ತೀರ್ಥಹಳ್ಳಿಗೆ ರಂಗು ಚೆಲ್ಲಿದ ಛತ್ರಕೇರಿ ಗಣಪತಿ ಉತ್ಸವ!
* ಸಾಂಸ್ಕೃತಿಕ ಮೆರವಣಿಗೆ ಜತೆ ರಾಜಬೀದಿ ದರ್ಬಾರ್
* ಸಂಭ್ರಮದಲ್ಲಿ ಸೌಹಾರ್ದತೆ ಮೆರೆದ,ಹಿಂದೂ, ಮುಸ್ಲಿಂ ಬಾಂಧವರು!
NAMMUR EXPRESS NEWS
ತೀರ್ಥಹಳ್ಳಿ: ಶ್ರೀ ಸಿದ್ದಿ ವಿನಾಯಕ ಯುವಕ ಸಂಘದ 41ನೇ ವರ್ಷದ ಛತ್ರಕೇರಿ ಸಾರ್ವಜನಿಕ ಗಣೇಶೋತ್ಸವದ ರಾಜಬೀದಿ ಉತ್ಸವ ಅದ್ದೂರಿಯಿಂದ ನಡೆಯಿತು. ಜತೆಗೆ ಸಾವಿರಾರು ಜನ ರಾಜಬೀದಿ ಉತ್ಸವದಲ್ಲಿ ಭಾಗಿಯಾಗಿ ಸಂಭ್ರಮಿಸುತಿದ್ದರು.
ಪಟಾಕಿ ಸಿಡಿಮದ್ದು,ವಾದ್ಯ,ಡೊಳ್ಳು ಕುಣಿತ, ವೇಷಭೂಷಣ ವಿಭಿನ್ನ ಆಕರ್ಷಣೆಯಿಂದ ತುಂಬಿದ್ದು, ಅದ್ದೂರಿಯಾಗಿ ನಡೆದ ಚೆಂಡೆ,ಭಜನೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜನರು ಕುತೂಹಲದಿಂದ ಪಾಲ್ಗೊಂಡಿದ್ದರು.
ಸೀಬಿನಕೆರೆಯಲ್ಲಿ ಹಿಂದೂ, ಮುಸ್ಲಿಂ ಬಾಂಧವರು ಸೌಹಾರ್ದತೆ
ಶಾಂತಿ, ಸುವ್ಯವಸ್ಥೆಗೆ ಹೆಸರಾದ ಸೀಬಿನಕೆರೆ ಸರ್ಕಲ್ನಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡು ತೀರ್ಥಹಳ್ಳಿಯಲ್ಲಿ ಹಿಂದೂ, ಮುಸ್ಲಿಂ ಬಾಂಧವರು ಸೌಹಾರ್ದತೆ ಮೆರೆದಿದ್ದಾರೆ.
ಛತ್ರಕೇರಿ ಗಣಪತಿಯ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಸೀಬಿನಕೆರೆ ಮೊಹರಂ ಕಮಿಟಿ, ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬದ ಅಂಗವಾಗಿ ಉಪಹಾರ ಹಾಗೂ ಪಾನೀಯ ವ್ಯವಸ್ಥೆ ಮಾಡಿದ್ದು, ಎಲ್ಲರೂ ಸೌಹಾರ್ದಯುತವಾಗಿ ಪಾಲ್ಗೊಂಡರು.
ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಅನ್ನು ಸಂಭ್ರಮದಿಂದ ಆಚರಿಸುವ ಮೂಲಕ ತೀರ್ಥಹಳ್ಳಿಯ ಹಿಂದೂ ಮುಸ್ಲಿಂ ಬಾಂಧವರು ಸೌಹಾರ್ದತೆ ಮೆರೆದಿದ್ದಾರೆ. ಕಲಾತಂಡ ಹಾಗೂ ಸಂಘದ ಸದಸ್ಯರುಗಳಿಗೆ ಉಪಹಾರ ಹಾಗೂ ಬಾದಾಮಿ ಹಾಲು ವ್ಯವಸ್ಥೆಯನ್ನು ಮಾಡಿದ್ದರು.
ಈ ಸಂದರ್ಭದಲ್ಲಿ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ನ ಮೂರನೇ ವಾರ್ಡ್ ನ ಸದಸ್ಯರಾದ ರತ್ನಾಕರ್ ಶೆಟ್ಟಿ ಹಾಗೂ ಸದಸ್ಯರು, ಛತ್ರಕೇರಿ ಗಣಪತಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.