ಸಹ್ಯಾದ್ರಿ, ಶರಾವತಿ, ಸಮೃದ್ಧಿ ವಾರ್ಷಿಕ ಸಭೆ ಸೂಪರ್
– ಸಾವಿರಾರು ಜನರು ಭಾಗಿ: ಸಂಸ್ಥೆ ಬೆಳವಣಿಗೆ ಪಯಣ ವಿವರಿಸಿದ ವಿಜಯ್ ದೇವ್
– ಸಹಕಾರ ಸಂಸ್ಥೆ ಕಟ್ಟುವುದು ಸುಲಭವಲ್ಲ: ಮಂಜುನಾಥ ಗೌಡ
– ಮಲೆನಾಡ ಅಡಿಕೆ ಕಲಬೆರಕೆ ವಿರುದ್ಧ ದನಿ ಎತ್ತಿದ ಆರ್. ಎಂ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಹೆಮ್ಮೆಯ ಸಹಕಾರ ಸಂಸ್ಥೆಗಳಾದ ಸಹ್ಯಾದ್ರಿ, ಶರಾವತಿ, ಸಮೃದ್ಧಿ ಸಂಸ್ಥೆಗಳ ವಾರ್ಷಿಕ ಮಹಾ ಸಭೆ ಮಂಗಳವಾರ ತೀರ್ಥಹಳ್ಳಿಯ ಶಾಂತವೇರಿಗೋಪಾಲಗೌಡ ರಂಗಮಂದಿರದಲ್ಲಿ ಸಾವಿರಾರು ಷೇರುದಾರರ ಸಮ್ಮುಖದಲ್ಲಿ ನಡೆಯಿತು. ರಾಜ್ಯದ ಸಹಕಾರ ಕ್ಷೇತ್ರದಲ್ಲಿ ದಾಖಲೆ ಎಂಬಂತೆ ಸಾವಿರಾರು ಜನರು ವಾರ್ಷಿಕ ಸದಸ್ಯರ ಸಭೆಯಲ್ಲಿ ಭಾಗಿಯಾದರು.
ಸಹ್ಯಾದ್ರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ವಿಜಯ್ ದೇವ್ ಮಾತನಾಡಿ ಸಂಸ್ಥೆ ಬೆಳೆದು ಬಂದ ಹಾದಿ ವಿವರಿಸಿದರು. ಇಂದು 1300 ಕೋಟಿಗೂ ಹೆಚ್ಚು ವ್ಯವಹಾರ ಮಾಡುತ್ತಿರುವ ಸಹ್ಯಾದ್ರಿ ಸಂಸ್ಥೆಗೆ ಷೇರುದಾರರು, ರೈತರು ಬೆನ್ನೆಲುಬು ಎಂದರು.
ನಮ್ಮ ಸಂಸ್ಥೆ ಹುಟ್ಟಲು ಕಾರಣ ಮಂಜುನಾಥ ಗೌಡ. ಮೊದಲ ಹಂತ ಹಣ 5 ಲಕ್ಷ ಸಾಲವಾಗಿ ನಮ್ಮ ಸಂಸ್ಥೆಗೆ ಕೊಟ್ಟಿದ್ದರು. ಈಗ 1350 ಕೋಟಿ ವ್ಯವಹಾರ ಮಾಡಿದೆ. ಮಂಜುನಾಥ ಗೌಡ ಅಂದು ಸಹಕಾರ ಮಾಡಿದ್ದಾರೆ. ಶರಾವತಿ, ಸಮೃದ್ಧಿ ಬಳಿಕ 102 ಸೊಸೈಟಿ ಆಗಿವೆ. ಪಿಗ್ಮಿ ಸಂಗ್ರಹ ಕೂಡ ನಮ್ಮ ಸೊಸೈಟಿ ಹೆಮ್ಮೆ. 250 ಮಂದಿಗೆ ಹೆಚ್ಚು ಮಂದಿ ಉದ್ಯೋಗ ಕೊಟ್ಟಿದೆ. ಆರ್ಥಿಕವಾಗಿ ನಮ್ಮ ಸಂಸ್ಥೆ ಇಂದು ಕೋಟಿವರೆಗೆ ಹಣ ಸಾಲ ಕೊಡುವ ಸಾಮರ್ಥ್ಯ ಬಂದಿದೆ. ನನ್ನ ಬೆಳವಣಿಗೆಗೆ ನಮ್ಮವನೊಬ್ಬ ಕಾರಣ. ಬಸವಾನಿ ಬಿಟ್ಟವನು ಇಂದು ಈ ಮಟ್ಟಕ್ಕೆ ಬೆಳೆದಿದ್ದೇನೆ. ಎಲ್ಲರ ಸಹಕಾರಕ್ಕೆ ಧನ್ಯವಾದ ಎಂದರು.
120 ಕೋಟಿ ಮೌಲ್ಯದ ಚಿರಾಸ್ತಿ ಹೊಂದಿದ ಶರಾವತಿ ಸಂಸ್ಥೆ
ಶರಾವತಿ ಸಹಕಾರಿ ಅಧ್ಯಕ್ಷ ಅಜಿತ್ ಮಾತನಾಡಿ, ಶರಾವತಿ ಸಂಸ್ಥೆ ಇಂದು ಎಲ್ಲರ ಸಹಕಾರದೊಂದಿಗೆ ಪೆಟ್ರೋಲ್ ಬಂಕ್, ಇ ಸ್ಟ್ಯಾಂಪ್ ಸೇರಿ ಅನೇಕ ಸೇವೆ ಮಾಡುತ್ತಿದೆ. 27 ಕೋಟಿ ಠೇವಣಿ, 57 ಕೋಟಿ ಸಾಲ ವಿತರಣೆ, 120 ಕೋಟಿ ಮಾರುಕಟ್ಟೆ ಮೌಲ್ಯದ ಚಿರಾಸ್ತಿ ಸಂಸ್ಥೆ ಹೊಂದಿದೆ ಎಂದರು. ಷೇರುಧಾರರು, ಸದಸ್ಯರು, ಎಲ್ಲಾ ಜನತೆಗೆ ಸಂಸ್ಥೆ ಗಟ್ಟಿಯಾಗಿದೆ ಎಂಬುದು ಈ ಮೂಲಕ ತಿಳಿಯುತ್ತದೆ ಎಂದರು.
ಮಂಜುನಾಥ ಗೌಡರಿಗೆ ಸನ್ಮಾನ: ತನ್ನ ಪಯಣ ನೆನಪಿಸಿದ ಸಹಕಾರ ನಾಯಕ
ವಾರ್ಷಿಕ ಸಭೆಯಲ್ಲಿ ಸನ್ಮಾನ ಸ್ವೀಕಾರ ಮಾಡಿ ಮಾತನಾಡಿದ ಡಾ.ಮಂಜುನಾಥ ಗೌಡ, ಸಹಕಾರ ಸಂಸ್ಥೆಗಳ ಸ್ಥಾಪನೆ ತುಂಬಾ ಕಷ್ಟ. ನಾವೆಲ್ಲರೂ ಮಲೆನಾಡಿಗರು. ಸಹಕಾರ ಸಂಸ್ಥೆ ಒಂದು ಕುಟುಂಬ ಇದ್ದ ಹಾಗೆ. ಅಡಿಕೆ ದರ ಹೀಗೆ ಇರುತ್ತಾ?. ಎಂಬ ಚರ್ಚೆ ಆಗುತ್ತಿದೆ
1000 ಲೋಡ್ ಅಡಿಕೆ ಶಿವಮೊಗ್ಗದಿಂದ ಹೋಗಿದ್ದ ವಾಪಾಸ್ ಬಂದಿದೆ. ಅಡಿಕೆ ಗುಣಮಟ್ಟದ ರತೆ ಎದುರಾಗಿದೆ. ಇದು ದುರತ. ಹಣದ ಆಸೆಗೆ ಕೆಲವು ವರ್ತಕರು ಅಡಿಕೆ ಮಾನ ತೆಗೆಯುತ್ತಿದ್ದಾರೆ ಎಂದರು.
ಅಡಕೆ ಬೆಳೆಯ ಭವಿಷ್ಯ ಅಪಾಯದಲ್ಲಿದೆ. ಅಡಿಕೆ ಗುಣಮಟ್ಟದಲ್ಲಿ ರಾಜಿ ಬೇಡ. ಸಹಕಾರ ವ್ಯವಸ್ಥೆಯಿಂದ ಇಂದು ದೇಶ ಉಳಿದಿದೆ. ರಾಷ್ಟ್ರೀಕೃತ ಬ್ಯಾಂಕಿಗೆ ಸಹಕಾರಿ ಸಂಸ್ಥೆ ಡಿಪಾಸಿಟ್ ನೀಡುವ ಮಟ್ಟಕ್ಕೆ ಬೆಳೆದಿವೆ ಎಂದರು.
ಸರ್ವರಿಗೂ ಭೋಜನ ವ್ಯವಸ್ಥೆ
ಎಲ್ಲಾ ಷೇರುದಾರರಿಗೂ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸಸ್ಯಾಹಾರಿ ಮತ್ತು ಮಾಂಸಹಾರಿ ಭೋಜನ ಮಾಡಲಾಗಿತ್ತು. ಹಿಲಿಕೆರೆ ನಾಗರಾಜ್ ಮತ್ತು ಪ್ರದೀಪ್ ಅವರ ಭೋಜನ ಎಲ್ಲರ ಮೆಚ್ಚುಗೆ ಪಡೆಯಿತು.