ರಾಮೇಶ್ವರ ದೇವಸ್ಥಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ವ್ಯವಸ್ಥೆ
– ತೀರ್ಥಹಳ್ಳಿ ರೋಟರಿ ಕ್ಲಬ್ ಮಾನವೀಯ ಸೇವೆಗೆ ಮೆಚ್ಚುಗೆ
– ಕೋಣಂದೂರು: ಗ್ರೀನ್ ಹಾರ್ಟ್ ಕೆಫೆಯಲ್ಲಿ ಗಿಡಗಳಿಗೆ ಕಸಿ ಮಾಡುವ ಪ್ರಾತ್ಯಕ್ಷಿಕೆ!
NAMMUR EXPRESS NEWS
ತೀರ್ಥಹಳ್ಳಿ: ಎಲ್ಲಾ ಕಾಲದಲ್ಲೂ ಶುದ್ಧ ಕುಡಿಯುವ ನೀರು ಎಲ್ಲರಿಗೂ ಸಿಗುವಂತಾಗಬೇಕು ಅದು ಇಂದಿನ ಅಗತ್ಯ ಕೂಡ ಹೌದು ಎಂದು ಡಾ. ಜೀವೇಂದರ್ ಜೈನ್ ಹೇಳಿದ್ದಾರೆ. ಶ್ರೀರಾಮೇಶ್ವರ ದೇವಸ್ಥಾನ ತೀರ್ಥಹಳ್ಳಿ ಇಲ್ಲಿ ರೋಟರಿ ಕ್ಲಬ್,ತೀರ್ಥಹಳ್ಳಿ ನೀಡಿದ ಎರಡು ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಹಲವಾರು ಶಾಲೆಗಳಿಗೆ ಮಕ್ಕಳಿಗೋಸ್ಕರ ಕುಡಿಯುವ ನೀರಿನ ಘಟಕವನ್ನು ತೀರ್ಥಹಳ್ಳಿ ರೋಟರಿ ಕ್ಲಬ್ ವಿತರಿಸಿದೆ ಹಾಗೂ ಇದರ ಜೊತೆಯಲ್ಲಿ ಪ್ರತಿನಿತ್ಯ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಮತ್ತು ನಿತ್ಯ ಅನ್ನ ದಾಸೋಹದ ಛತ್ರಕ್ಕೆ ಶುದ್ಧ ಕುಡಿಯುವ ನೀರು ಕಲ್ಪಿಸಿರುವುದು ತುಂಬಾ ಸತ್ಕಾರ್ಯವಾಗಿದೆ ಎಂದು ತಿಳಿಸಿದರು.
ರೊ. ಅನಿಲ್ ಕುಮಾರ್, ಅಧ್ಯಕ್ಷರು ರೋಟರಿ ಕ್ಲಬ್ ,ತೀರ್ಥಹಳ್ಳಿ ಇವರು ಮಾತನಾಡಿ ರೋಟರಿ ಕ್ಲಬ್ಬಿನ ಹಲವು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಈ ಘಟಕವು ಸಹ ಒಂದು ಮತ್ತು ಶ್ರೀ ರಾಮೇಶ್ವರ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರು ನೀಡುವುದು ನಮಗೆ ಹರ್ಷ ತಂದಿದೆ,ದೇವರ ಸೇವೆ ಮಾಡುವ ಅವಕಾಶ ನಮಗೂ ಸಿಕ್ಕಿದೆ ಹಾಗೂ ಎಲ್ಲಾ ರೋಟರಿ ಕ್ಲಬ್ಬಿನ ಸದಸ್ಯರ ನೆರವನ್ನು ಈ ಸಮಯದಲ್ಲಿ ಸ್ಮರಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ರೊ ಎಸ್. ನಾಗರಾಜ್ , ಮಾಜಿ ಅಧ್ಯಕ್ಷರು ರೋಟರಿ ಕ್ಲಬ್ ತೀರ್ಥಹಳ್ಳಿ ,ಇವರು ಶ್ರೀ ರಾಮೇಶ್ವರ ದೇವಸ್ಥಾನದ ಅನ್ನದಾಸೋಹ ಸಮಿತಿಗೆ ಈ ಶುದ್ಧ ಕುಡಿಯುವ ನೀರಿನ ಘಟಕ ಬಹಳ ಮುಖ್ಯವಾಗಿತ್ತು ಹಾಗೂ ಎಲ್ಲಾ ರೋಟರಿ ಸದಸ್ಯರು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ ಎಂದು ತಿಳಿಸಿದರು.
ರೊ. ಭರತ್ ಕುಮಾರ್ ಕೋಡ್ಲು ನಿಕಟಪೂರ್ವ ಅಧ್ಯಕ್ಷರು, ರೊ ಯುವರಾಜ್, ರೊ ಕೆ ಎಲ್ ಪ್ರಿತ್ವಿ,ರೊ ಮಂಜುನಾಥ್ ನಿಕಟಪೂರ್ವ ಕಾರ್ಯದರ್ಶಿ, ರೊ ಉಮಾ ಸ್ವಾಮಿ, ರೊ ಮುರಳಿ , ರೊ ನಾಗರಾಜ್, ಶ್ರೀ ಕಿರಣ್ ಕುಮಾರ್, ರೊ ಪ್ರತಿಮಾ ರೊ ರಾಘವೇಂದ್ರ ಆಚಾರ್ಯ , ರೊ ಮನು ಸಂಪಿಗೆ ಸರಿ,ರೊ ವಿಶಾಲ್ ಕುಮಾರ್, ರೊ ಜ್ಯೋತಿ ದಿಲೀಪ್, ರೊ ವಾಣಿ ಗಣೇಶ್ , ಶ್ರೀ ರವೀಶ್ ಮತ್ತು ಶ್ರೀರಾಮೇಶ್ವರ ಅನ್ನದಾಸೋಹ ಸಮಿತಿಯ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಗ್ರೀನ್ ಹಾರ್ಟ್ ಕೆಫೆಯಲ್ಲಿ ಗಿಡಗಳಿಗೆ ಕಸಿ ಮಾಡುವ ಪ್ರಾತ್ಯಕ್ಷಿಕೆ!
ಕೋಣಂದೂರು: ಮಹಿಳಾ ಸಹಕಾರ ಶಿಕ್ಷಣ ಅಭಿವೃದ್ಧಿ ಯೋಜನೆ ಶಿವಮೊಗ್ಗ ಇದರ ಅಡಿಯಲ್ಲಿ ಮಹಿಳೆಯರಿಗೆ ಗಿಡಗಳಿಗೆ ಕಸಿಮಾಡುವ ವಿಧಾನದ ಪ್ರಾತ್ಯಕ್ಷಿಕೆಯನ್ನು ಕೋಣಂದೂರು ಗ್ರೀನ್ ಹಾರ್ಟ್ ಕೆಫೆಯಲ್ಲಿ ಆಯೋಜಿಸಲಾಗಿತ್ತು. ಕಸಿಮಾಡುವ ಅನೇಕ ವಿಧಾನಗಳನ್ನ ಖ್ಯಾತ ವ್ಯಂಗ್ಯಚಿತ್ರಕಾರ ನಟರಾಜ್ ಅರಳಸುರಳಿಯವರು ವಿವರಿಸುವುದರ ಮೂಲಕ ಮಾಹಿತಿಯನ್ನು ನೀಡಿದರು.
ಕಸಿ ಮಾಡುವುದನ್ನ ಖುಷಿಗಾಗಿ ಮಾಡುತ್ತ ತದನಂತರ ಇದನ್ನೆ ಅಭ್ಯಾಸ ಮಾಡಿಕೊಂಡು ಉದ್ಯೋಗವನ್ನಾಗಿಸಿ ಅನೇಕರು ಜೀವನವನ್ನೆ ಕಟ್ಟಿಕೊಳ್ಳಲು ಸಹಕಾರಿಯಾಗಿದ್ದು. ಮಲೆನಾಡಿನ ಪರಿಸರಕ್ಕೆ ಅನುಗುಣವಾಗಿ ಹೇಗೆ ಗಿಡಗಳ ಕಡ್ಡಿಗಳನ್ನ ತಂದು ಇಲ್ಲಿನ ಗಿಡಗಳ ಕೊಂಬೆಗಳಿಗೆ ಕಸಿಮಾಡಿಕೊಂಡರೆ ಅವುಗಳನ್ನ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತೆ ಇಲ್ಕದೆ ಹೋದರೆ ಬೇರೆ ಹವಾಗುಣದ ಗಿಡಗಳನ್ನ ನೇರವಾಗಿ ತಂದು ಇಲ್ಲಿ ನೆಟ್ಟರೆ ಬದುಗಿಸಿಕೊಳ್ಳುವುದು ಕಷ್ಟ ಇಲ್ಲಿನ ಗಿಡಗಳಿಗಳಿಗೆ ಕಸಿಮಾಡಿಕೊಂಡರೆ ಅನುಕೂಲವಾಗತ್ತೆ ಎಂದು ತಿಳಿಸಿದರು. ಹಾಗು ಅನೇಕ ಗಿಡಗಳನ್ನ ಪ್ರಾತ್ಯಕ್ಷಿಕೆ ಯ ಮೂಲಕ ಕಸಿಮಾಡುವುದನ್ನ ತೋರಿಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಯೋಜನೆ ಅಧಿಕಾರಿ ಲಕ್ಷ್ಮೀ ಆನಂದ್, ಪತ್ರಕರ್ತ ಮುರುಗರಾಜ್ ಉಪಸ್ಥಿತರಿದ್ದರು. ಬಹುಮುಖ ಪ್ರತಿಭೆ ಮೈಗೂಡಿಸಿಕೊಂಡ ನಟರಾಜ್ ಅರಳಸುರಳಿಯವರನ್ನು ಸನ್ಮಾನಿಸಲಾಯಿತು. ಗ್ರೀನ್ ಹಾರ್ಟ್ ಮಾಲಿಕರಾದ ಟಿಎಪಿಸಿಎಂ ಎಸ್ ನಿರ್ದೇಶಕಿ ನಾಗರತ್ನ ಮುರುಗರಾಜ್ ಎಲ್ಲರನ್ನೂ ಸ್ವಾಗತಿಸಿ ಸತ್ಕರಿಸಿದರು.