ಮಲೆನಾಡಿನಲ್ಲಿ ಶಾಂತಿಯುತ ಗಣೇಶೋತ್ಸವ!
– ಎಲ್ಲಿಯೂ ಗಲಾಟೆ ಇಲ್ಲ, ಅತ್ಯಂತ ಸಂಭ್ರಮದಿಂದ ಗಣೇಶೋತ್ಸವ
– ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಶಾಂತಿ ಮೆರೆದ ಮಲೆನಾಡಿಗರು
– ಸಾವಿರಾರು ಗಣಪತಿ ಇಟ್ಟು ಧಾರ್ಮಿಕ ಸೇವೆ
NAMMUR EXPRESS NEWS
ಶಿವಮೊಗ್ಗ / ಚಿಕ್ಕಮಗಳೂರು : ಮಲೆನಾಡಿನಲ್ಲಿ ಈ ಬಾರಿ ಗಣೇಶೋತ್ಸವ ಅಚ್ಚುಕಟ್ಟಾಗಿ ಹಾಗೂ ಶಾಂತಿಯುತವಾಗಿ ನಡೆದಿದೆ. ಗಣೇಶೋತ್ಸವವನ್ನು ಸಂಭ್ರಮದಿಂದ ಜನರು ಆಚರಣೆ ಮಾಡಿದ್ದಾರೆ, ಸುಮಾರು 15 ದಿನಗಳ ಕಾಲ ಗಣೇಶೋತ್ಸವವನ್ನು ಆಚರಣೆ ಮಾಡಿರುವ ಭಕ್ತರು ಎಲ್ಲಿಯೂ ಕೂಡ ಚಿಕ್ಕ ಗಲಾಟೆಗಳು ನಡೆಯುದಂತೆ ಶಾಂತಿಯುತವಾಗಿ ಗಣೇಶೋತ್ಸವವನ್ನು ಆಚರಣೆ ಮಾಡಿದ್ದಾರೆ. ಭದ್ರಾವತಿಯಲ್ಲಿ ಸಣ್ಣ ಗಲಾಟೆಯನ್ನು ಹೊರತುಪಡಿಸಿ ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಎಲ್ಲಾ ಗಣೇಶೋತ್ಸವ ಸಮಿತಿಗಳು ಶಾಂತಿಯುತವಾಗಿ ಗಣೇಶೋತ್ಸವವನ್ನು ಆಚರಿಸಿ, ಈ ಬಾರಿ ಅದ್ದೂರಿ ಮೆರವಣಿಗೆ ಗಣೇಶೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದಾರೆ. ಜೊತೆಗೆ ಗಣೇಶೋತ್ಸವದ ವೇಳೆ ಅನೇಕ ಕಡೆ ಸಾಮಾಜಿಕ ಸೇವೆಯನ್ನು ಕೂಡ ಮಾಡಿದ್ದಾರೆ. ಈ ಮೂಲಕ ಮಲೆನಾಡಿನ ಜನ ಶಾಂತಿಯುತ ಗಣೇಶ ಹಬ್ಬಕ್ಕೆ ನಾಂದಿ ಹಾಡಿದ್ದಾರೆ.
ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಆಡಳಿತಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಎಲ್ಲಾ ಗಣೇಶ ಉತ್ಸವದಲ್ಲೂ ಕೂಡ ಎಲ್ಲಾ ರಾಜಕೀಯ ನಾಯಕರು, ಶಾಸಕರು, ಸಚಿವರು ಹಾಗೂ ಸ್ಥಳೀಯ ಜನ ನಾಯಕರು ಭಾಗವಹಿಸಿ ಶುಭವನ್ನ ಕೋರಿದ್ದಾರೆ. ಇನ್ನು ಈ ಬಾರಿ ಅತಿ ಹೆಚ್ಚು ಜನ ಶಿವಮೊಗ್ಗ ಹಿಂದೂ ಮಹಾ ಸಭಾ ಗಣಪತಿಯಲ್ಲಿ ಸೇರಿದ್ದು, ಗಣೇಶೋತ್ಸವದ ಫೋಟೋ, ವಿಡಿಯೋಗಳು ರಾಜ್ಯಮಟ್ಟದಲ್ಲಿ ವೈರಲ್ ಆಗಿದೆ. ಇನ್ನು ಉಳಿದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ಅದ್ದೂರಿ ಗಣೇಶೋತ್ಸವವನ್ನು ಆಚರಣೆ ಮಾಡಲಾಯಿತು. ಒಟ್ಟಿನಲ್ಲಿ ಈ ಬಾರಿಯ ಗಣೇಶೋತ್ಸವ ಅತ್ಯಂತ ಸುಸೂತ್ರವಾಗಿ ನಡೆದಿದೆ. ಪೊಲೀಸ್ ಇಲಾಖೆಯೂ ಉತ್ತಮ ಕೆಲಸ ಮಾಡಿದೆ.