಗೆ ಶಾಸಕ ಆರಗ ಜ್ಞಾನೇಂದ್ರ ಅವರಿಂದ ಕಿಟ್
ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ 300 ಜನ ಕಾರ್ಮಿಕರಿಗೆ ಕಿಟ್ ಕೊಡುವ ವಿತರಣೆ ಮಾಡಿದ್ದಾರೆ. .
ಸೆ.18ರಂದು ಪಟ್ಟಣದ ಲಯನ್ಸ್ ಭವನದಲ್ಲಿ ಕಾರ್ಮಿಕರಿಗೆ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು ಕಾರ್ಮಿಕರಿಗೆ ಉಪಕರಣ ಕೊಡುವ ಕೆಲಸ ಸರ್ಕಾರಿದಿಂದ ಆಗುತ್ತಿದೆ. ಮದುವೆ, ಮಕ್ಕಳ ಶಿಕ್ಷಣ, ಅಪಘಾತ ಹೀಗೆ ಸರ್ಕಾರದಿಂದ ಹಣ ಬರುತ್ತಿದೆ ಎಂದಾಗ ಮಕ್ಕಳಿಗೆ ಸ್ಕಾಲರ್ ಶಿಪ್ ಬರುತ್ತಿಲ್ಲ ಎಂದು ಕಾರ್ಮಿಕರು ತಿಳಿಸಿದ್ದಾರೆ ಎಂದರು.
ಕಾರ್ಮಿಕ ಇಲಾಖೆಯಲ್ಲಿ ಏನೇ ಅನ್ಯಾಯ ಆದರೂ ನನ್ನ ಗಮನಕ್ಕೆ ತನ್ನಿ, ಅಥವಾ ಅಧಿಕಾರಿಗಳಿಂದ ತೊಂದರೆ ಆದರೆ ತಿಳಿಸಿ, ಕಾರ್ಮಿಕ ಕಾರ್ಡ್ ರಿನೀವಲ್ ಮಾಡಿಕೊಳ್ಳಬೇಕು ಎಂದರೆ ಪ್ರತಿಯೊಬ್ಬರು ಮಾಡಿಸಿಕೊಳ್ಳಿ. ನಿಮಗೆ ಬರುವ ಸೌಲಭ್ಯ ತಪ್ಪಿ ಹೋಗಬಾರದು ಎಂಬುದು ನನ್ನ ಇಚ್ಛೆ ಎಂದು ತಿಳಿಸಿದರು.