ಕರ್ನಾಟಕ ಟಾಪ್ ನ್ಯೂಸ್
ಸಿನಿಮಾ ಹೆಸರಲ್ಲಿ ಹನಿ ಟ್ರ್ಯಾಪ್: ನಟಿ ಆ್ಯಂಡ್ ಗ್ಯಾಂಗ್ ವಿರುದ್ಧ ಕೇಸ್!
* ಹೃದಯಾಘಾತ:ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನಿಧನ!
* ಸೆಕ್ಸ್ ಕೇಸ್: ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಅರೆಸ್ಟ್!
* ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
* ನಟ ದರ್ಶನ್ಗೆ ಟಿವಿ ಭಾಗ್ಯ: ಅಮ್ಮನ ನೋಡಿ ಕಣ್ಣೀರು!
* ಡ್ರಗ್ಸ್ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವ ಹೆಜ್ಜೆ!
NAMMUR EXPRESS NEWS
ಬೆಂಗಳೂರು: ಸಿನಿಮಾ ಆಸೆ ತೋರಿಸಿ ಹನಿಟ್ರ್ಯಾಪ್ ಮೂಲಕ ಖೆಡ್ಡಾಗೆ ಕೆಡವಿ 40 ಲಕ್ಷ ರೂ. ದೋಚಿದ ಯುವತಿ ಆ್ಯಂಡ್ ಗ್ಯಾಂಗ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಿನಿಮಾ ಮಾಡುವುದಾಗಿ ನಂಬಿಸಿದ್ದ ಯುವತಿಯ ಮಾತು ನಂಬಿ ಆ ಬ್ಯುಸಿನೆಸ್ಮೆನ್ ಕೂಡ ಆಕೆಯ ಸಂಗ ಮಾಡಿಕೊಡಿದ್ದನು.
ಇದಾದ ಕೆಲ ದಿನಗಳ ನಂತರ ಡೈರೆಕ್ಟ್ ಆಗಿ ಹಣದ ಬೇಿಕೆ ಟ್ಟಿದ್ದಳು. ಹಣ ಾಪಸ್ ಕೇಳಿದಾಗ ತನ್ನ ರೂಮಿಗೆ ಕರೆಸಿಕೊಂಡು, ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ಗೊತ್ತಿಲ್ಲದಂತೆ ಅದನ್ನು ವಿಡಿಯೊ ಮಾಡಿಕೊಂಡಿರುವುದಾಗಿ ದೂರುದಾರನಿಂದ ಆರೋಪಿಸಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದೆ ಆ ಸುಂದರಿ ಇದೇ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಬ್ರೇಸ್ ಲೈಟ್, ಚೈನ್ ಅಂತೆಲ್ಲಾ ಸುಮಾರು ನಲವತ್ತು ಲಕ್ಷ ಹಣ ವಂಚನೆ ಮಾಡಿದ್ದಾರೆ.
ಸದ್ಯ ಅಶೋಕನಗರ ಠಾಣೆಯಲ್ಲಿ ಕಾವ್ಯ, ದಿಲೀಪ್, ರವಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಸದ್ಯ ಆರೋಪಿಗಳಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಹೃದಯಾಘಾತ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನಿಧನ!
ಬೆಂಗಳೂರು : ಹೃದಯಾಘಾತದಿಂದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ(84) ನಿಧನರಾಗಿದ್ದಾರೆ.
ಬೆಂಗಳೂರಿನ ಜ್ಯೋತಿ ನಿವಾಸದಲ್ಲಿ ಹೃದಯಾಘಾತದಿಂದ ಕಾಣಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.ಕೆಂಪಣ್ಣ ಅವರು ಬಿಜೆಪಿ ಸರ್ಕಾರದ ವಿರುದ್ಧ 40 % ಕಮಿಷನ್ ಆರೋಪ ಮಾಡಿ ಬಹಳ ಸುದ್ದಿಯಾಗಿದ್ದರು.
ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಲೈಂಗಿಕ ಕಿರುಕುಳ ಪ್ರಕರಣ,ಎಫ್ಐಆರ್ ದಾಖಲು!
ಬೆಂಗಳೂರು: ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗಿನ ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರನ್ನು ಬಂಧಿಸಿದ್ದಾರೆ. ಬೆಂಗಳೂರಿನ ಸೈಬರಾಬಾದ್ ಎಸ್ ಒಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಾನಿ ಮಾಸ್ಟರ್ ಉತ್ತರದ ರಾಜ್ಯಗಳಿಗೆ ಪಲಾಯನ ಮಾಡಿ ಹೈದರಾಬಾದ್ ನಲ್ಲಿ ತನ್ನ ಸ್ನೇಹಿತರ ಮನೆಯಲ್ಲಿ ಅಡಗಿದ್ದಾನೆ ಎಂಬ ವದಂತಿಗಳು ಹಬ್ಬಿದ್ದವು.ಜಾನಿ ಅವರು ಕೆಲಸ ಮಾಡುತ್ತಿರುವ 21 ವರ್ಷದ ಮಹಿಳಾ ನೃತ್ಯ ಸಂಯೋಜಕಿಯೊಬ್ಬರು ಮಾಸ್ಟರ್ ಕೆಲವು ಸಮಯದಿಂದ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಹೈದರಾಬಾದ್ ನರಸಿಂಗಿಯಲ್ಲಿರುವ ಅವರ ನಿವಾಸದಲ್ಲಿ ಮತ್ತು ಮುಂಬೈ ಚಿತ್ರಕ್ಕಾಗಿ ಮುಂಬೈ ಮತ್ತು ಹೈದರಾಬಾದ್ ಸೇರದಂತೆ ವಿಧ ನಗರಗಳಿಗೆ ಹೋಾಗ ಜಾನಿ ಮಾಸ್ಟರ್ ತನ್ನ ಮೇಲೆ ಬಾರಿ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ರಾಯದುರ್ಗಂ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು!
ಬೆಂಗಳೂರು: ಜಾತಿನಿಂದನೆ ಪ್ರಕರಣದಲ್ಲಿ ಜೈಲು ಸೇರಿದ ಬೆನ್ನಲ್ಲೇ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಶಾಸಕ ಮುನಿರತ್ನ ಅತ್ಯಾಚಾರವೆಸಗಿ ಹನಿಟ್ರ್ಯಾಪ್ಗೆ ಬಳಸಿಕೊಂಡಿದ್ದಾರೆ ಎಂದು ಸಮಾಜ ಸೇವಕಿ, ಬಿಜೆಪಿ ಕಾರ್ಯಕರ್ತೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ರಾಜರಾಜೇಶ್ವರಿ ನಗರದ ಸುಮಾರು 40 ವರ್ಷದ ಮಹಿಳೆ ಸೆ. 18ರಂದು ದೂರು ನೀಡಿದ್ದಾರೆ. ದೂರು ಆಧರಿಸಿ ಮುನಿರತ್ನ, ಆತನ ಗನ್ಮ್ಯಾನ್ ವಿಜಯಕುಮಾರ್, ಸುಧಾಕರ, ಕಿರಣ್ ಕುಮಾರ್, ಲೋಹಿತ್ ಗೌಡ, ಮಂಜುನಾಥ ಹಾಗೂ ಲೋಕಿ ಸೇರಿ 7 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ಗೆ ಟಿವಿ ಭಾಗ್ಯ
ಬೆಂಗಳೂರು: ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಭೇಟಿಯಾಗಿದ್ದು, ದರ್ಶನ್ಗೆ ಒಂದು ಬ್ಯಾಗ್ನಲ್ಲಿ ಬಟ್ಟೆ ಹಾಗೂ ಇನ್ನೊಂದು ಬ್ಯಾಗ್ನಲ್ಲಿ ಡ್ರೈ ಫ್ರೂಟ್ಸ್ ನೀಡಿದ್ದಾರೆ. ಇದರ ನಡುವೆಯೇ ನಟ ದರ್ಶನ್ ಅವರಿಗೆ ಜೈಲಾಧಿಕಾರಿಗಳು ಗುಡ್ ನ್ಯೂಸ್ ನೀಡಿದ್ದಾರೆ.
ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ಗೆ ಟಿವಿ ಭಾಗ್ಯ ಸಿಕ್ಕಿದೆ. ಹೈ ಸೆಕ್ಯೂರಿಟಿ ಸೆಲ್ನಲ್ಲಿ ಟಿವಿ ಅಳವಡಿಸಲಾಗಿದೆ. ಆದ್ರೆ ಕೇವಲ ಡಿಡಿ ಮಾತ್ರ ಬರುತ್ತೆ. ಬೇರೆ ಯಾವುದೇ ಖಾಸಗಿ ಚಾನೆಲ್ಗಳ ಸಂಪರ್ಕ ಇರುವುದಿಲ್ಲ.
ಟಿವಿ ಬೆನ್ನಲ್ಲೇ ಹಾಸಿಗೆ, ದಿಂಬು, ಪ್ಲಾಸ್ಟಿಕ್ ಚೇರ್ಗೂ ದರ್ಶನ್ ಮನವಿ ಮಾಡಿದ್ದು, ಇದಕ್ಕೆ ಕೋರ್ಟ್ನಲ್ಲೂ ಮನವಿ ಸಲ್ಲಿಸಿದ್ದಾರೆ. ನಟ ದರ್ಶನ್ ಅವರಿಗೆ ಬೆನ್ನು ನೋವಿದೆ. ಹಾಗಾಗಿ ಹಾಸಿಗೆ, ದಿಂಬು ವ್ಯವಸ್ಥೆಗೆ ಮನವಿ ಮಾಡಿದ್ದರು. ಜೈಲು ಮ್ಯಾನ್ಯುಯೆಲ್ನಲ್ಲಿ ಇದ್ದರೆ ಕೊಡ್ತಾರೆ ಅಂತ ಜಡ್ಜ್ ತಿಳಿಸಿದ್ದಾರೆ. ಇನ್ನು ತಾಯಿ ಮೀನಾ ಅವರು ಮನ ನೋಡಲು ಬಂದಿದ್ದ, ಈ ೇಳೆ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.
ಡ್ರಗ್ಸ್ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವ ಹೆಜ್ಜೆ!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡ್ರಗ್ಸ್ ತಡೆಗಟ್ಟಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಮಿತಿ ರಚಿಸಿದೆ.
7 ಸಚಿವರನ್ನೊಳಗೊಂಡ ಟಾಸ್ಕ್ಫೋರ್ಸ್ ಸಮಿತಿ ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷರಾಗಿ ಗೃಹ ಸಚಿವ ಪರಮೇಶ್ವರ್ ಅವರನ್ನು ನೇಮಕ ಮಾಡಲಾಗಿದ್ದು, ಇನ್ನುಳಿದ 6 ಸಚಿವರುಗಳನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ. ಈ ಮೂಲಕ ಡ್ರಗ್ಸ್ಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.