ಶಿಕ್ಷಕರ ಸೌಹಾರ್ದ ಭವನ ಉದ್ಘಾಟನೆಗೆ ಸಿದ್ಧ
– ತೀರ್ಥಹಳ್ಳಿಯಲ್ಲೇ ಅತೀ ದೊಡ್ಡ ಕಟ್ಟಡ: ಸರ್ವರಿಗೂ ಸ್ವಾಗತ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಪ್ರಾರಂಭವಾಗಿ ರಾಜ್ಯಮಟ್ಟದಲ್ಲಿ ಹೆಸರು
ಮಾಡುತ್ತಿರುವ ರಾಜ್ಯ ಪ್ರಾಥಮಿಕ ಶಿಕ್ಷಕರ ಸೌಹಾರ್ದ ಸಹಕಾರಿಯ ನೂತನ ಕಚೇರಿ ಶಿಕ್ಷಕರ ಸೌಹಾರ್ದ ಭವನ ಉದ್ಘಾಟನೆ ಸೆ. 22ರಂದು ತೀರ್ಥಹಳ್ಳಿಯಲ್ಲಿ ನಡೆಯಲಿದೆ. ಈಗಾಗಲೇ ಕಟ್ಟಡ ಅಲಂಕಾರ ಕಾರ್ಯ ಶುರುವಾಗಿದೆ.
ಶುಕ್ರವಾರ ಮತ್ತು ಶನಿವಾರ ವಿವಿಧ ಹೋಮ ಪೂಜೆಗಳು ನಡೆದವು.ಈ ಕಾರ್ಯಕ್ರಮಕ್ಕೆ ಎಲ್ಲಾ ಷೇರುದಾರರು, ಜನರನ್ನು ಶಿಕ್ಷಕರ ಸೌಹಾರ್ದ ಸಹಕಾರಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಹಾಗೂ ಎಲ್ಲಾ ನಿರ್ದೇಶಕರು, ಸಿಬ್ಬಂದಿ ಸ್ವಾಗತಿಸಿದ್ದಾರೆ.
ಸೆ.22ರಂದು ಶಿಕ್ಷಕರ ಸೌಹಾರ್ದ ಭವನದ ಉದ್ಘಾಟನೆ ಮಹಾಸಭೆ, ಪ್ರತಿಭಾ ಪುರಸ್ಕಾರ, ನಿವೃತ್ತ ಶಿಕ್ಷಕರಿಗೆ ಸನ್ಮಾನ ನಡೆಯಲಿದೆ.
“ಶಿಕ್ಷಕರ ಸೌಹಾರ್ದಭವನ” ಕಟ್ಟಡವು ರಾಜ್ಯದಲ್ಲಿಯೇ ಪ್ರಾಥಮಿಕ ಶಾಲಾ ಶಿಕ್ಷಕರ ಮೊದಲ ಹೆಮ್ಮೆಯ ಕಟ್ಟಡವೆಂದು ಹೇಳಬಹುದಾಗಿದೆ.
2008ರಲ್ಲಿ ಸಂಸ್ಥೆ 490 ಸದಸ್ಯರನ್ನು ಒಳಗೊಂಡು ತೀರ್ಥಹಳ್ಳಿ ತಾಲೂಕಿಗೆ ಮಾತ್ರ ಸೀಮಿತವಾಗಿತ್ತು. 2015ರಲ್ಲಿ ಸೌಹಾರ್ದವಾಗಿ ಐದು ಜಿಲ್ಲೆಗೆ ವಿಸ್ತರಣೆಯಾಗಿದ್ದು, ನಂತರ ರಾಜ್ಯದ ಸೌಹಾರ್ದ ಸಂಘಟನೆಯಾಗಿ ರೂಪುಗೊಂಡಿದೆ.
ಹೊಸ ಕಟ್ಟಡದ ರಂಗು
ನೂತನ ಕಟ್ಟಡದಲ್ಲಿ ಸುಸಜ್ಜಿತ ಹೈಟೆಕ್ ಟೀಚರ್ ಸೊಸೈಟಿಯ ನೂತನ ಕಚೇರಿ, ಸೂಪರ್ ಮಾರ್ಕೆಟ್, ಸುಸಜ್ಜಿತ ಮನೆಗಳುಳ್ಳ ಅಪಾರ್ಟ್ಮೆಂಟ್, ಕಚೇರಿ ಜಾಗಗಳು, ಕನ್ವೆನ್ಷನ್ ಹಾಲ್, ಅತಿಥಿ ಗೃಹ ಸೇರಿ ಅತೀ ದೊಡ್ಡ ಕಟ್ಟಡ ಇದಾಗಿದೆ. ತೀರ್ಥಹಳ್ಳಿ ಬಸ್ ನಿಲ್ದಾಣ ಕೆಳ ಭಾಗದ ಕುವೆಂಪು ಲೇ ಔಟ್ ನಲ್ಲಿ ಇದು ನಿರ್ಮಾಣವಾಗಿದೆ.