ನಾನವನಲ್ಲ… ನಾನವನಲ್ಲ… ನಾನು ತಪ್ಪು ಮಾಡಿಲ್ಲ!
* ಪ್ರಾಸಿಕ್ಯೂಷನ್ ಗ್ರೀನ್ ಸಿಗ್ನಲ್ ಬರೀ ತನಿಖೆ ಅಷ್ಟೇ: ಸಿಎಂ
* ಕೋರ್ಟ್ ತೀರ್ಪು ಕುರಿತು ಸಿಎಂ ಸಿದ್ದರಾಮಯ್ಯ ಪತ್ರಿಕಾ ಪ್ರಕಟಣೆ
* ಸಿದ್ದರಾಮಯ್ಯ ರಾಜಿನಾಮೆಗೆ ಬಿಜೆಪಿ-ಜೆಡಿಎಸ್ ಪಟ್ಟು
* ಸಿಎಂ ವಿರುದ್ಧ ಬಿಜೆಪಿ ಷಡ್ಯಂತ್ರ: ಡಿಕೆಶಿ ಸಿಡಿಮಿಡಿ
NAMMUR EXPRESS NEWS
ಬೆಂಗಳೂರು: ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್ ಅನುಮತಿಯನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದು, ಸಿಎಂ ಸಿದ್ದರಾಮಯ್ಯ ದೊಡ್ಡ ಹಿನ್ನಡೆಯಾಗಿದೆ ಎಂದರೆ ತಪ್ಪಾಗಲಾರದು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ನಿರ್ಧಾರಕ್ಕೆ ಕೌಂಟರ್ ಕೊಡಲು ಸಿಎಂ ಸುಪ್ರೀಂ ಸಜ್ಜಾಗಿದ್ದು, ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸುತ್ತಿದ್ದಾರೆ.
ತಮ್ಮ ವಿರುದ್ಧ ಹೈಕೋರ್ಟ್ ನೀಡಿರುವ ತೀರ್ಪಿನ ಕುರಿತು ಮಾತನಾಡಿರುವ ಸಿಎಂ, ಸಿಕ್ಯೂಷನ್ಗೆ ಅನುಮತಿ ಕೊಟ್ಟಿಲ್ಲ. ಅದನ್ನು ತಿರಸ್ಕಾರ ಮಾಡಿದ್ದಾರೆ. 17ಎ ಪಿಸಿ ಆಕ್ಟ್ ಪ್ರಕಾರ ತನಿಖೆಗೆ ಕೊಟ್ಟಿದ್ದಾರೆ. ಇದು ಅಭಿಯೋಜನೆಯಲ್ಲ ಎಂದು ಹೇಳಿದ್ದಾರೆ.
ನಾನು ಹಾಕಿದ್ದ ರಿಟ್ ಅರ್ಜಿ ಮೇಲೆ ನ್ಯಾಯಾಧೀಶರು ಆದೇಶವನ್ನು ನೀಡಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿದ್ದೆ. ಅದರ ಮೇಲೆ ಪರ-ವಿರೋಧ ವಾದ ನಡೆಯಿತು. ಮಾಧ್ಯಮಗಳ ಮೂಲಕ ನಾನು ಆದೇಶವನ್ನು ನೋಡಿದ್ದೇನೆ. ಜಡ್ಜ್ಮೆಂಟ್ ಓದಿದ ನಂತರ ಪೂರ್ಣ ಪ್ರತಿಕ್ರಿಯೆ ನೀಡುವೆ. 17ಎ ಹಾಗೂ 19ಪಿಸಿ ಆ್ಯಕ್ಟ್ ಮೇಲೆ ಅನುಮತಿ ಕೊಡಿ ಎಂದು ದೂರುದಾರರು ಕೇಳಿದ್ದರು. ನ್ಯಾಯಾಲಯ 17Aಗೆ ಸೀಮಿತಿಗೊಳಿಸಿ 218 ಸೆಕ್ಷನ್ಅನ್ನು ಬಿಎನ್ಎಸ್ಎಸ್ ಅಡಿಯಲ್ಲಿ ಅದನ್ನು ಸಂಪೂರ್ಣ ತಿರಸ್ಕಾರ ಮಾಡಿದ್ದಾರೆ. ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿಲ್ಲ. ಅದನ್ನು ತಿರಸ್ಕಾರ ಮಾಡಿದ್ದಾರೆ. 17ಎ ಪಿಸಿ ಪ್ರಕಾರ ತನಿಖೆಗೆ ಕೊಟ್ಟಿದ್ದಾರೆ. ಇದು ಅಭಿಯೋಜನೆಯಲ್ಲ.
ಯಾವ ರೀತಿ ಹೋರಾಟ ಮಾಡಬೇಕೆಂದು ಕಾನೂನು ತಜ್ಞರ ಜತೆ ಚರ್ಚೆ ಮಾಡುವೆ. ಮುಂದಿನಕ್ರಮ ನಿರ್ಧರಿಸುವೆ. ನಾನು ಮಂತ್ರಿ ಮಂಡಲ ಹಾಗೂ ಪಿಸಿಸಿ ಅಧ್ಯಕ್ಷರ ಜೊತೆ ಚರ್ಚೆ ಮಾತ್ತೇನೆ. ಬಿಜೆಪಿ, ಜೆಡಿಎಸ್ನವರ ಸಂಚು, ಒಳಸಂಚು ರಾಜಭವನ ದುರ್ಬಳಕೆಗೆ ಹೆದರಲ್ಲ. ಕರ್ನಾಟಕದ ಜನ ನಮ್ಮಪಕ್ಷದ ಜತೆ ಇದ್ದಾರೆ. ಜನರ ಆಶೀರ್ವಾದ ನಮ್ಮಮೇಲಿದೆ. ನನ್ನ ಜತೆ ಡಿಸಿಎಂ ಸಹಿತ ಸಚಿವರು, ಶಾಸಕರು, ಕಾರ್ಯಕರ್ತರು, ಹೈಕಮಾಂಡ್ ಇದ್ದಾರೆ. ಕಾನೂನು ಹೋರಾಟ ಮಾಡಲು ಎಲ್ಲರೂ ಸಹಕಾರ ನೀಡುತ್ತಿದ್ದಾರೆ.
ಮೋದಿ ಸರ್ಕಾರ ಇಡೀ ದೇಶದಲ್ಲಿ ಸೇಡಿನ ರಾಜಕಾರಣ ಮಾಡುತ್ತಿದೆ. ಬಿಜೆಪಿ- ಜೆಡಿಎಸ್ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಮೊನ್ನೆ ನಡೆದ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದಾರೆ. ಯಾವಾಗಲೂ ಅಧಿಕಾರಕ್ಕೆ ಬಂದಿದ್ದು ಹಿಂಬಾಲಿಗಿನಿಂದ, ಹಣಬಲದಿಂದ, ಆಪರೇಷನ್ ಕಮಲದ ಮೂಲಕ.ನಾವು 136 ಸ್ಥಾನ ಗೆದ್ದ ಮೇಲೆ ಆಪರೇಷನ್ ಕಮಲ ಮಾಡಲು ಆಗಲ್ಲ, ಪ್ರಯತ್ನ ಮಾಡಿದರು. ದುಡ್ಡು ಕೊಟ್ಟು ಶಾಸಕರನ್ನು ಕೊಳ್ಳಲು ಪ್ರಯತ್ನಿಸಿದರು. ನಮ್ಮ ಶಾಸಕರು ದುಡ್ಡಿನ ಹಿಂದೆ ಬೀಳಲಿಲ್ಲ. ನಮ್ಮ ಬಡವರ ಪರವಾದ ಕಾರ್ಯಕ್ರಮ ವಿರೋಧ ಮಾಡಿದರು. ನಮ್ಮಗ್ಯಾರೆಂಟಿ ಯೋಜನೆಗೆ ವಿರೋಧ ಮಾಡಿದರು. ಈಗಲೂ ವಿರೋಧಿಸುತ್ತಿದ್ದಾರೆ. ಅವರು ಯಾವಾಗಲೂ ಸಾಮಾಜಿಕ ನ್ಯಾಯಕ್ಕೆ ವಿರೋಧ ಇದ್ದಾರೆ. ಬಿಜೆಪಿಯವರು ಇಡೀ ದೇಶದಲ್ಲಿ ಮಾಡಿದ ರೀತಿಯಲ್ಲೇ ನಮ್ಮ ಕಾಂಗ್ರೆಸ್ ಸರ್ಕಾರ ಅಲುಗಾಡಿಸಬೇಕು, ಕೆಟ್ಟ ಹೆಸರು ತರಬೇಕು, ಕಪ್ಪುಮಸಿ ಬಳಿಯಬೇಕೆಂದು ಸಂಚು ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಏನಿದೆ?
ಬೆಂಗಳೂರು: ಹೈ ಕೋಟ್೯ ತೀರ್ಪು ಕುರಿತು ಸಿಎಂ ಸಿದ್ದರಾಮಯ್ಯ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ನ್ಯಾಯಾಲಯವು ಸೆಕ್ಷನ್ 218 ರ ಅಡಿ ರಾಜ್ಯಪಾಲರು ನೀಡಿದ ಅಭಿಯೋಜನೆಯನ್ನು ನ್ಯಾಯಾಲಯ ಸಂಪೂರ್ಣವಾಗಿ ತಿರಸ್ಕರಿಸಿದೆ. ರಾಜ್ಯಪಾಲರ ಆದೇಶದಲ್ಲಿನ ಸೆಕ್ಷನ್ 17 ಎ ಗೆ ಮಾತ್ರ ನ್ಯಾಯಮೂರ್ತಿಗಳು ಸೀಮಿತಗೊಳಿಸಿದ್ದಾರೆ. ಯಾವುದೇ ತನಿಖೆಗೆ ಹಿಂಜರಿಯುವುದಿಲ್ಲ. ಕಾನೂನು ಅಡಿ ಅಂತಹ ತನಿಖೆಗೆ ಅವಕಾಶ ಇದೆಯೋ ಇಲ್ಲವೋ ಎಂಬ ಬಗ್ಗೆ ತಜ್ಞರ ಜೊತೆ ಸಮಾಲೋಚಿಸುತ್ತೇನೆ. ಕಾನೂನು ತಜ್ಞರ ಜೊತೆ ಚರ್ಚಿಸಿ ಹೋರಾಟದ ರೂಪುರೇಷೆ ನಿರ್ಧರಿಸುತ್ತೇನೆ ಎಂದಿದ್ದಾರೆ.
ಸಿದ್ದರಾಮಯ್ಯ ರಾಜಿನಾಮೆಗೆ ಬಿಜೆಪಿ-ಜೆಡಿಎಸ್ ಒತ್ತಾಯ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ರಾಜಿನಾಮೆಗೆ ಒತ್ತಾಯಿಸಿದರು. ಬಿಜೆಪಿ ಪಕ್ಷ ಕಳೆದ ಕೆಲ ತಿಂಗಳಿಂದ ಭ್ರಷ್ಟ ಕಾಂಗ್ರೆಸ್ ವಿರುದ್ಧ ನಿರಂತರ ಹೋರಾಟ ಮಾಡಿಕೊಂಡು ಬಂದಿದೆ. ವಾಲ್ಮೀಕಿ ನಿಗಮದ ಹಗರಣ ನಂತರ ಮುಡಾ ಹಗರಣವನ್ನು ಕೈಗೆತ್ತಿಕೊಂಡೆವು. ಸ್ವತಃ ಸಿದ್ದರಾಮಯ್ಯ ಕುಟುಂಬವೇ ನೇರವಾಗಿ ಭಾಗಿಯಾಗಿತ್ತು. ಕಾನೂನಿನಲ್ಲಿ ಎಲ್ಲರೂ ಒಂದೇ ಎಂದು ಕೋರ್ಟ್ ತೀರ್ಪು ನೀಡಿದೆ. ರಾಜ್ಯಪಾಲರ ಮೇಲೆ ಆರೋಪ ಬಿಟ್ಟು, ಹೈಕೋರ್ಟ್ ತೀರ್ಪು ಗೌರವಿಸಬೇಕು. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ, ಭ್ರಷ್ಟಾಚಾರ ಕಳಂಕ ಹೊತ್ತ ಸಿಎಂ ಸಿದ್ದರಾಮಯ್ಯ ರಾಜಿನಾಮೆ ಕೊಡಬೇಕು.
ವಾಲ್ಮೀಕಿ ನಿಗಮದ ಹಗರಣ ಆದಾಗ ಭ್ರಷ್ಟಾಚಾರ ಆಗಿಲ್ಲ ಅಂದಿದ್ದರು. ಬಳಿಕ ಸದನದಲ್ಲಿ ಸಿಎಂ ಅವರೇ ಹಗರಣ ಆಗಿದೆ ಎಂದು ಒಪ್ಪಿಕೊಂಡಿದ್ದಾರೆ. ಮುಡಾ ವಿಚಾರದಲ್ಲಿ ಕೂಡ ನಮ್ಮ ಕುಟುಂಬದ ಪಾತ್ರ ಇಲ್ಲ ಅಂದಿದ್ದರು. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಾಗ, ಅವರ ಮೇಲೆ ಆರೋಪ ಮಾಡಿದ್ದಾರೆ ರಾಜ್ಯಪಾಲರು ಕೊಟ್ಟ ತನಿಖೆ ಮಾಡುವ ಪ್ರಕರಣ ಸರಿ ಇದೆ ಎಂದು ಹೇಳಿದ್ದಾರೆ.
ಸಿಎಂ ವಿರುದ್ಧ ಬಿಜೆಪಿ ಷಡ್ಯಂತ್ರ : ಡಿಕೆ ಶಿವಕುಮಾರ್
“ನಮ್ಮ ಮುಖ್ಯಮಂತ್ರಿಗಳು ಯಾವುದೇ ತಪ್ಪು ಮಾಡಿಲ್ಲ, ಅವರು ಯಾವುದೇ ಹಗರಣದಲ್ಲೂ ಭಾಗಿಯಾಗಿಲ್ಲ. ಅವರ ವಿರುದ್ಧ ಬಿಜೆಪಿ ಷಡ್ಯಂತ್ರ ರೂಪಿಸುತ್ತಿದೆ. ಯಾವುದೇ ತನಿಖೆ ನಡೆದರೂ ಅವರು ದೋಷಮುಕ್ತರಾಗುತ್ತಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿರುವ ಬಗ್ಗೆ ಮಾಧ್ಯಮಗಳು ಗಮನ ಸೆಳೆದಾಗ, “ಬಿಜೆಪಿಯವರು ನನ್ನ ಮೇಲೆ ಹೇಗೆ ಷಡ್ಯಂತ್ರ ರೂಪಿಸಿ ಕೇಸ್ ದಾಖಲಿಸಿ, ಜೈಲಿಗೆ ಹಾಕಿದರೋ ಅದೇ ರೀತಿ ನಮ್ಮ ಮುಖ್ಯಮಂತ್ರಿಗಳ ವಿರುದ್ಧವೂ ಷಡ್ಯಂತ್ರ ರೂಪಿಸುತ್ತಿದ್ದಾರೆ. ಭಗವಂತನ ಕೃಪೆಯಿಂದ ನಾನು ಜೈಲಿಗೆ ಹೋದ ಪ್ರಕರಣ ಕೂಡ ವಜಾಗೊಂಡಿದೆ” ಎಂದು ತಿಳಿಸಿದ್ದಾರೆ.