ಶಿಕ್ಷಕರ ಸೌಹಾರ್ದ ಭವನ’ಕ್ಕೆ ಎಂಪಿ ಭೇಟಿ
– ನಾಳೆ ನಡೆಯಲಿರುವ ಕಾರ್ಯಕ್ರಮ: ಸಂಘದ ವತಿಯಿಂದ ಗೌರವ ಅಭಿನಂದನೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಕುವೆಂಪು ನಗರದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸಂಘ ನಿರ್ಮಾಣ ಮಾಡಿರುವ ನೂತನ “ಶಿಕ್ಷಕರ ಸೌಹಾರ್ದ ಭವನ” ಇದರ ಉದ್ಘಾಟನಾ ಪೂರ್ವದಲ್ಲಿ ಶನಿವಾರ ಸಂಘಕ್ಕೆ ಭೇಟಿ ನೀಡಿ ಪದಾಧಿಕಾರಿಗಳಿಗೆ ಶುಭಾಶಯ ಕೋರಿ ಸಂಘದ ವತಿಯಿಂದ ಗೌರವ ಅಭಿನಂದನೆ ಸ್ವೀಕರಿಸಲಾಯಿತು.
ಈ ಸಮಯದಲ್ಲಿ ಶಾಸಕರಾದ ಆರಗ ಜ್ಞಾನೇಂದ್ರ ಅವರು, ಸಂಘದ ಅಧ್ಯಕ್ಷರಾದ ಮಹಾಬಲೇಶ್ವರ ಹೆಗಡೆ ಅವರು ಹಾಗೂ ಪದಾಧಿಕಾರಿಗಳು ಮತ್ತು ಅನೇಕ ಮುಖಂಡರು ಉಪಸ್ಥಿತರಿದ್ದರು.
10ನೇ ಮಹಾಸಭೆ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸಂಘ ಇದರ ನೂತನ ಕಟ್ಟಡದ ಉದ್ಘಾಟನೆ ಮತ್ತು 10ನೇ ಮಹಾಸಭೆ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಸೆ.22 ಭಾನುವಾರ ಬೆಳಿಗ್ಗೆ 10-00 ರಿಂದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸಂಘ ನಿ., ತೀರ್ಥಹಳ್ಳಿ ಇದರ ನೂತನ ಕಟ್ಟಡ “ಶಿಕ್ಷಕರ ಸೌಹಾರ್ದ ಭವನ “ದಲ್ಲಿ ನಡೆಯಲಿದೆ. ಅಂದೇ ನೂತನ ಶಿಕ್ಷಕರ ಸೌಹಾರ್ದ ಭವನ ಉದ್ಘಾಟನೆ ನಡೆಯಲಿದೆ.
ಕಾರ್ಯಕ್ರಮದ ದಿವ್ಯಸಾನಿಧ್ಯ : ಶ್ರೀ ಷ| ಬ್ರ| ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮದ್ ರಂಭಾಪುರಿ ಖಾಸಾ ಶಾಖಾ ಶ್ರೀಮನ್ ಮಹಾಸಂಸ್ಥಾನ, ಮಳಲಿಮಠ, ಶಿವಮೊಗ್ಗ ಜಿಲ್ಲೆ ಉದ್ಘಾಟಕರು : ಶ್ರೀ ಮಧು ಬಂಗಾರಪ್ಪ, ಸನ್ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ ಇವರು ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ ಬಿ.ವೈ. ರಾಘವೇಂದ್ರ, ಶ್ರೀ ಅರಗ ಜ್ಞಾನೇಂದ್ರ, ಶ್ರೀ ಗೋಪಾಲಕೃಷ್ಣ ಬೇಳೂರು, ಶ್ರೀ ಕಿಮ್ಮನೆ ರತ್ನಾಕರ್, ಶ್ರೀ ಡಾ. ಆರ್.ಎಂ.ಮಂಜುನಾಥಗೌಡ, ಶ್ರೀ ಜಿ. ನಂಜನಗೌಡ, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಾಬಲೇಶ್ವರ ಹೆಗಡೆ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.