ತೀರ್ಥಹಳ್ಳಿ ಗೆಳೆಯರ ಬಳಗದ ಹುಲಿ ವೇಷ ಸ್ಪರ್ಧೆ ಸೂಪರ್!
– ಮೊದಲ ವರ್ಷವೇ ಗಮನ ಸೆಳೆದ ಸ್ಪರ್ಧೆ: ನಿಂತು ವೀಕ್ಷಿಸಿದ ಜನ
– ಮಂಗಳೂರು ಹುಡುಗಿಯರ ಹುಲಿ ವೇಷ ನರ್ತನಕ್ಕೆ ಜನರು ಫಿದಾ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ, ಹುಲಿ ಹೆಜ್ಜೆ ಪುರುಷರ ಹುಲಿ ಕುಣಿತ ಸ್ಪರ್ಧೆ ತೀರ್ಥಹಳ್ಳಿಯಲ್ಲಿ ಸಂಚಲನ ಮೂಡಿಸಿತು.
ಪತ್ರಕರ್ತ, ಕಾಂಗ್ರೆಸ್ ನಾಯಕ ವಿಶ್ವನಾಥ ಶೆಟ್ಟಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಡೀ ಶಾಂತವೇರಿ ಗೋಪಾಲಗೌಡ ರಂಗ ಮಂದಿರ ತುಂಬಿ ಹೋಗಿತ್ತು. ಅದರಲ್ಲೂ ಮಂಗಳೂರು ಮಹಿಳಾ ಹುಲಿ ವೇಷ ಕುಣಿತದ ನೃತ್ಯ ನೋಡುಗರ ಮೈ ಜುಮ್ ಎನಿಸುವಂತೆ ಮಾಡಿತು.
ಕರಾವಳಿ ಭಾಗದಲ್ಲಿ ನಡೆಯುತ್ತಿದ್ದ ಹುಲಿ ವೇಷ ಸ್ಪರ್ಧೆ ಇದೀಗ ಹೈಟೆಕ್ ಸ್ಪರ್ಶದೊಂದಿಗೆ ಸಾವಿರಾರು ಜನರ ಜತೆ ತೀರ್ಥಹಳ್ಳಿಯಲ್ಲಿ ನಡೆಯಿತು. ಹುಲಿ ವೇಷ ಸ್ಪರ್ಧೆ ಉದ್ಘಾಟನೆ ಮಾಡಿದ ಸಹಕಾರ ನಾಯಕ ಆರ್. ಎಂ. ಮಂಜುನಾಥ ಗೌಡ ಮಾತನಾಡಿ, ಮೊದಲ ಬಾರಿಗೆ ಕರಾವಳಿಯಲ್ಲಿ ನಡೆಯುತ್ತಿದ್ದ ಕಲೆಗಳ ಸ್ಪರ್ಧೆ ಇದೀಗ ಮಲೆನಾಡಿಗೆ ತಂದಿದ್ದೀರಿ. ದಸರಾ ಪರಂಪರೆ ಇಂತಹ ಗ್ರಾಮೀಣ ಕಲೆಗಳನ್ನು ಗುರುತಿಸಲು ಇಂತಹ ವೇದಿಕೆ ಸೂಕ್ತವಾಗಿದೆ ಎಂದರು. ವೇದಿಕೆಯಲ್ಲಿ ಎಸ್ಪಿ ಕೇಟರಿಂಗ್ ಮಾಲೀಕ ಪ್ರದೀಪ್, ಕೆಸ್ತೂರು ಮಂಜುನಾಥ್ ಸೇರಿದಂತೆ ಹಲವರು ಇದ್ದರು. ತೀರ್ಥಹಳ್ಳಿಯ ಒಟ್ಟು 23 ಹುಲಿಗಳು ಭಾಗವಹಿಸಿದ್ದವು. ಉತ್ತಮ ಆಯೋಜನೆ ಗಮನ ಸೆಳೆಯಿತು.
ಸ್ಪರ್ಧೆ ಮಧ್ಯ ಪಟಾಕಿಗಳ ಚಿತ್ತಾರ ಗಮನ ಸೆಳೆಯಿತು. ಪ್ರಮುಖರಾದ ರಾಘವೇಂದ್ರ ಶೆಟ್ಟಿ, ಸುಮಂತ್ ಚಿಂಚಿ, ಅಮರನಾಥ ಶೆಟ್ಟಿ, ನಾಗರಾಜ್ ಕುರುವಳ್ಳಿ, ವಿಕ್ರಮ್ ಶೆಟ್ಟಿ, ಪ್ರಶೋದ, ರಂಜನ ಕುಮಾರ್, ಸೇರಿದಂತೆ 50ಕ್ಕೂ ಹೆಚ್ಚು ಆಯೋಜಕರು ಶ್ರಮಿಸಿದ್ದರು.
ವಿಜೇತರು ಯಾರು ಯಾರು?
ಮೊದಲ ಬಹುಮಾನ: ಅನಿಲ್ ಕೋಳಿಕಾಲು ಗುಡ್ಡ: 33333 ರೂ.
ದ್ವಿತೀಯ: ಅಜಿತ್ ಸೀಬಿನಕೆರೆ 22222 ರೂ
ತೃತೀಯ: ಧನುಷ್ ಶೆಟ್ಟಿ ಮಿಲ್ಕೆರಿ 11111 ರೂ.