ತೀರ್ಥಹಳ್ಳಿಯಲ್ಲಿ ದಸರಾ ರಂಗು ಜೋರು!
– ತೀರ್ಥಹಳ್ಳಿ ಪಟ್ಟಣದ ಎರಡು ಕಡೆ ವಾಹನ ನಿಲುಗಡೆ ನಿಷೇಧ
– ಪೊಲೀಸರಿಂದ ತೆರವು ಕಾರ್ಯಾಚರಣೆ: ತೀರ್ಥಹಳ್ಳಿಯಲ್ಲಿ ಎಲ್ಲಡೆ ಹುಲಿಗಳ ಸದ್ದು
– ದಸರಾ ಮೆರವಣಿಗೆಗೆ ಸಿದ್ಧತೆ: ದೇವಸ್ಥಾನಗಳಲ್ಲಿ ವಿಶೇಷ ಪೂಜೆ
– ಸಂಜೆ ಜಾನಪದ ಮೆರವಣಿಗೆಯೊಂದಿಗೆ ಬನ್ನಿ ಮಂಟಪದಲ್ಲಿ ಪೂಜೆ
– ಹುಲಿ ವೇಷ ಸ್ಪರ್ಧೆಗೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಸಿದ್ಧತೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ದಸರಾ ಸಂಭ್ರಮ ಜೋರಾಗಿದ್ದು, ಇದೀಗ ಎಲ್ಲಾ ರೀತಿಯ ಸಿದ್ಧತೆಗಳು ಕೂಡ ಜೋರಾಗಿದೆ. ಇನ್ನು ತೀರ್ಥಹಳ್ಳಿ ಪಟ್ಟಣದ ಎರಡು ಕಡೆ ಮೆರವಣಿಗೆ ಹಿನ್ನಲೆಯಲ್ಲಿ ವಾಹನ ನಿಲುಗಡೆಯನ್ನ ನಿಷೇಧ ಮಾಡಲಾಗಿದೆ. ಈಗಗಾಲೇ ನಿಲುಗಡೆ ಮಾಡಿರುವ ವಾಹನದ ಮಾಲೀಕರಿಗೆ ವಾಹನಗಳನ್ನು ತೆರವುಗೊಳಿಸುವಂತೆ ಪೊಲೀಸ್ ಇಲಾಖೆ ಸೂಚನೆಯನ್ನು ನೀಡುತ್ತಿದ್ದಾರೆ. ಎರಡು ಕಡೆ ತಂತಿಯನ್ನ ಬಿಗಿಯಲಾಗಿದ್ದು, ವಾಹನ ಸಂಚಾರ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ತೀರ್ಥಹಳ್ಳಿ ದಸರಾದ ಅಂಗವಾಗಿ ಈಗಾಗಲೇ ಪಟ್ಟಣದ ಎಲ್ಲೆಡೆ ಹುಲಿಗಳ ಸಂಭ್ರಮ ಕಂಡು ಬರುತ್ತಿದೆ. ದಸರಾ ಹಬ್ಬದ ಮೆರಗು ಹೆಚ್ಚುತ್ತಿದೆ.
ದಸರಾ ಮೆರವಣಿಗೆ: ಸಾವಿರಾರು ಜನರು ಬಾಗಿ
ಚಾಮುಂಡೇಶ್ವರಿ ದೇವರ ಅಂಬಾರಿಯೊಂದಿಗೆ ಆಕರ್ಷಕ ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗಿಯಾಗುವ ಸಾಧ್ಯತೆ ಇದೆ. ನಾಡಿನ ಹೆಸರಾಂತ ಕಲಾವಿದರು ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ. ಸ್ತಬ್ದ ಚಿತ್ರಗಳ ಮೆರವಣಿಗೆ, ಕಲಾ ತಂಡಗಳ ಮೆರವಣಿಗೆ ನಡೆಯಲಿದೆ.
ರಾಜ್ಯ ಮಟ್ಟದ ಹುಲಿವೇಷ ಸ್ಪರ್ಧೆ
ರಾಜ್ಯಮಟ್ಟದ ಹುಲಿವೇಷ ಸ್ಪರ್ಧೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಸಂಜೆ ನಡೆಯಲಿದೆ. ಈಗಾಗಲೇ ರಾಜ್ಯದ ವಿವಿಧ ಭಾಗಗಳಿಂದ ಹುಲಿಗಳು ಆಗಮಿಸಿವೆ. ಇನ್ನೂ ವಿಶೇಷ ಕಾರ್ಯಕ್ರಮಕ್ಕೆ ತೀರ್ಥಹಳ್ಳಿ ಸಾಕ್ಷಿಯಾಗಲಿದೆ.ಸಂಜೆ ತೀರ್ಥಹಳ್ಳಿಯ ಕುಶಾವತಿ ಪಾರ್ಕ್ ನಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮಗಳ ಜೊತೆಗೆ ವೇದಿಕೆ, ಸಾಂಸ್ಕೃತಿಕ ಕಾರ್ಯಕ್ರಮ ಕೂಡ ಇದೆ. ಈ ಕಾರ್ಯಕ್ರಮಕ್ಕೆ ಸರ್ವರನ್ನು ಕೂಡ ಸಮಿತಿ ಸ್ವಾಗತಿಸಿದೆ.