ಬಾಳೆಹೊನ್ನೂರಿನಲ್ಲಿ ಕಳೆಗಟ್ಟಿದ ನವರಾತ್ರಿ ಸಂಭ್ರಮ..!!
-ಶ್ರೀದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯಿಂದ ಆಯೋಜನೆ
– 15 ನೇ ವರ್ಷದ ನವರಾತ್ರಿ ಪೂಜಾ ಮಹೋತ್ಸವ
NAMMUR EXPRESS NEWS
ಎನ್ ಆರ್ ಪುರ/ಬಾಳೆಹೊನ್ನೂರು: ಆಕ್ಟೋಬರ್ 3 ರಿಂದ 12ರವರೆಗೆ ನಡೆಯಲಿರುವ ನವರಾತ್ರಿ ಉತ್ಸವಕ್ಕೆ ಬಾಳೆಹೊನ್ನೂರು ಸಜ್ಜಾಗುತ್ತಿದೆ. ಇಲ್ಲಿನ ಶ್ರೀದುರ್ಗಾದೇವಿ ಸನ್ನಿಧಿಯಲ್ಲಿ ಶ್ರೀದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ವತಿಯಿಂದ ಆಯೋಜನೆ.
15ನೇ ವರ್ಷದ ನವರಾತ್ರಿ ಪೂಜಾ ಮಹೋತ್ಸವದಲ್ಲಿ ಅಕ್ಟೋಬರ್ 3 ರಂದು ಬೆಳಿಗ್ಗೆ 8:50 ಕ್ಕೆ ಶ್ರೀದೇವಿಯ ವಿಗ್ರಹ ಪ್ರತಿಷ್ಠಾಪನೆಯೊಂದಿಗೆ ಚಾಲನೆಗೊಳ್ಳುವ ನವರಾತ್ರಿ ಉತ್ಸವದಲ್ಲಿ ತಾಯಿಗೆ ಪ್ರತಿ ದಿನ ವಿಶೇಷ ಅಲಂಕಾರ ಹಾಗೂ ಪೂಜೆ,ವಿಜೃಂಭಣೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ.ಅಕ್ಟೋಬರ್ 11 ರಂದು ಮಹಾನವಮಿ,ಆಯುಧ ಪೂಜಾ ಕಾರ್ಯಕ್ರಮ “ಧರ್ಮ ದಸರಾ” ಸಂಜೆ 7 ಗಂಟೆಯಿಂದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪೀಠಾಧಿಪತಿಗಳು ಶ್ರೀ ಪೇಜಾವರ ಮಠ,ಉಡುಪಿಯ ಪರಮಪೂಜ್ಯ ಶ್ರೀಶ್ರೀವಿಶ್ವ ತೀರ್ಥ ಪ್ರಸನ್ನ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಲಿದ್ದಾರೆ. ಯುವ ವಾಗ್ಮಿಗಳಾದ ಕುಮಾರಿ ಹಾರಿಕ ಮಂಜುನಾಥ್ರಿಂದ ಅತಿಥಿ ನುಡಿ ನೈವೇದ್ಯ ನಡೆಯಲಿದೆ. 12 ರ ಬೆಳಿಗ್ಗೆ ಯಿಂದ ವಿಶೇಷ ಪೂಜಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಅನ್ನ ಸಂತರ್ಪಣೆ ನಡೆಯಲಿದ್ದ ಮಧ್ಯಾಹ್ನ 2 ರಿಂದ ಭಾರತೀಯ ಸಂಸ್ಕೃತಿ,ಜಾನಪದ ಕಲೆ ಮತ್ತು ಧರ್ಮವನ್ನೊಳಗೊಂಡ 20 ಕ್ಕೂ ಹೆಚ್ಚು ಕಲಾತಂಡಗಳು,ಸ್ಥಬ್ಧ ಚಿತ್ರಗಳ ವಿಶೇಷ ಆಕರ್ಷಣೆಗಳೊಂದಿಗೆ ಅದ್ದೂರಿ ಮೆರವಣಿಗೆಯೊಂದಿಗೆ ಶ್ರೀ ದುರ್ಗಾದೇವಿಯ ಜಲಸ್ತಂಭನ ಶೋಭಾಯಾತ್ರೆ ನಡೆಯಲಿದೆ. ಈ ಎಲ್ಲಾ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಾಳೆಹೊನ್ನೂರು ನವರಾತ್ರಿ ಉತ್ಸವವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಶ್ರೀದುರ್ಗಾದೇವಿ ನವರಾತ್ರಿ ಪೂಜಾಸಮಿತಿ ಸರ್ವರಿಗೂ ಸ್ವಾಗತ ಕೋರಿದೆ.