ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚಿದ ಆಕ್ಸಿಡೆಂಟ್, ಕ್ರೈಂ!
* ಮೊಳಕಾಲ್ಮುರು: ವಾಹನ ಡಿಕ್ಕಿ, ಪಾದಚಾರಿ ಸ್ಥಳದಲ್ಲೇ ಮೃತ!
* ಚಿತ್ರದುರ್ಗ: ಪತಿ, ಪತ್ನಿಯ ಕೊಚ್ಚಿ ಕೊಂದ ದುಷ್ಕರ್ಮಿಗಳು!
* ಚಳ್ಳಕೆರೆ: ವಾಹನದ ಟಯರ್ ಸ್ಫೋಟ: 13 ಜನಕ್ಕೆ ಗಾಯ!
NAMMUR EXPRESS NEWS
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ದಿನೇ ದಿನೇ ಅಪಘಾತ ಮತ್ತು ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ.
ಕೊಲೆ, ರಸ್ತೆ ಅಪಘಾತ, ದರೋಡೆ, ಕಳ್ಳತನ ಹೆಚ್ಚುತ್ತಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಗಮನಿಸಬೇಕಿದೆ. ಮೊಳಕಾಲ್ಮುರು ತಾಲೂಕಿನ ಅಶೋಕ ಸಿದ್ದಾಪುರ ಬಳಿ ಪಾದಚಾರಿಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಅಪಘಾತದಲ್ಲಿ ಮೊಳಕಾಲ್ಕೂರು ತಾಲೂಕಿನ ನಾಗಸಮುದ್ರ ಗ್ರಾಮದ ಕಾರ್ಮಿಕ ಮಹಮ್ಮದ್ (36) ಮೃತಪಟ್ಟಿದ್ದಾನೆ.
ಮೊಹಮ್ಮದ್ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಇನ್ನು ವಾಹನ ಚಾಲಕವಾಹನ ಸಮೇತ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ಟಿಬಿ ರಾಜಣ್ಣ, ಪಿಎಸ್ಐಗಳಾದ ಮಹೇಶ್, ಲಕ್ಷ್ಮಣ್ ಹೊಸಪೇಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತಿ, ಪತ್ನಿಯನ್ನು ಕೊಚ್ಚಿ ಕೊಲೆ!
ಚಿತ್ರದುರ್ಗ:ಚಿತ್ರದುರ್ಗ ಜಿಲ್ಲೆಯ ತುರುವನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪತಿ, ಪತ್ನಿಯನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ತಾಲೂಕಿನ ಬೊಮ್ಮಕ್ಕನಹಳ್ಳಿ ಗ್ರಾಮದ ಹನುಮಂತಪ್ಪ (48) ಹಾಗೂ ಆತನ ಪತ್ನಿ ತಿಪ್ಪಮ್ಮ (43) ಕೊಲೆಯಾದ ದುರ್ದೈವಿಗಳು. ಜಮೀನಿನಲ್ಲಿ ಈರುಳ್ಳಿಗೆ ನೀರು ಹಾಯಿಸಲು ತೆರಳಿದ್ದಾಗ ಕಿಡಿಗೇಡಿಗಳು ಕೊಲೆ ಮಾಡಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಸ್ಥಳಕ್ಕೆ ತುರುವನೂರು ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರತಿಭಟನೆ ವೇಳೆ ವಾಹನದ ಟಯರ್ ಬ್ಲಾಸ್ಟ್, 13 ಜನಕ್ಕೆ ಗಾಯ!
ಚಳ್ಳಕೆರೆ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರಿನ ಪ್ರತಿಭಟನೆಗೆ ತೆರಳುವ ವೇಳೆ ದಾರಿ ಮಧ್ಯೆ ಕ್ರೂಸರ್ ವಾಹನದ ಟಯರ್ ಸ್ಪೋಟಗೊಂಡು ಆಗಿ 13 ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಮೊಳಕಾಲ್ಕೂರು ತಾಲೂಕಿನ ಹೀರೆಕೆರೆ ಗ್ರಾಮದಿಂದ ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಅಂಗನವಾಡಿ ಹಾಗೂ ಸಹಾಯಕಿಯರು ಪ್ರತಿಭಟನೆಯಲ್ಲಿ ಭಾಗವಹಿಸಲು ಹೋಗುವಾಗ ಬುಡ್ನಹಟ್ಟಿ ಸಮೀಪದ ಪೆಟ್ರೊಲ್ ಬಂಕ್ ಬಳಿ ಕ್ರೂಸರ್ ವಾಹನದ ಟಯರ್ ಬ್ಲಾಸ್ಟ್ ಆಗಿರುವುದರಿಂದ ಅಪಘಾತ ಸಂಭವಿಸಿದೆ.
ಗಾಯಗೊಂಡವರು ಚಳ್ಳಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರನ್ನು ಹೆಚ್ಚಿನ ಚಿಕಿತ್ಸೆಯಾಗಿ ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ. ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.