ತೀರ್ಥಹಳ್ಳಿಯಲ್ಲಿ ಇಂದು – ನಾಳೆ ವೈವಿಧ್ಯಮಯ ದಸರಾ!
– ಇಂದು ಕುಶಾವತಿ ಪಾರ್ಕಲ್ಲಿ ಕಾರ್ಯಕ್ರಮ: ಎಲ್ಲೆಡೆ ವಿದ್ಯುತ್ ಅಲಂಕಾರ
– ಸಾಧನೆಗೈದ ಗಣ್ಯರಿಗೆ ದಸರಾದಲ್ಲಿ ಗೌರವ ಸಮರ್ಪಣೆ
– ನಾಳೆ ಜಾನಪದ ತಂಡಗಳ ಜತೆ ವಿಶೇಷ ಮೆರವಣಿಗೆ: ಸಂಜೆ ಕೊಡುವ ಕಾರ್ಯಕ್ರಮ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ದಸರಾ ಉತ್ಸವ ಸಮಿತಿ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದೆ. ಈಗಾಗಲೇ 7 ದಿನ ದಸರಾ ನಡೆದಿದೆ. ತೀರ್ಥಹಳ್ಳಿ ಪಟ್ಟಣ ದಸರಾಕ್ಕೆ ಸಿಂಗಾರಗೊಂಡಿದೆ.
ಕುಶಾವತಿ ಪಾರ್ಕಿನಲ್ಲಿ ಇಂದು ಮತ್ತು ನಾಳೆ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಗುರುವಾರ ಯುವ ದಸರಾದಲ್ಲಿ ತೀರ್ಥಹಳ್ಳಿ ಕಲಾವಿದರು ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು.
ಇಂದು ಹಾಗೂ ನಾಳೆ ಸಂಜೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ರಾಮೇಶ್ವರ ದೇವಸ್ಥಾನದ ಧಾರ್ಮಿಕ ಪೂಜೆಗಳಲ್ಲಿ ಹಾಗೂ ದಸರಾ ಮೆರವಣಿಗೆಯಲ್ಲಿ ತಾಲ್ಲೂಕಿನ ಮಹಾಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಿಕೊಡುವಂತೆ ದಸರಾ ಸಮಿತಿ ಸಂಚಾಲಕ ಸಂದೇಶ್ ಜವಳಿ ವಿನಂತಿಸಿದ್ದಾರೆ.
– ಇಂದಿನ ಕಾರ್ಯಕ್ರಮಗಳು
ದಿನಾಂಕ: 11-10-2024ರ ಶುಕ್ರವಾರ
ಸ್ಥಳ: ನೆಹರೂ ಉದ್ಯಾನವನ ಕುಶಾವತಿ ಸಭಾ ಕಾರ್ಯಕ್ರಮದ ನಂತರ ಯುವ ದಸರಾ ತೀರ್ಥಹಳ್ಳಿ ಯುವ ಕಲಾವಿದರಿಂದ ಆಕರ್ಷಕ ಸಂಗೀತ:
ನೃತ್ಯ, ಜಾನಪದ ಕಾರ್ಯಕ್ರಮಗಳ ಸಂಗಮ ಸ್ಥಳೀಯ ಕಲಾವಿದರಿಂದ ನೃತ್ಯ ಪ್ರದರ್ಶನ ರಾತ್ರಿ 8ರಿಂದ ಕರ್ನಾಟಕದ ಖ್ಯಾತ ಗಾಯಕರ ಸಿಂಫೋನಿ ಮೆಲೋಡಿಸ್ ಕಲಾವಿದರಿಂದ
ಪ್ಯೂಷನ್ ಸಂಗೀತ
ದಿನಾಂಕ : 12-10-2024 ರ ಶನಿವಾರದ ಕಾರ್ಯಕ್ರಮಗಳು
ಚಾಮುಂಡೇಶ್ವರಿ ದೇವಿಯ ಅಂಬಾರಿಯೊಂದಿಗೆ ಶ್ರೀ ರಾಮೇಶ್ವರ ದೇವರ ಪಲ್ಲಕ್ಕಿ ಉತ್ಸವ, ಐತಿಹಾಸಿಕ, ಪೌರಾಣಿಕ, ಸಮಕಾಲೀನ ಕಥಾ ವಸ್ತುಗಳ ಸ್ತಬ್ದ ಚಿತ್ರಗಳು, ಕರ್ನಾಟಕದ ಸುಪ್ರಸಿದ್ದ ಜಾನಪದ ಕಲಾ ತಂಡಗಳ ಕಣ್ಣನ ಸೆಳೆಯುವ ಆಕರ್ಷಕ ದಸರಾ ಮೆರವಣಿಗೆ ಮಧ್ಯಾಹ್ನ 2 ರಿಂದ ಹೊರಡುವ ಸ್ಥಳ: ಶ್ರೀ ರಾಮೇಶ್ವರ ದೇವಸ್ಥಾನದ ಆವರಣದಿಂದ ಸಾಂಪ್ರದಾಯಿಕ ದಸರಾ ಮೆರವಣಿಗೆ ಮತ್ತು ಕಾರ್ಯಕ್ರಮಕ್ಕೆಮಾಜಿ ಗೃಹ ಸಚಿವರು, ಶಾಸಕ ಆರಗ ಜ್ಞಾನೇಂದ್ರರು ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಪ.ಪಂ.ಅಧ್ಯಕ್ಷ ಸಂದೇಶ ಜವಳಿ, ದಸರಾ ಉತ್ಸವ ಸಮಿತಿಯ ಉಪಾಧ್ಯಕ್ಷರಾದ ಬೇಗುವಳ್ಳಿ ಸತೀಶ್,ಆರ್.ಮದನ್, ಹೆದ್ದೂರು ನವೀನ್, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಾಳೇಹಳ್ಳಿ ಪ್ರಭಾಕರ್, ಗ್ಯಾರೆಂಟಿ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಶಚೀಂದ್ರ ಹೆಗ್ಡೆ ಪಾಲ್ಗೊಳ್ಳುವರು. ತಹಶೀಲ್ದಾರ್ ಜಕ್ಕಣ್ಣನವರ್, ದಸರಾ ಉತ್ಸವ ಸಮಿತಿ ಸಂಚಾಲಕ ಸಂದೇಶ ಜವಳಿ, ಖಜಾಂಚಿ ಸೊಪ್ಪುಗುಡ್ಡ ರಾಘವೇಂದ್ರ ಉಪಸ್ಥಿತರಿರುವರು.
:ಸಾಂಸ್ಕೃತಿಕ ಕಾರ್ಯಕ್ರಮ:
ಸಂಜೆ 6ರಿಂದ ಕರ್ನಾಟಕದ ಖ್ಯಾತ ನೃತ್ಯತಂಡ ಅರೆಹೊಳೆ ಪ್ರತಿಷ್ಠಾನ ಮಂಗಳೂರು ನಂದಗೋಕುಲ ಕಲಾವಿದರಿಂದ
ಶ್ವೇತಾ ಅರೆಹೊಳೆ ನಿರ್ದೇಶನದ ನೃತ್ಯವೈಭವ ಜರುಗಲಿದೆ.
ಸಾಧಕರಿಗೆ ಸನ್ಮಾನ
ಸಂಪ್ರದಾಯದಂತೆ ಈ ಬಾರಿಯೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ಸಾಧನೆಗೈದ ಗಣ್ಯರಿಗೆ ದಸರಾ ಗೌರವವನ್ನು ಸಮರ್ಪಿಸಲಾಗುವುದು. ಈ ಬಾರಿಯ ದಸರಾ ಗೌರವಕ್ಕೆ ಕಲರ್ಸ್ ಕನ್ನಡ ಚಾನಲ್ನ ಸ್ಪರ್ಧೆಯ ವಿಜೇತರಾದ ತೀರ್ಥಹಳ್ಳಿ ಹಾರೋಗೊಳಿಗೆ ಹುಲಿ ಕಾರ್ತಿಕ್, ಸಮಾಜ ಸೇವಕರಾಗಿ ದಕ್ಷಿಣ ಕನ್ನಡದ ಬೈಲೂರಿನಲ್ಲಿ” ಹೊಸಬೆಳಕು” ವೃದ್ದಾಶ್ರಮ ಮತ್ತು ಸೇವಾ ಸಂಸ್ಥೆಯನ್ನು ಪ್ರಾರಂಭಿಸಿ ಮುನ್ನಡೆಸುತ್ತಿರುವ ತೀರ್ಥಹಳ್ಳಿಯ ತನುಲಾ ತರುಣ್, ಇತ್ತೀಚೆಗೆ ತೀರ್ಥಹಳ್ಳಿಯಡೇಹಳ್ಳಿಕೆರೆಯಲ್ಲಿ ಆಕಸ್ಮಿಕವಾಗಿ ಜಾರಿ ಬಿದ್ದ ಓರ್ವ ನಾಗರೀಕನನ್ನು ತಮ್ಮ ಜೀವದ ಹಂಗಿಲ್ಲದೆ ಕಾಪಾಡಿದ ಹೆಡ್ ಕಾನ್ಸ್ಟೇಬಲ್ಗಳಾದ ರಾಮಪ್ಪ ಮತ್ತು ಲೋಕೇಶ್ ಇವರನ್ನು ಈ ಬಾರಿಯ ದಸರಾ ವೇದಿಕೆಯಲ್ಲಿ ಗೌರವಿಸಲಾಗುವುದು.