ಸರ್ಫೆಸಿ ಕಾಯ್ದೆ ನೆಪದಲ್ಲಿ ಬೆಳಗಾರರ ತೋಟ ಹರಾಜಿಗೆ ಆಕ್ರೋಶ
* ಮೂಡಿಗೆರೆ ಸೇರಿ ಕಾಫಿ ನಾಡ ರೈತರಿಂದ ಪ್ರತಿಭಟನೆಗೆ ಸಜ್ಜು
* ಅಕ್ಟೋಬರ್ 10 ರಂದು ಕೆನರಾ ಬ್ಯಾಂಕ್ ಮುಂದೆ ಪ್ರತಿಭಟನೆ
* ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಹೇಳಿಕೆ
NAMMUR EXPRESS NEWS
ಚಿಕ್ಕಮಗಳೂರು: ಸರ್ಫೆಸಿ ಕಾಯಿದೆ ನೆಪದಲ್ಲಿ ಬೆಳಗಾರರ ಕಾಫಿ ತೋಟಗಳನ್ನು ಹರಾಜು ಹಾಕಲು ಮುಂದಾಗುತ್ತಿರುವ ಕ್ರಮ ವಿರೋಧಿಸಿ ಕೆನರಾ ಬ್ಯಾಂಕ್ ಮಂಗಳೂರು ವಿಭಾಗೀಯ ಕಚೇರಿ ಮುಂದೆ ಅ.10 ರಂದು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಸರ್ಫೆಸಿ ಕಾಯ್ದೆ ಬಾಧಿತ ರೈತರು ಹೇಳಿದ್ದಾರೆ.
ಮೂಡಿಗೆರೆ ತಾಲ್ಲೂಕು ಬೆಳಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ, ಕಾಫಿ ಕೃಷಿ ಅಭಿವೃದ್ಧಿಪಡಿಸಲು ಬೆಳೆಗಾರರು ವಿವಿಧ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದು, ಹವಾಮಾನ ವೈಪರಿತ್ಯ, ಬೆಲೆ ಏರಿಳಿತ ಮತ್ತಿತರೆ ನಾನಾ ಕಾರಣದಿಂದ ಸಾಲ ಕಟ್ಟಲು ವಿಳಂಬವಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಬ್ಯಾಂಕುಗಳು ನೊಟೀಸ್ ನೀಡಿ ಸರ್ಫೆಸಿ ಕಾಯಿದೆ ಮುಂದಿಟ್ಟುಕೊಂಡು ಬೆಳೆಗಾರರ ಕಾಫಿ ತೋಟಗಳನ್ನು ಆನ್ಲೈನ್
ಮೂಲಕ ಹರಾಜು ಹಾಕುತ್ತಿದ್ದಾರೆ. ಅದರಲ್ಲೂ ಕೆನರಾ ಬ್ಯಾಂಕ್ ಮಾನವೀಯತೆಯನ್ನೇ ಮರೆತು ಓಟಿಎಸ್ಗೆ ಅವಕಾಶವನ್ನೂ ನೀಡದೆ ಸರ್ಫೆಸಿ ಮುಂದಿಟ್ಟುಕೊಂಡು `ಹರಾಜಿಗೆ ಮುಂದಾಗಿರುವುದನ್ನು ಖಂಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಳೆಗಾರರಾದ ಬಿ.ಸಿ. ದಯಾಕರ, ಮನೋಹರ, ತುಳಸೇಗೌಡ, ರೇವಣ್ಣಗೌಡ, ಮಾಣಿಮಕ್ಕಿ ಹೂವಪ್ಪ, ಉಷಾ ಸಂತೋಷ್, ಸುಬ್ರಮಣ್ಯ, ಸುರೇಂದ್ರ ಮತ್ತಿತರರಿದ್ದರು.
ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಖಂಡನೆ
ರೈತರ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸರ್ಫಸಿ ಕಾಯಿದೆಗೆ ಸೂಕ್ತ ತಿದ್ದುಪಡಿ ತರಬೇಕು. ಕಾಫಿ ಬೆಳೆಯುವ ರೈತರ ಸುಸ್ತಿ ಸಾಲಕ್ಕೆ ಕೇಂದ್ರ ಸರಕಾರ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ರೈತ, ಬೆಳೆಗಾರರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು