ತೀರ್ಥಹಳ್ಳಿಯಲ್ಲಿ ಅದ್ದೂರಿ ದಸರಾಕ್ಕೆ ತೆರೆ!
– ತೀರ್ಥಹಳ್ಳಿ ಪಟ್ಟಣದಲ್ಲಿ ಸಾವಿರಾರು ಜನರಿಂದ ಮೆರವಣಿಗೆ ವೀಕ್ಷಣೆ
– ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಶುಭಾಶಯ
– ಸಂಜೆ ಅರೆಹೊಳೆ ಪ್ರತಿಷ್ಠಾನದ ಸಾಂಸ್ಕೃತಿಕ ಕಾರ್ಯಕ್ರಮದ ಸೊಬಗು
– ಕರಾವಳಿ ಹುಡುಗಿಯರ ಹುಲಿ ನೃತ್ಯ ಝಲಕ್
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ದಸರಾ ಸಂಭ್ರಮದೊಂದಿಗೆ 9 ದಿನಗಳ ಕಾಲ ನೆರವೇರಿತು. ರಾಮೇಶ್ವರ ದೇವಾಲಯದಿಂದ ಚಾಮುಂಡೇಶ್ವರಿ ದೇವಿಯನ್ನು ಅಲಂಕಾರ ಮಾಡಿ ಪೂಜೆ ಮಾಡಿ ಮೆರವಣಿಗೆ ಮೂಲಕ ಪಟ್ಟಣದಲ್ಲಿ ರಾಜ ಬೀದಿ ಮೆರವಣಿಗೆಯಲ್ಲಿ ಚಾಮುಂಡೇಶ್ವರಿ ದೇವರ ಅಂಬಾರಿಯೊಂದಿಗೆ ಆಕರ್ಷಕ ಮೆರವಣಿಗೆಯಲ್ಲಿ ಕುಶಾವತಿಗೆ ತರಲಾಯಿತು. ತೀರ್ಥಹಳ್ಳಿ ಪಟ್ಟಣದ ಸುತ್ತ ಸಾವಿರಾರು ಜನ ಭಾಗಿಯಾಗಿದರು. ಸ್ತಬ್ದ ಚಿತ್ರಗಳ ಮೆರವಣಿಗೆ, ಕಲಾ ತಂಡಗಳ ಮೆರವಣಿಗೆ ಗಮನ ಸೆಳೆಯಿತು. 8 ಟ್ಯಾಬ್ಲೋಗಳ ಪ್ರದರ್ಶನ ಗಮನ ಸೆಳೆದಿತ್ತು. ಒಂದರಕ್ಕಿಂತ ಒಂದು ಚೆನ್ನಾಗಿದ್ದವು. ಶಾಸಕ ಆರಗ ಜ್ಞಾನೇಂದ್ರ, ಸಹಕಾರ ನಾಯಕ ಮಂಜುನಾಥ್ ಗೌಡ, ಪಪಂ ಅಧ್ಯಕ್ಷರಾದ ಅಸಾದಿ, ಉಪಾಧ್ಯಕ್ಷರಾದ ಗೀತಾ ರಮೇಶ್, ದಸರಾ ಸಮಿತಿ ಸಂಚಾಲಕ ಸಂದೇಶ್ ಜವಳಿ, ತಹಸೀಲ್ದಾರ್ ಜಕ್ಕಣ್ಣ ಗೌಡ, ರಾಘವೇಂದ್ರ ಸೊಪ್ಪುಗುಡ್ಡೆ, ಸೇರಿದಂತೆ ಎಲ್ಲಾ ನಾಯಕರು ಹಾಜರಿದ್ದರು.
ಬನ್ನಿ ಪೂಜೆಯೊಂದಿಗೆ ತೀರ್ಥಹಳ್ಳಿ ದಸರಾ ಸಂಪನ್ನಗೊಂಡಿತು. ಶಾಸಕ ಆರಗ ಜ್ಞಾನೇಂದ್ರ, ತಹಸೀಲ್ದಾರ್ ಜಕ್ಕಣ್ಣ ಗೌಡರ್ ಅವರು ಕುಶಾವತಿಯ ನೆಹರು ಪಾರ್ಕಿನಲ್ಲಿ ಬನ್ನಿ ಪೂಜೆ ನೆರವೇರಿಸಿದರು. ಬಳಿಕ ಜನರು ಘೋಷಣೆ ಕೂಗಿ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡರು.