ಕರ್ನಾಟಕ ಜಾನಪದ ಪರಿಷತ್ತಿಗೆ ತುಂಬಿನಕೆರೆ ಬಸವರಾಜ್ ಸಾರಥಿ!
– ಹೊಸದುರ್ಗ ತಾಲೂಕು ಅಧ್ಯಕ್ಷರಾಗಿ ಆಯ್ಕೆ: ಅಭಿನಂದನೆಗಳು
– ಸಮಾಜ, ಧಾರ್ಮಿಕ, ಸಂಘಟನೆ ಸೇವಕನಿಗೆ ಒಲಿದ ಹುದ್ದೆ
NAMMUR EXPRESS NEWS
ಹೊಸದುರ್ಗ: ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾಗಿ ಪತ್ರಕರ್ತ ತುಂಬಿನಕರೆ ಬಸವರಾಜ್ ಆಯ್ಕೆಯಾಗಿದ್ದು, ಕರ್ನಾಟಕ ಜಾನಪದ ಪರಿಷತ್ತಿನ ಕೇಂದ್ರ ಸಮಿತಿಯ ಮಾರ್ಗದರ್ಶನದ ಮೇರೆಗೆ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ನಿರಂಜನ ದೇವರಮನೆ ತಿಳಿಸಿದ್ದಾರೆ.
ಈಗಾಗಲೇ ಸಾಮಾಜಿಕ, ಧಾರ್ಮಿಕ, ಸಂಘಟನೆಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಜಿಲ್ಲೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಬಸವರಾಜ್ ಅವರಿಗೆ ಅವರ ಸ್ನೇಹಿತರು, ಅಭಿಮಾನಿಗಳು ಶುಭಾಶಯ ಸಲ್ಲಿಸುತ್ತಿದ್ದಾರೆ.
ಆಯ್ಕೆ ಬಗ್ಗೆ ಪ್ರತಿಕ್ಿಯಿಸಿ ತುಂಬಿನಕೆರೆ ಬಸವರಾಜ್ ಮಾತನಾಡಿ, ಪುಣ್ಯಭೂಮಿ ಕರ್ನಾಟಕದ ಸಾಂಪ್ರದಾಯಿಕ ಜನಪದ ಕಲೆಗಳನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸೋಬಾನೆ ವೀರಗಾಸೆ, ಡೊಳ್ಳು ಕುಣಿತ, ಇದರಲ್ಲಿ ಪರಿಣಿತರಾದ ಎಷ್ಟೋ ವ್ಯಕ್ತಿಗಳು ಅವಕಾಶ ಸಿಗದೇ ನೇಪಥ್ಯಕ್ಕೆ ಸರಿದಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ಹುದುಗಿರುವ ಇಂತಹ ಪ್ರತಿಭೆಗಳನ್ನು ಗುರುತಿಸಿ, ಪ್ರಾಮಾಣಿಕವಾಗಿ ಮೇಲೆ ತರುವ ಪ್ರಯತ್ನ ಮಾಡುತ್ತೇನೆ. ಜಾನಪದ ಕರ್ನಾಟಕದ ಪುರಾತನ ಪ್ರಸಿದ್ಧ ಕಲೆಯಾಗಿದ್ದು, ಜಾನಪದರ ಬಾಯಿಯಲ್ಲಿ ಸತ್ಯ-ಸಂದೇಶಗಳು ಅಡಗಿವೆ. ಇಂತಹ ಕರ್ನಾಟಕ ಜಾನಪದ ಪರಿಷತ್ ಖ್ಯಾತ ಕಾದಂಬರಿಕಾರ ಐಎಎಸ್ ಅಧಿಕಾರಿ ಎಚ್.ಎಲ್.ನಾಗೇಗೌಡರಿಂದ ಸ್ಥಾಪಿತವಾಗಿರುವ ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶವನ್ನು ಕಲ್ಪಿಸಿರುವುದು ಹೆಮ್ಮೆ ಎನಿಸಿದೆ. ನನಗೆ ಸಿಕ್ಕಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಹೇಳಿದರು.