ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ
– ಸಂಸದ ರಾಘವೇಂದ್ರ ಅವರಿಂದ ಸದಸ್ಯತ್ವ ನೊಂದಣಿ
– ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಹಳ್ಳಿ ಹಳ್ಳಿಯಲ್ಲಿ ಚಾಲನೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಬಿಜೆಪಿ ವತಿಯಿಂದ ಬಸ್ ಸ್ಟಾಂಡ್ ಆವರಣದಲ್ಲಿ ಸದಸ್ಯತ್ವ ನೊಂದಾವಣಿಗೆ , ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ ಹಾಗೂ ತೀರ್ಥಹಳ್ಳಿ ಶಾಸಕರು ಆರಗ ಜ್ಞಾನೇಂದ್ರ ಚಾಲನೆ ನೀಡಿದರು. ಈಗಾಗಲೇ ಹಳ್ಳಿ ಹಳ್ಳಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ಇದೀಗ ತೀರ್ಥಹಳ್ಳಿಯಲ್ಲಿ ವೇಗ ಸಿಕ್ಕಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಘವೇಂದ್ರ ಅವರು, ಹತ್ತು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದೇಶದ ಅಭಿವೃದ್ಧಿಗಾಗಿ ಶ್ರಮವಹಿಸಿದ್ದಾರೆ.ಇದೀಗ 10 ವರ್ಷದ ನಂತರ ನಾವು ಕೂಡ ದೇಶಕ್ಕಾಗಿ ಶ್ರಮ ಪಡ ಬೇಕಾಗಿದೆ. ಪ್ರಪಂಚದಲ್ಲಿ ಹೆಚ್ಚಿನ ಸದಸ್ಯತ್ವವನ್ನು ಹೊಂದಿರುವ ಪಕ್ಷ, ಸದಾ ದೇಶದ ಚಿಂತನೆಯನ್ನು ಹೊಂದಿರುವ ಏಕೈಕಪಕ್ಷ ಎಂದು ಬಿಂಬಿಸಿಕೊಳ್ಳುತ್ತದೆ. ಪರಿಸರದ ಬಗ್ಗೆ ಕಾಳಜಿ ವಹಿಸಿ ಹಲವಾರು ಕಾರ್ಯಕ್ರಮದೊಂದಿಗೆ ಪಾಲ್ಗೊಳ್ಳುವ ಮೂಲಕ ಕರ್ತವ್ಯ ಮೆರೆಯುವುದು ರಾಷ್ಟ್ರಮಟ್ಟದ ಕಾರ್ಯಕರ್ತನ ಕರ್ತವ್ಯ ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ನವೀನ್ ಹೆದ್ದೂರು, ಕುಕ್ಕೆ ಪ್ರಶಾಂತ್, ಸೊಪ್ಪು ಗುಡ್ಡೆ ರಾಘವೇಂದ್ರ ಸಂದೇಶ್ ಜವಳಿ, ಸಂತೋಷ್ ದೇವಾಡಿಗ, ಹಾಗೂ ಬಿಜೆಪಿಯ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.